ಬ್ರೇಕಿಂಗ್ ನ್ಯೂಸ್‌ಗಳು ಅರ್ಥ ಕಳೆದುಕೊಳ್ಳುತ್ತಿದೆ. ಆದರೆ ಈಗಿನ ವಿದ್ಯಾರ್ಥಿಗಳು ಮುಂದಿನ ಪತ್ರಿಕಾರಂಗದಲ್ಲಿ ಬ್ರೇಕಿಂಗ್ ನ್ಯೂಸ್ ಗಳಿಗೂ ಅರ್ಥ ಬರುವ ಹಾಗೆ ಮಾಡಲು ಸಾಧ್ಯವಿದೆ. ಇದಕ್ಕಾಗಿಯೇ ಸುದ್ದಿ ಸಂಗ್ರಹದೊಂದಿಗೆ ಕಲೆಹಾಕಿದ ಮಾಹಿತಿಗಳ ಸತ್ಯಾಸತ್ಯತೆಗಳನ್ನು ಅರಿತುಕೊಳ್ಳಬೇಕಾದ ಅಗತ್ಯತೆ ಇರುತ್ತದೆ ಎಂದು ಪತ್ರಕರ್ತೆ ಸ್ವಪ್ನ ಮಡಪ್ಪಾಡಿ ಹೇಳಿದರು.
ಅವರು ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗ ಹಾಗೂ ರೂರಲ್ ಮಿರರ್ ಡಿಜಿಟಲ್ ಮೀಡಿಯಾ ಜಂಟಿ ಆಶ್ರಯದಲ್ಲಿ ಹಮ್ಮಿಳ್ಳಲಾಗಿರುವ ಸಕಾರಾತ್ಮಕ ಪತ್ರಿಕೋದ್ಯಮ ಉಪನ್ಯಾಸ ಸರಣಿಯಲ್ಲಿ ಭಾಗವಹಿಸಿ ಬ್ರೇಕಿಂಗ್ ನ್ಯೂಸ್ ಅವಾಂತರಗಳು ಹಾಗೂ ಮಾಧ್ಯಮಗಳಲ್ಲಿನ ಅವಕಾಶಗಳ ಕುರಿತು ಶನಿವಾರ ಉಪನ್ಯಾಸ ನೀಡಿದರು.
ದೃಶ್ಯ ಮಾಧ್ಯಮಗಳಲ್ಲಿ ಅತೀ ಕಡಿಮೆ ಸಮಯದಲ್ಲಿ ನಿಖರ ಮಾಹಿತಿ ನೀಡಬೇಕಾದ ಸವಾಲು ಇರುತ್ತದೆ. ಪ್ರತಿಯೊಂದು ಕ್ಷಣವೂ ಅಮೂಲ್ಯವಾಗಿದೆ. ಬ್ರೇಕಿಂಗ್ ನೀಡುವ ಸಂದರ್ಭದಲ್ಲಿ ಆ ಸುದ್ದಿಯ ಗಂಭೀರತೆಯನ್ನು ತಿಳಿದುಕೊಂಡು ನೀಡಬೇಕಿದೆ, ಇತ್ತೀಚಿನ ದಿನಗಳಲ್ಲಿ ಸಣ್ಣ ಪುಟ್ಟ ಸುದ್ದಿಗಳನ್ನೂ ಕೆಲವು ಮಾಧ್ಯಮಗಳಲ್ಲಿ ಬ್ರೇಕಿಂಗ್ ನ್ಯೂಸ್ ಎಂದು ಪ್ರಕಟಿಸಲಾಗುತ್ತಿದೆ ಎಂದರು.
ಪತ್ರಿಕಾರಂಗದಲ್ಲಿ ಅವಕಾಶಗಳಿಂತಲೂ ಸಾಧ್ಯತೆಗಳು ಹೆಚ್ಚಿದೆ. ಎಲ್ಲಾ ಕ್ಷೇತ್ರದಲ್ಲೂ ಬೆಳೆಯಲು ಅವಕಾಶ ಇದೆ. ಎಲ್ಲಾ ಸಮಯದಲ್ಲೂ ಪತ್ರಕರ್ತ ಎನ್ನುವುದು ಕೆಲಸ ಮಾಡದು, ಮಾನವೀಯತೆ ಎನ್ನುವುದು ಎಲ್ಲಾ ಕಡೆ ಕೆಲಸ ಮಾಡುತ್ತಿದೆ. ಇದಕ್ಕಾಗಿಯೇ ಮಾನವೀಯತೆಯೂ ಪತ್ರಕರ್ತನಲ್ಲಿ ಅಗತ್ಯ ಇದೆ. ಯಾವತ್ತೂ ಪಾಸಿಟಿವ್ ಸುದ್ದಿಗಳಿಂದ ಬೆಳೆಯಲು ಸಾಧ್ಯವಿದೆ. ಋಣಾತ್ಮಕತೆ ಹೆಚ್ಚು ಹೆಚ್ಚು ಇದ್ದಷ್ಟು ಜೀವನದಲ್ಲಿ , ಕೆಲಸದಲ್ಲೂ ನಿರಾಸಕ್ತಿ ಹೆಚ್ಚಾಗುತ್ತದೆ. ಅದಕ್ಕಾಗಿಯೇ ಸಕಾರಾತ್ಮಕ ಸಂಗತಿಗಳ ಅಗತ್ಯ ಇದೆ ಎಂದು ಸ್ವಪ್ನಾ ಹೇಳಿದರು.
