ಗ್ರಾಮೀಣ ಭಾಗದಲ್ಲಿ ನಿರಂತರ ವಿದ್ಯುತ್ ಸರಬರಾಜು ಮಾಡುವುದು ಸುಲಭ ಮಾತಲ್ಲ. ಯಾವುದೇ ದೂರು ವಿಭಾಗ ಇದ್ದರೂ ಗ್ರಾಮೀಣ ಭಾಗದಲ್ಲಿ ಯಾರಿಗೇ ಆದರೂ ಕೆಲಸ ಮಾಡಲು ಮನಸ್ಸು ಹಾಗೂ ಶಕ್ತಿ ಮತ್ತು ಯುಕ್ತಿ ಅಗತ್ಯವಿದೆ. ಅಂತಹ ಯುಕ್ತಿಯ ಹಾಗೂ ಸಾಹಸದ ತಂಡವೊಂದು ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕ ಪ್ರದೇಶದಲ್ಲಿದೆ.
ಕಳೆದ ಬಾರಿ ಮಳೆ ಹಾಗೂ ಭಾರೀ ಪ್ರವಾಹವು ಕಲ್ಮಕಾರಿನಿಂದ ತೊಡಗಿ ಕೊಲ್ಲಮೊಗ್ರ, ಹರಿಹರ ಪ್ರದೇಶದಲ್ಲಿ ಸಂಕಷ್ಟ ತಂದಿತ್ತು. ವಿದ್ಯುತ್ ಕಂಬಗಳು ಉರುಳಿತ್ತು, ತಂತಿಗಳು ಬಿದ್ದಿದ್ದವು. ಆದರೆ ಇಲ್ಲಿನ ಮೆಸ್ಕಾಂ ತಂಡ ಹಾಗೂ ಖಾಸಗಿ ಕೆಲಸಗಾರರು ಮತ್ತು ಊರಿನ ಯುವಕರು ಹಾಗೂ ನಿತ್ಯಾನಂದ ಹರಿಹರ ಮತ್ತು ತಂಡದಿಂದ ಎರಡೇ ದಿನದಲ್ಲಿ ಇಡೀ ಊರಿಗೆ ವಿದ್ಯುತ್ ಸಂಪರ್ಕ ಒದಗುವಂತೆ ಮಾಡಿದ್ದರು. ಹೀಗಾಗಿ ಇಡೀ ಊರಿನ ಜನರು ಶ್ಲಾಘನೆ ವ್ಯಕ್ತಪಡಿಸಿದ್ದರು.
ಅದೇ ತಂಡ ಎರಡು ದಿನಗಳ ಹಿಂದೆ ಹರಿಹರ ಬಳಿಯ ಗುಂಡಡ್ಕ ಹೊಳೆಯಲ್ಲಿ ವೈರ್ ತುಂಡಾಗಿ ಬಿದ್ದಿತ್ತು ಅದನ್ನು ತಕ್ಷಣವೇ ದುರಸ್ತಿ ಮಾಡಿದ್ದಾರೆ. ಹರಿಹರದ ಪವರ್ ಮ್ಯಾನ್ ಗಳಾದ ಪ್ರಶಾಂತ, ಮಾರುತಿ, ವಿಜಯ ಎಂಬ ಮೂರು ಜನರ ತಂಡ ನಿರಂತರ ಕೆಲಸ ಮಾಡಿದೆ. ಹರಿಹರ ಪಲ್ಲತ್ತಡ್ಕ ಎಂಬಲ್ಲಿ ವಯರ್ ತುಂಡಾಗಿ ಹೊಳೆಯಲ್ಲಿ ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಈ ಬಾರಿ ಕೂಡಾ ಹೊಳೆಯಲ್ಲಿ ಈಜಿ ವಯರನ್ನು ಎಳೆದು ಕಟ್ಟಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ. ಇಂತಹ ಪವರ್ ಮ್ಯಾನ್ ಗಳೇ ಮೆಸ್ಕಾಂನ ನಿಜವಾದ ಆಸ್ತಿಗಳು ಎಂದು ಜನರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಕೇರಳದ ಕೆಲವು ಪ್ರದೇಶಗಳಲ್ಲಿ ತಾಪಮಾನದಲ್ಲಿ ಗಣನೀಯ ಏರಿಕೆಯ ಬಗ್ಗೆ ಎಚ್ಚರಿಕೆ ನೀಡಿದೆ. ಮುಂದಿನ…
ಮಾಘ ಮಾಸ ಕೃಷ್ಣ ಪಕ್ಷದ ಚತುರ್ದಶಿಯಂದು ಆಚರಿಸಲಾಗುವ ಶಿವರಾತ್ರಿ, ಶಿವ ಭಕ್ತರ ಪಾಲಿಗೆ…
ಧರ್ಮಸ್ಥಳಕ್ಕೆ ಸಂಬಂಧಿಸಿದಂತೆ “ಮಾತು ಬಿಡ ಮಂಜುನಾಥ” ಎಂಬ ಮಾತು ಎಲ್ಲರಿಗೂ ಚಿರಪರಿಚಿತವಾಗಿದೆ. ಮಾತೇ…
ಮಂಗಳೂರು ಮಹಾನಗರಪಾಲಿಕೆ ವತಿಯಿಂದ ತುಂಬೆಯಲ್ಲಿರುವ ಕಿಂಡಿ ಅಣೆಕಟ್ಟಿನ ಬಳಿ ನೇತ್ರಾವತಿ ನದಿಗೆ ಗಂಗಾ…
ಈ ಬಾರಿ ಫೆಬ್ರವರಿ ತಿಂಗಳಲ್ಲಿ ವಾಡಿಕೆಗಿಂತ 2.5 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲು…
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಮತ್ತು ನಿರ್ವಾಹಕರ ಮೇಲೆ ಪ್ರಯಾಣಿಕರು…