ಸಕಾರಾತ್ಮಕ ಪತ್ರಿಕೋದ್ಯಮ ತರಗತಿ | ಸುದ್ದಿ ಸಂಗ್ರಹಿಸುವ ವೇಳೆ ಪತ್ರಕರ್ತನಲ್ಲಿ ಸಕಾರಾತ್ಮಕ ಯೋಚನೆ ಬೇಕು | ಹಿರಿಯ ಪತ್ರಕರ್ತ ಗಣೇಶ ಪ್ರಸಾದ ಪಾಂಡೇಲು

November 6, 2023
3:41 PM
ಅಂಬಿಕಾ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗ ಹಾಗೂ ದ ರೂರಲ್ ಮಿರರ್ ಡಿಜಿಟಲ್ ಮಿಡಿಯಾದ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗುತ್ತಿರುವ ಸಕಾರಾತ್ಮಕ ಪತ್ರಿಕೋದ್ಯಮ ತರಬೇತಿ ತರಗತಿಗಳ ಸರಣಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಯಾವುದೇ ಸುದ್ದಿ ಸಂಗ್ರಹದ ವೇಳೆ ಪತ್ರಕರ್ತನಲ್ಲಿ ಸಕಾರಾತ್ಮಕ ಮನೋಭಾವ ಇಲ್ಲದೇ ಇದ್ದಲ್ಲಿ ಉತ್ತಮ ವರದಿಗಳನ್ನು ನೀಡುವುದಕ್ಕೆ ಸಾಧ್ಯವಿಲ್ಲ. ಅದಕ್ಕಾಗಿ ಪೂರ್ವಾಗ್ರಹ ಇಲ್ಲದ, ಸಕಾರಾತ್ಮಕ ಮನಸ್ಥಿತಿಯಲ್ಲಿಯೇ ವರದಿಗೆ ತೆರಳಬೇಕು. ಹಾಗಿದ್ದಾಗ ಮಾತ್ರವೇ ಸಮಾಜಕ್ಕೆ ವರದಿಯ ಮೂಲಕ ಉತ್ತಮ ಸಂದೇಶ ನೀಡಲೂ ಸಾಧ್ಯ ಎಂದು ಹಿರಿಯ ಪತ್ರಕರ್ತ ಗಣೇಶ ಪ್ರಸಾದ ಪಾಂಡೇಲು ಹೇಳಿದರು.

ಅವರು ಪುತ್ತೂರಿನ ನಟ್ಟೋಜ ಪೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗ ಹಾಗೂ ದ ರೂರಲ್ ಮಿರರ್ ಡಿಜಿಟಲ್ ಮಿಡಿಯಾದ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗುತ್ತಿರುವ ಸಕಾರಾತ್ಮಕ ಪತ್ರಿಕೋದ್ಯಮ ತರಬೇತಿ ತರಗತಿಗಳ ನೆಲೆಯಲ್ಲಿ ಆಯೋಜಿಸಲಾಗುತ್ತಿರುವ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಕ್ರವಾರದಂದು ಮಾತನಾಡಿದರು.

ಸುದ್ದಿಯನ್ನು ಗ್ರಹಿಸುವುದು ಚಾಣಾಕ್ಯತನವನ್ನು ಬೇಡುವ ಕಲೆ. ನಮ್ಮ ಸುತ್ತಮುತ್ತ ನಡೆಯುವ ವಿಚಾರಗಳಲ್ಲಡಗಿದ ವಿಭಿನ್ನ ಆಯಾಮಗಳನ್ನು ಗುರುತಿಸಿ ಪ್ರಸ್ತುತಪಡಿಸಬೇಕು. ಹಾಗೆಂದು ಸಾಮಾನ್ಯ ವಿಚಾರಗಳನ್ನು ವಿಶಿಷ್ಟವೆಂದು ವೈಭವೀಕರಿಸದೆ ಅಸಾಮಾನ್ಯ ವಿಷಯಗಳಿಗೆ ಪ್ರಾಮುಖ್ಯತೆಯನ್ನು ನೀಡಬೇಕು. ಎಲ್ಲೂ ಸುದ್ದಿಯಾಗದ ಮಾಹಿತಿಯನ್ನು ಜನರಿಗೆ ಮನಮುಟ್ಟುವಂತೆ ತಿಳಿಯಪಡಿಸಬೇಕು, ಇಂತಹ ಸಂದರ್ಭಗಳಲ್ಲಿ ಪೂರ್ವಾಗ್ರಹ ಇಲ್ಲದ, ಸಕಾರಾತ್ಮಕ ಯೋಚನೆಗಳು ಇರಬೇಕು ಎಂದು  ಗಣೇಶ ಪ್ರಸಾದ ಪಾಂಡೇಲು ಹೇಳಿದರು.