ಕಾಲೇಜು ಹಂತದಲ್ಲಿಯೇ ವರದಿಗಾರಿಕೆಯ ಪಟ್ಟುಗಳನ್ನು ವಿದ್ಯಾರ್ಥಿಗಳು ಅರಿತಾಗ ಮಾಧ್ಯಮ ಜಗತ್ತಿನಲ್ಲಿ ಹೆಚ್ಚು ಗುರುತಿಸಿಕೊಳ್ಳಲು ಸಹಕಾರಿಯಾಗುತ್ತದೆ. ಲೇಖನಗಳನ್ನು ಮಿಂಚಂಚೆ ಮೂಲಕ ಸಮಯ ಸಂದರ್ಭ ಗಮನಿಸಿ ಮಾಧ್ಯಮಗಳಿಗೆ ಕಳುಹಿಸಿದಲ್ಲಿ ಶೀಘ್ರವಾಗಿ ಪ್ರಕಟಗೊಳ್ಳುವ ಸಾಧ್ಯತೆಯಿರುತ್ತದೆ. ಮಾಧ್ಯಮಗಳಲ್ಲಿ ಪ್ರಸ್ತುತ ವಿಫುಲ ಅವಕಾಶಗಳಿದ್ದು ಪತ್ರಿಕೆ, ದೃಶ್ಯ ಮಾಧ್ಯಮ ಹಾಗೂ ವೆಬ್ ಸೈಟ್‍ಗಳಲ್ಲಿ ಉದ್ಯೋಗಗಳಿವೆ. ಆದರೆ ನಾವು ನಮ್ಮನ್ನು ಹೊರಜಗತ್ತಿಗೆ ತೆರೆದುಕೊಂಡು ಸೂಕ್ತ ಪೂರ್ವತಯಾರಿಗಳನ್ನು ನಡೆಸಿಕೊಳ್ಳುವುದು ಅತೀ ಅಗತ್ಯವಾಗಿದೆ ಎಂದರು.
ರೂರಲ್ ಮಿರರ್ ಡಿಜಿಟಲ್ ಮೀಡಿಯಾ ಮುಖ್ಯಸ್ಥ ಮಹೇಶ್ ಪುಚ್ಚಪ್ಪಾಡಿ ಮಾತನಾಡಿ ಸರಣಿ ಕಾರ್ಯಕ್ರಮಗಳಲ್ಲಿ ಈಗಾಗಲೇ ಧನಾತ್ಮಕ ಪತ್ರಿಕೋದ್ಯಮದ ವಿವಿಧ ಮಜಲುಗಳ ಕುರಿತು ಚರ್ಚಿಸಲಾಗಿದೆ. ಮುಂದೆಯೂ ಧನಾತ್ಮಕತೆಯನ್ನು ಬೆಳೆಸುವ ನಿಟ್ಟಿನಲ್ಲಿ ಕೆಲಸ ನಡೆಯಲಿದೆ ಎಂದರು.
ಕಾಲೇಜಿನ ಪ್ರಾಚಾರ್ಯ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ ಕುಮಾರ್ ಕಮ್ಮಜೆ, ಪತ್ರಿಕೋದ್ಯಮ ಉಪನ್ಯಾಸಕ ಹರ್ಷಿತ್ ಪಿಂಡಿವನ, ಅಂಬಿಕಾ ಪದವಿಪೂರ್ವ ವಿದ್ಯಾಲಯದ ಇಂಗ್ಲಿಷ್ ಉಪನ್ಯಾಸಕ ಆಶಿಕ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ನವ್ಯಾ ಸ್ವಾಗತಿಸಿ, ಜಯಶ್ರೀ ವಂದಿಸಿದರು.
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…
ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…