ರಾಜ್ಯಾದ್ಯಂತ ಮಾರುಕಟ್ಟೆಯಲ್ಲೀಗ ಕಪ್ಪು ಸುಂದರಿಯದ್ದೇ ಕಾರುಬಾರು. ಮಾವಿನ ಹಣ್ಣಿನ ನಂತರ ನೇರಳೆ ಹಣ್ಣುಗಳ (Java Plum) ಸುಗ್ಗಿ. ಕಪ್ಪಗಿನ ದ್ರಾಕ್ಷಿ ಹೋಲುವ ಜಂಬು ನೇರಳೆ ಸವಿಯೋದಕ್ಕೆ ಗ್ರಾಹಕರು ಮುಗಿ ಬೀಳ್ತಿದ್ದಾರೆ. ಆರೋಗ್ಯಕ್ಕೆ ಕೂಡ ಈ ನೇರಳೆ ಉತ್ತಮ. ಹಾಗೆ ಅಷ್ಟೇ ರುಚಿ. ಕಳೆದ ಬಾರಿಗೆ ಹೂಲಿಸಿದ್ರೆ ಈ ಬಾರಿ ಕೊಂಚ ರೇಟು ಜಾಸ್ತಿಯಾಗಿದೆ. ಆದ್ರೂ, ವರ್ಷಕ್ಕೊಂದು ಬಾರಿ ಸಿಗುವ ಜಂಬು ನೇರಳೆ ತಿನ್ನೋ ಅವಕಾಶವನ್ನು ಯಾರೂ ಮಿಸ್ ಮಾಡ್ತಿಲ್ಲ.
ಆದರೆ ಇದು ಪಟ್ಟಣದ ಮಂದಿ ಕಥೆ. ಆದರೆ ನಮ್ಮ ದಕ್ಷಿಣ ಕನ್ನಡದಲ್ಲಿ ಅಪರೂಪವಾದ್ರು ಕಾಡಿಗೆ ಹೋದ್ರೆ ಬೇಕಾದಷ್ಟು ಸಿಗುತ್ತದೆ. ಆದ್ರೆ ಅಷ್ಟೆಲ್ಲ ಕಷ್ಟಪಟ್ಟು ಕಾಡಿಗೆ ಹೋಗಿ ಕೊಯ್ದು ತಂದು ತಿನ್ನುವುದು ನಮ್ಮಲ್ಲಿ ವಿರಳ. ಹಿಂದೆ ಶಾಲೆಗೆ ಹೋಗುವಾಗ ಮಕ್ಕಳೆಲ್ಲ ಕಾಡು ಮೇಡು ಸುತ್ತಿ ಕೊಯ್ದು ತಿಂದದ್ದಿದೆ. ಆದರೆ ಈಗಿನ ಮಕ್ಕಳಿಗೆ ಆ ಭಾಗ್ಯವೂ ಇಲ್ಲ. ಬೆಡ್ ರೂಮಿನಿಂದ ನೇರ ಕ್ಲಾಸ್ ರೂಮಿಗೆ ಹೋಗುವ ಭಾಗ್ಯ ಈಗಿನ ಮಕ್ಕಳದ್ದು.
ಮಾವಿನ ಹಣ್ಣಿನ ಸೀಸನ್ ಮುಗಿದ ಬಳಿಕ ಮಾರುಕಟ್ಟೆಗಳಿಗೆ ಜಂಬು ನೇರಳೆ ಲಗ್ಗೆ ಇಟ್ಟಿದೆ. ಅದರಲ್ಲೂ ಮೇ, ಜೂನ್ ಈ ಎರಡು ತಿಂಗಳಲ್ಲಿ ಈ ಕಪ್ಪು ಸುಂದರಿಗೆ ಸುಗ್ಗಿಕಾಲ. ಸಾಕಷ್ಟು ಔಷಧಿ ಗುಣಗಳನ್ನು ಹೊಂದಿರುವ ಈ ಜಂಬು ನೇರಳೆಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ.
ಸ್ಥಳೀಯ ರೈತರಿಗೂ ಲಾಭ
ಮಹಾರಾಷ್ಟ್ರದ ರತ್ನಗಿರಿ ಮತ್ತು ಸಾಂಗ್ಲಿ ಜಿಲ್ಲೆಯಿಂದ ಈ ಹಣ್ಣುಗಳನ್ನ ತಂದು ರಾಜ್ಯದಲ್ಲಿ ಮಾರಾಟ ಮಾಡಲಾಗುತ್ತದೆ. ಆದರೆ ಸದ್ಯ ನಮಮ್ಮ ರಾಜ್ಯದ ಕೋಲಾರ, ರಾಮನಗರ, ಧಾರವಾಡ ಹಾಗೂ ನಾನಾ ಭಾಗಗಳಲ್ಲಿ ಬೆಳೆಯುತ್ತಿರುವ ಈ ಹಣ್ಣುಗಳನ್ನ ಸ್ಥಳೀಯ ಮಾರುಕಟ್ಟೆಯಲ್ಲಿಯೇ ಮಾರಾಟ ಮಾಡುತ್ತಿರುವುದು ಖುಷಿಯ ವಿಚಾರ. ವಆಯಾ ಜಿಲ್ಲೆಯ ರೈತರಿಂದ ಖರೀದಿಸಿ ವ್ಯಾಪಾರ ಮಾಡುತ್ತಿರುವುದರಿಂದ ಸ್ಥಳೀಯ ರೈತರಿಗೂ ಲಾಭ ತಂದು ಕೊಟ್ಟಿದೆ.