ಯಾವುದೇ ಸುದ್ದಿಯನ್ನು ಮಾಧ್ಯಮದಲ್ಲಿ ಪ್ರಸ್ತುತಪಡಿಸುವ ಮೊದಲು, ಆ ಕುರಿತಾದ ಸಮಗ್ರ ಮಾಹಿತಿಯನ್ನು ಕಲೆಹಾಕಬೇಕು. ಬಾಯಿ ಮಾತಿನಿಂದ ಬಂದ ಸುದ್ದಿಯನ್ನು ಗಂಭೀರವಾಗಿ ಪರಿಗಣಿಸಿ, ಪ್ರಸಾರ ಮಾಡಿದರೆ ಅದು ಹಲವಾರು ಅನಾಹುತಗಳಿಗೆ ದಾರಿಮಾಡಿಕೊಡುತ್ತದೆ. ವಸ್ತುನಿಷ್ಠ ಹಾಗೂ ನಿಖರವಾಗಿ ಸುದ್ದಿಯನ್ನು ಬಿತ್ತರಿಸುವುದು ಪತ್ರಕರ್ತನ ಮೊದಲ ಆದ್ಯತೆಯಾಗಬೇಕು ಎಂದು ಹೇಳಿದರು.ಅನುವಾದ ಮಾಡುವುದೂ ಒಂದು ಕಲೆ. ಪದದಿಂದ ಪದಕ್ಕೆ ಅನುವಾದ ಮಾಡಿದಲ್ಲಿ ಅದರ ಅರ್ಥವೇ ಬೇರೆಯಾಗಿ ಎಡವಟ್ಟುಗಳು ನಡೆಯುವ ಸಾಧ್ಯತೆಯಿದೆ. ಆದ್ದರಿಂದ ವಿಷಯವನ್ನು ಅರ್ಥ ಮಾಡಿಕೊಂಡು ಭಾಷಾಂತರ ಮಾಡಿದಾಗ ಹೆಚ್ಚು ಪರಿಣಾಮಕಾರಿಯಾಗಿ ವಿಷಯ ಮಂಡಣೆ ಮಾಡಬಹುದು ಎಂದರು.

ರೂರಲ್ ಮಿರರ್ ಡಿಜಿಟಲ್ ಮಿಡಿಯಾದ ಸಂಸ್ಥಾಪಕ ಮಹೇಶ್ ಪುಚ್ಚಪಾಡಿ ಮಾತನಾಡಿ, ಸಮಾಜದಲ್ಲಿ ಕಂಡುಬರುವ ಋಣಾತ್ಮಕ ವಿಚಾರಗಳನ್ನು ಬದಿಗಿರಿಸಿ, ಧನಾತ್ಮಕ ಅಂಶಗಳನ್ನು ಪ್ರಸಾರ ಮಾಡುವ ಆಶಯ ಹೊಂದಿದ ರೂರಲ್ ಮಿರರ್ ಮಿಡಿಯಾದ ಯೋಜನೆಯು ಹೊಸ ಸಂಚಲನವನ್ನು ಮೂಡಿಸುತ್ತಿದೆ. ವಿದ್ಯಾರ್ಥಿಗಳು ಇಂತಹ ಅವಕಾಶವನ್ನು ಸದುಪಯೋಗಪಡಿಸಬೇಕು. ವಿದ್ಯಾರ್ಥಿ ಜೀವನದಿಂದಲೇ ಹೊಸತನವನ್ನು, ಸಕಾರಾತ್ಮಕತೆಯನ್ನು ಅಳವಡಿಸುವುದನ್ನು ಅರಿಯಬೇಕು ಎಂದರು.

ವಿದ್ಯಾರ್ಥಿನಿ ಶಿಲ್ಪ ಪ್ರಾರ್ಥಿಸಿ, ವಿದ್ಯಾರ್ಥಿನಿ ಅಕ್ಷಿತಾ ವಂದಿಸಿದರು. ಕಾಲೇಜಿನ ಪ್ರಾಚಾರ್ಯ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಕಾರ್ಯಕ್ರಮ ನಿರ್ವಹಿಸಿದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ತೆಂಗಿನಕಾಯಿ ರಫ್ತಿನಲ್ಲಿ ಭಾರತ ಶೇ.62ರಷ್ಟು ಏರಿಕೆ
September 19, 2026
12:06 PM
by: ದ ರೂರಲ್ ಮಿರರ್.ಕಾಂ
ಸಮುದ್ರ ಮಾರ್ಗದಲ್ಲಿ ಅಡಿಕೆ ಸಾಗಾಟ : ಒಡಿಶಾದ ಬಾಲಸೋರ್‌ನಲ್ಲಿ ₹2 ಕೋಟಿಗೂ ಅಧಿಕ ಅಡಿಕೆ ವಶ- ಅಡಿಕೆ ಜಾಲದ ಹಿಂದೆ ಬಿದ್ದಿರುವ ಪೊಲೀಸರು
September 19, 2026
11:28 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 19-09-2026 | ಸೆ.22 ರಿಂದ ಮಳೆ ಹೆಚ್ಚಳದ ಸೂಚನೆ – ಬಂಗಾಳಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮ
September 19, 2026
11:11 AM
by: ದ ರೂರಲ್ ಮಿರರ್.ಕಾಂ
ಗೋಮಯದಿಂದ ಗಣೇಶನ ಮೂರ್ತಿ – ದೇಶದಾದ್ಯಂತ ಸಾವಿರಾರು ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ವಿತರಣೆ
September 19, 2026
7:20 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror