ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಗೃಹಜ್ಯೋತಿ ಯೋಜನೆ(gruhajyothi scheme) ಜಾರಿಗೊಳಿಸಿ 200 ಯೂನಿಟ್‍ವರೆಗೆ ಉಚಿತ ಕರೆಂಟ್ ನೀಡುವ ಕೊಟ್ಟ ಭರವಸೆ ಈಡೇರಿಸಿದೆ. ಆದ್ರೆ ಗ್ರಾಮೀಣ ಭಾಗಗಳಲ್ಲಿ ಬೇರೆ ರೀತಿಯ ಚಿತ್ರಣವಿದೆ. ತೀವ್ರ ಬರಗಾಲದಿಂದ ಬೆಳೆಗಳೆಲ್ಲಾ ನಾಶವಾಗಿ ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಈ ನಡುವೆ ಉಳಿದಿರೋ ಅಲ್ಪಸ್ವಲ್ಪ ಬೆಳೆಗಳನ್ನು ಉಳಿಸಿಕೊಳ್ಳಲು ಪಂಪ್‍ಸೆಟ್ ಹೊಂದಿರುವ ರೈತರು, ವಿದ್ಯುತ್ ಇಲಾಖೆ ನೀಡ್ತಿರೋ ಒಂದೆರಡು ಗಂಟೆ ಕರೆಂಟ್‍ನಲ್ಲೇ ಬೆಳೆಗಳಿಗೆ ನೀರು ಹಾಯಿಸುತ್ತಿದ್ದಾರೆ. ಪಂಪ್‍ಸೆಟ್‍ಗಳನ್ನು ಹೊಂದಿರುವ ರೈತರಿಗೆ ವಿದ್ಯುತ್ ಇಲಾಖೆ ಶಾಕ್ ನೀಡಿದೆ. ಲಕ್ಷ ಲಕ್ಷ ಮೊತ್ತದ ಕರೆಂಟ್ ಬಿಲ್ ನೀಡಿದ್ದು, ಇನ್ನು 15 ದಿನಗಳಲ್ಲಿ ಬಿಲ್ ಪಾವತಿ ಮಾಡಬೇಕು ಎಂದು ವಾರ್ನಿಂಗ್ ನೀಡಿದೆ.
ಹಾಸನ (Hassan) ಜಿಲ್ಲೆಯಲ್ಲಿ ರೈತರು ಬಳಸುವ ಒಂದೂವರೆ ಲಕ್ಷಕ್ಕೂ ಅಧಿಕ ಪಂಪ್‍ಸೆಟ್‍ಗಳಿಗೆ ಸರ್ಕಾರ ಕರೆಂಟ್ ನೀಡುತ್ತಿದೆ. ಇದುವರೆಗೂ ಬಹುತೇಕ ಸರ್ಕಾರಗಳು ರೈತರ ಬೆಳೆಗಳಿಗೆ ಬಳಸುವ ವಿದ್ಯುತ್‍ಗೆ ಬಿಲ್ ನೀಡಿರಲಿಲ್ಲ. ಅದರಲ್ಲೂ ಕೃಷಿ ಬಳಕೆ ಪಂಪ್‍ಸೆಟ್‍ಗಳಿಗೆ ರೈತರು ಉಚಿತವಾಗಿಯೇ ಕರೆಂಟ್ ಬಳಕೆ ಮಾಡಿಕೊಳ್ಳುತ್ತಿದ್ದರು. ಕೆಲವು ರೈತರು ಇನ್ನೂ ಮೀಟರ್ ಅಳವಡಿಕೆ ಮಾಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಗೃಹಜ್ಯೋತಿ ಜಾರಿ ಮಾಡಿರುವ ಸರ್ಕಾರ ಸಣ್ಣ, ಅತಿಸಣ್ಣ ರೈತರು ತಮ್ಮ ಕೃಷಿ ಚಟುವಟಿಕೆಗೆ ಅಗತ್ಯಕ್ಕೆ ತಕ್ಕಂತೆ ಬಳಸುತ್ತಿರುವ ನೀರಾವರಿ ಪಂಪ್‍ಸೆಟ್‍ಗಳಿಗೆ ಲಕ್ಷ ಲಕ್ಷ ಬಿಲ್ ನೀಡಲು ಆರಂಭಿರುವುದು ರೈತರಿಗೆ ದೊಡ್ಡ ಆಘಾತ ಉಂಟು ಮಾಡಿದೆ.
ಸಕಲೇಶಪುರ, ಬೇಲೂರು ಸೇರಿದಂತೆ ಎಲ್ಲಾ ತಾಲೂಕುಗಳ ರೈತರಿಗೆ ದುಬಾರಿ ಬಿಲ್ ಮೂಲಕ ಬರೆ ಎಳೆಯುತ್ತಿದೆ. ಹತ್ತಾರು ವರ್ಷಗಳಿಂದ ಕೆಲ ರೈತರು ಬಿಲ್ ಪಾವತಿ ಮಾಡಿಲ್ಲ. ಅಂತಹವರನ್ನು ಸೇರಿಸಿ ಎಲ್ಲಾ ರೈತರ ಪಂಪ್‍ಸೆಟ್‍ಗಳಿಗೆ ಎರಡೂವರೆ ಲಕ್ಷ, ಒಂದು ಲಕ್ಷ, ಐವತ್ತು ಸಾವಿರ ಹೀಗೆ ಮನಬಂದಂತೆ ಬಿಲ್ ನೀಡಿದ್ದಾರೆ. ಈ ವರ್ಷ ಬರಗಾಲದಿಂದ ಬೆಳೆ ಕಳೆದುಕೊಂಡು ಕಂಗಾಲಾಗಿದ್ದೀವಿ. ಈ ವೇಳೆ ಹೇಗೆ ಬಿಲ್ ಕಟ್ಟೋದು ಎನ್ನುತ್ತಿದ್ದಾರೆ.
ಸರ್ಕಾರ ಕೊಟ್ಟ ಮಾತಿನಂತೆ ಗ್ಯಾರಂಟಿ ಈಡೇರಿಸಲು ಗೃಹಜ್ಯೋತಿ ಜಾರಿಗೊಳಿಸಿ ಮನೆಮನೆಗೆ ಉಚಿತ ವಿದ್ಯುತ್ ನೀಡುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತಿದೆ. 200 ಯೂನಿಟ್ ವಿದ್ಯುತ್ ಉಚಿತ ಸಿಗುತ್ತಿದೆ ಎಂದು ಜನರು ಖಷಿಯಲ್ಲಿರುವಾಗ ಪಂಪ್‍ಸೆಟ್‍ಗಳಿಗೆ ದುಬಾರಿ ಬಿಲ್ ನೀಡುವ ಮೂಲಕ ರೈತರಿಂದ ಹಣ ವಸೂಲಿ ಮಾಡಲು ಮುಂದಾಗಿರೋದು ರೈತರ ಕಣ್ಣು ಕೆಂಪಾಗಿಸಿದೆ.
– ಅಂತರ್ಜಾಲ ಮಾಹಿತಿ
The Congress Govt came to power on a whim. Among the five guarantees given during the election, Griha Jyoti, Grilahakshmi, Shakti and Annabhagya schemes have been implemented. But after the implementation of Griha Jyoti Yojana which gives free electricity, there are still many discussions going on. On the one hand, the government claims to be providing free electricity, on the other hand, it has come down to collecting double electricity bills from the farmers.