ರೈತರಿಗೆ ತಪ್ಪಿದ ಸಾಗಾಣಿಕೆ ಹೊರೆ
ಅಲ್ಲದೇ ಆಯಾ ಭಾಗದ ನೇರಳೆ ಹಣ್ಣುಗಳು ಭಾರೀ ರುಚಿ ಇರೋದು ಕೂಡಾ ವ್ಯಾಪಾರಿಗಳ ವ್ಯಾಪಾರ ಹೆಚ್ಚಿಸಿದೆ. ಜೊತೆಗೆ ರೈತರಿಗೂ ಅಷ್ಟೇ ಸಾಗಾಣಿಕೆ ಹಣ ಉಳಿಯುತ್ತದೆ. ಅದೇನಿದ್ದರೂ ನೇರಳೆ ಕಂಡು ಬಾಯಿಚಪ್ಪರಿಸೋರಿಗೆ ಭಾರೀ ಇಷ್ಟವಾಗುತ್ತಿದೆ. ಹೆಚ್ಚಾಗಿ ಜಮೀನಿನ ಬದುವಿನಲ್ಲೇ ಬೆಳೆಯುವ ನೇರಳೆಹಣ್ಣಿಗೆ ಪಟ್ಟಣ, ನಗರ ಪ್ರದೇಶದ ಜನರಿಗೆ ಅಚ್ಚುಮೆಚ್ಚಿನ ಹಣ್ಣಾಗಿದೆ.
ಬೆಲೆ ಕೊಂಚ ಜಾಸ್ತಿ!
ಕಳೆದ ವರ್ಷ ಒಂದು ಕೆಜಿ ಹಣ್ಣಿನ ಬೆಲೆ 100 ರಿಂದ 120 ರೂಪಾಯಿ ಬೆಲೆ ಇತ್ತು. ಈ ವರ್ಷ ಹವಾಮಾನ ಬದಲಾವಣೆಯಾದ ಹಿನ್ನೆಲೆಯಲ್ಲಿ ಮರದಲ್ಲಿ ಹೆಚ್ಚು ಹೂವು, ಕಾಯಿಗಳು ಉದುರಿದ ಪರಿಣಾಮ ಇಳುವರಿ ಕುಂಠಿತಗೊಂಡು ಬೆಲೆ ಹೆಚ್ಚಾಗಿದೆ.
ಸದ್ಯ ಮಾರುಕಟ್ಟೆಯ ನೇರಳೆ ಹಣ್ಣು ಕೆಜಿಗೆ 150 ರಿಂದ 160 ರವರೆಗೆ ಮಾರಾಟವಾಗುತ್ತಿದೆ. ನೇರಳೆ ಹಣ್ಣು ಸೇವನೆ ಸಾಕಷ್ಟು ಪ್ರಯೋಜನ ಇರೋದನ್ನ ಮನಗಂಡ ಗ್ರಾಹಕರು ನೇರಳೆ ಸವಿಯೋದಕ್ಕೆ ಮುಗಿಬೀಳ್ತಿದ್ದಾರೆ. ವಿಶೇಷವಾಗಿ ಸಕ್ಕರೆ ಕಾಯಿಲೆ ನಿಯಂತ್ರಿಸುವ ಹಾಗೂ ಜೀರ್ಣ ಶಕ್ತಿ ವೃದ್ಧಿಸುವ ಜಂಬುನೇರಳೆ ಸಿಗುವುದೇ ಈಗ ಅಪರೂಪವಾಗಿದೆ. ಹಾಗಾಗಿ ಈ ಸೀಸನ್ನಲ್ಲಿ ದೊರೆಯುವ ಜಂಬು ನೇರಳೆಗೆ ಸಖತ್ ಡಿಮ್ಯಾಂಡ್ ಇರೋದಂತೂ ನಿಜ.
ಮಣ್ಣಿನಲ್ಲಿ ಬಿದ್ದ ಬೀಜವು ಜೀವಂತಿಕೆಯಿಂದ ತನ್ನ ಬೇರುಗಳನ್ನು ಸಿಕ್ಕಿದ ಬಿರುಕುಗಳಲ್ಲಿ ಹಬ್ಬಿಸುತ್ತ ತೆವಳುತ್ತ…
ಮುಂದಿನ ಆರ್ಥಿಕ ವರ್ಷದಿಂದ ರಾಜ್ಯದ ಸಾವಯವ ಉತ್ಪನ್ನಗಳ ಮಾರಾಟಕ್ಕೆ ಎಪಿಎಂಸಿಗಳಲ್ಲಿ ಮಾರುಕಟ್ಟೆ ವ್ಯವಸ್ಥೆ…
ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಶ್ರೀಲಂಕಾದಿಂದ 38 ಮಂದಿ “ಲಂಕಾ…
ಬದಲಾದ ಕಾಲದಲ್ಲಿ ನಾವು ಇಂತಹ ಪರಿಕರಕೊಳ್ಳುವ ಮೊದಲು ನಮಗೆಷ್ಟು ಇದು ಪ್ರಯೋಜನಕಾರಿ ಎಂದು…
ಐತಿಹಾಸಿಕ ಕುಂಭಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ …
ರಾಸಾಯನಿಕಗಳನ್ನು ಹೊಂದಿರುವ ಗೊಬ್ಬರದ ಅತಿಯಾದ ಬಳಕೆಯಿಂದಾಗಿ ಭೂಮಿಯಲ್ಲಿ ಎರೆಹುಳು ಸೇರಿದಂತೆ ಎಲ್ಲ ಜೀವಿಗಳು…