ಗ್ರಾಮೀಣ ಭಾಗದಲ್ಲಿ ಪವರ್‌ ಮ್ಯಾನ್‌ ಕೆಲಸ | ಹರಿಹರದಲ್ಲಿ ಹೊಳೆಗೆ ಬಿದ್ದ ವಯರ್‌ | ಊರವರ ಶ್ಲಾಘನೆ ಕಾರಣ ಇದೆ ಇಲ್ಲಿ… |

September 26, 2022
11:02 PM

ಗ್ರಾಮೀಣ ಭಾಗದಲ್ಲಿ ನಿರಂತರ ವಿದ್ಯುತ್‌ ಸರಬರಾಜು ಮಾಡುವುದು  ಸುಲಭ ಮಾತಲ್ಲ. ಯಾವುದೇ ದೂರು ವಿಭಾಗ ಇದ್ದರೂ ಗ್ರಾಮೀಣ ಭಾಗದಲ್ಲಿ ಯಾರಿಗೇ ಆದರೂ ಕೆಲಸ ಮಾಡಲು ಮನಸ್ಸು ಹಾಗೂ ಶಕ್ತಿ ಮತ್ತು ಯುಕ್ತಿ ಅಗತ್ಯವಿದೆ. ಅಂತಹ ಯುಕ್ತಿಯ ಹಾಗೂ ಸಾಹಸದ ತಂಡವೊಂದು ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕ ಪ್ರದೇಶದಲ್ಲಿದೆ.

Advertisement
Advertisement

Advertisement

ಕಳೆದ ಬಾರಿ ಮಳೆ ಹಾಗೂ ಭಾರೀ ಪ್ರವಾಹವು ಕಲ್ಮಕಾರಿನಿಂದ ತೊಡಗಿ ಕೊಲ್ಲಮೊಗ್ರ, ಹರಿಹರ ಪ್ರದೇಶದಲ್ಲಿ ಸಂಕಷ್ಟ ತಂದಿತ್ತು. ವಿದ್ಯುತ್‌ ಕಂಬಗಳು ಉರುಳಿತ್ತು, ತಂತಿಗಳು ಬಿದ್ದಿದ್ದವು. ಆದರೆ ಇಲ್ಲಿನ ಮೆಸ್ಕಾಂ ತಂಡ ಹಾಗೂ ಖಾಸಗಿ ಕೆಲಸಗಾರರು ಮತ್ತು ಊರಿನ ಯುವಕರು ಹಾಗೂ ನಿತ್ಯಾನಂದ ಹರಿಹರ ಮತ್ತು ತಂಡದಿಂದ ಎರಡೇ ದಿನದಲ್ಲಿ ಇಡೀ ಊರಿಗೆ ವಿದ್ಯುತ್‌ ಸಂಪರ್ಕ ಒದಗುವಂತೆ ಮಾಡಿದ್ದರು. ಹೀಗಾಗಿ ಇಡೀ ಊರಿನ ಜನರು ಶ್ಲಾಘನೆ ವ್ಯಕ್ತಪಡಿಸಿದ್ದರು.

Advertisement

ಅದೇ ತಂಡ ಎರಡು ದಿನಗಳ ಹಿಂದೆ ಹರಿಹರ ಬಳಿಯ ಗುಂಡಡ್ಕ ಹೊಳೆಯಲ್ಲಿ ವೈರ್ ತುಂಡಾಗಿ ಬಿದ್ದಿತ್ತು ಅದನ್ನು ತಕ್ಷಣವೇ ದುರಸ್ತಿ ಮಾಡಿದ್ದಾರೆ. ಹರಿಹರದ ಪವರ್ ಮ್ಯಾನ್ ಗಳಾದ  ಪ್ರಶಾಂತ, ಮಾರುತಿ, ವಿಜಯ ಎಂಬ ಮೂರು ಜನರ ತಂಡ ನಿರಂತರ ಕೆಲಸ ಮಾಡಿದೆ. ಹರಿಹರ ಪಲ್ಲತ್ತಡ್ಕ ಎಂಬಲ್ಲಿ ವಯರ್ ತುಂಡಾಗಿ ಹೊಳೆಯಲ್ಲಿ ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಈ ಬಾರಿ ಕೂಡಾ ಹೊಳೆಯಲ್ಲಿ ಈಜಿ ವಯರನ್ನು ಎಳೆದು ಕಟ್ಟಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ. ಇಂತಹ ಪವರ್‌ ಮ್ಯಾನ್‌ ಗಳೇ ಮೆಸ್ಕಾಂನ ನಿಜವಾದ ಆಸ್ತಿಗಳು ಎಂದು ಜನರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಲೆನಾಡಗಿಡ್ಡ ಉಳಿಸುವ ಆಂದೋಲನಕ್ಕೆ ತೊಡಗುವ ಅನಿವಾರ್ಯತೆ ಇದೆ : ಗೋ ಸಂತತಿಯ ಉಳಿವು ಅಂದರೆ ಧರ್ಮದ ಉಳಿವು
April 25, 2024
11:48 PM
by: The Rural Mirror ಸುದ್ದಿಜಾಲ
ಏರಿದ ತಾಪಮಾನ : ರಾಜ್ಯದಲ್ಲಿ ಇಂದಿನಿಂದ 5 ದಿನ ಬೀಸಲಿದೆ ಬಿಸಿಗಾಳಿ ಎಚ್ಚರಿಕೆ..!
April 25, 2024
11:01 PM
by: The Rural Mirror ಸುದ್ದಿಜಾಲ
ನೆಲ್ಯಾಡಿ | ವಿಶ್ವವಿದ್ಯಾನಿಲಯ ಕಾಲೇಜು ಶಿಕ್ಷಕ-ರಕ್ಷಕ ಸಂಘದ ಮಹಾಸಭೆ | ನೂತನ ಪದಾಧಿಕಾರಿಗಳ ನೇಮಕ
April 25, 2024
10:12 PM
by: ದ ರೂರಲ್ ಮಿರರ್.ಕಾಂ
ಇತ್ತೀಚಿಗೆ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತಿದೆ | ಮಕ್ಕಳ ತೂಕ ಮತ್ತು ಎತ್ತರವನ್ನು ಹೆಚ್ಚಿಸುವ ಆಹಾರಗಳು |
April 25, 2024
3:13 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror