Advertisement
MIRROR FOCUS

ಮಲೆನಾಡು ಗಿಡ್ಡ ತಳಿ ಉಳಿಸುತ್ತಿರುವ ಬೆಳ್ಳಾರೆಯ “ಪ್ರವೀಣ” |

Share

ನಾನು ಮಲೆನಾಡು ಗಿಡ್ಡ ತಳಿ(Malnadu gidda thali) ಹಸು(Desi cow) ನಿರ್ವಹಣೆಯಿಂದ ಸಂತೃಪ್ತವಾಗಿ ಜೀವನ ನಡೆಸಿಕೊಂಡು ಹೋಗುತ್ತಿದ್ದೇನೆ, ಹೀಗೆ ವಿಶ್ವಾಸದಿಂದ ಹೇಳಿದ್ದು  ಪ್ರವೀಣ್ ಬೆಳ್ಳಾರೆ. ಇವರು ದಕ್ಷಿಣ ಕನ್ನಡ (Dakshina Kannada) ಜಿಲ್ಲೆ, ಸುಳ್ಯ(Sullia) ತಾಲೂಕು ಬೆಳ್ಳಾರೆ ಗ್ರಾಮದವರು. ಓದಿದ್ದು ಪಿಯುಸಿ ಪತ್ನಿ ಎರಡು ಮಕ್ಕಳು ಮತ್ತು ತಾಯಿ ಮನೆಯಲ್ಲಿದ್ದಾರೆ. ಒಂದು ಮೂರು ಕ್ವಿಂಟಾಲ್ ಅಕ್ಕಿಯಾಗುವಷ್ಟು ಗದ್ದೆ(Paddy Field) ಮತ್ತು ಒಂದು ಹದಿನೈದು ಸೆಂಟ್ಸ್ ಸೈಟ್ ಅದರಲ್ಲಿ ಮನೆ ಕೊಟ್ಟಿಗೆ(Cow Shed) ಇದೆ.

Advertisement
Advertisement

ಈ ಕೊಟ್ಟಿಗೆಯಲ್ಲಿ ಹದಿನಾರು ಮಲೆನಾಡು ಗಿಡ್ಡ ತಳಿ ಹಸುಗಳು ಮತ್ತು ಆ ಹಸುಗಳ ಗವ್ಯೋತ್ಪನ್ನದಲ್ಲೇ  ಪ್ರವೀಣ್ ಬೆಳ್ಳಾರೆಯವರು ಕುಟುಂಬ ನಿರ್ವಹಣೆ ಮಾಡಿ ಕೊಂಡು ಹೋಗುವ ವಿಚಾರ “ಮಲೆನಾಡು ಗಿಡ್ಡ ತಳಿ ಹಸುಗಳು ನಷ್ಟ, ‌ ಸಾಕಿ ನಿರ್ವಹಣೆ ಮಾಡುವುದು ಕಷ್ಟ” ಎಂಬ ವಿಚಾರದಿಂದ ವಿನಾಶದಂಚಿಗೆ ತಲುಪಿರುವ ಮಲೆನಾಡು ಗಿಡ್ಡ ತಳಿ  ಸಾಕುವವರೆಲ್ಲರಿಗೂ ಒಂದು ಆಶಾದಾಯಕ ಬೆಳವಣಿಗೆ. ನಮ್ಮ ಸುತ್ತ ಮುತ್ತಲಿನ ಪರಿಸರ ದಲ್ಲಿ ಅನೇಕ ದೇಸಿ‌ ತಳಿ ಸದಸ್ಯರು ಇದ್ದಾರೆ. ಆದರೆ ಇವರಲ್ಲಿ ನನ್ನನ್ನೂ ಸೇರಿದಂತೆ ಹೆಚ್ಚಿನ ಗೋಪಾಲಕರು “, ಮಲೆನಾಡು ಗಿಡ್ಡ ತಳಿ ” ಹಸುಗಳ ಪಾಲಕರು.

Advertisement

ಆದರೆ, ನಾವೆಲ್ಲರೂ ನಮ್ಮ ಕೃಷಿ ಜಮೀನಿನ ಉತ್ಪತ್ತಿಯಲ್ಲಿ ನಮ್ಮ ಗೋವುಗಳ ಸಾಕಿ ಸಲಹವವರು. ಬಹುತೇಕ ನಮ್ಮಗಳ ಯಾರ ಗೋವುಗಳು ಲೆಕ್ಕಾಚಾರದ ದೃಷ್ಟಿಯಿಂದ “ಸ್ವಾವಲಂಬಿ”ಯಲ್ಲ…!, ನಮ್ಮ ನಡುವೆ ಮಲೆನಾಡು ಗಿಡ್ಡ ತಳಿಗಳನ್ನು ಸ್ವಾವಲಂಬನೆ ಮಾಡಿ ಸಲಹುತ್ತಿರುವವರು ಪ್ರವೀಣ್ ಬೆಳ್ಳಾರೆಯವರು…!!!  ಪ್ರವೀಣ್ ಅವರು ತಮ್ಮ ಗೋಪಾಲನೆಗೆ ಅನನ್ಯತೆಯಿಂದ ಅರ್ಪಿಸಿಕೊಂಡು ದಿನದಲ್ಲಿ ಮುಕ್ಕಾಲು ಪಾಲು ಸಮಯವನ್ನು ಗೋವುಗಳ ಪಾಲನೆಗೆ ವ್ಯಯಿಸುತ್ತಾರೆ. ಬೆಳಿಗ್ಗೆ ಐದು ಗಂಟೆಯಿಂದ ಅವರ ಗೋಪಾಲನೆ ಆರಂಭವಾಗುತ್ತದೆ. ಮಧ್ಯಾಹ್ನದೊತ್ತಿಗೆ ಗೋಮಯದಿಂದ ಭಸ್ಮ ತಯಾರಿಕೆ ಮಾಡುತ್ತಾರೆ. ಮಧ್ಯಾಹ್ನದ ನಂತರ ಈ ಭಸ್ಮವನ್ನು ಗ್ರಂಥಿಕೆ ಅಂಗಡಿಗಳಿಗೆ, ಅಯ್ಯಪ್ಪ ಸೇವಾ ಸಮಿತಿಗಳಿಗೆ ಮಾರಾಟ ಮಾಡುತ್ತಾರೆ.

Advertisement

ತಮ್ಮ ಸುತ್ತ ಮುತ್ತಲಿನ ಚಿಕ್ಕ ಪುಟ್ಟ ಅಡಿಕೆ ಕೃಷಿಕರ ಭೇಟಿ ಮಾಡಿ ಅವರಿಗೆ “ಜೀವಾಮೃತ ತಯಾರಿ ಮತ್ತು ಬಳಕೆಯ ಮೌಲ್ಯ ತಿಳಿಸಿ ಅದರ ರೂಪು ರೇಷೆ ಮಾರ್ಗದರ್ಶನ ಮಾಡಿ ಅವರಿಗೆ ಗೋ ಮೂತ್ರ ಗೋಮಯವನ್ನ ಮಾರಾಟ ಮಾಡಿ ಅದರಿಂದಲೂ ಉತ್ಪತ್ತಿ ಗಳಿಸುತ್ತಾರೆ. ಮಲೆನಾಡು ಗಿಡ್ಡ ತಳಿಯ ಹಸುಗಳ ಉತ್ಕೃಷ್ಟ ಹಾಲನ್ನ ಪ್ರತಿ ಲೀಟರ್ ಗೆ ನೂರು ರೂಪಾಯಿಯಂತೆ ಮಾರುತ್ತಾರೆ. ಮಲೆನಾಡು ಗಿಡ್ಡ ತಳಿ ಹಸುಗಳ ಸಗಣಿ ಮೂತ್ರದಿಂದ ಮನೆಗೆ ಸಾಕಾಗುವಷ್ಟು ಗೋಬರ್ ಗ್ಯಾಸ್ ಉತ್ಪತ್ತಿ ಮಾಡಿಕೊಳ್ತಾರೆ. ಈ ಗೋಬರ್ ಗ್ಯಾಸ್ ಸ್ಲರಿಯಿಂದ ತಿಂಗಳಿಗೆ ಎರಡು ಪಿಕ್ ಅಪ್ ಕೊಟ್ಟಿಗೆ ಗೊಬ್ಬರವನ್ನು ಮಾರಾಟ ಮಾಡಿ ಅದರಿಂದ ಸುಮಾರು ಆರು ಸಾವಿರರೂ ಗಳಿಸುತ್ತಾರೆ.

ಮನೆ ಮಂದಿಗೆಲ್ಲ ಉತ್ತಮ ಆರೋಗ್ಯಕರ ಹಾಲು, ತುಪ್ಪ, ಮಜ್ಜಿಗೆ ಸಿಗುತ್ತದೆ. ಕೊಟ್ಟಿಗೆ ಗೊಬ್ಬರದಿಂದ ಉತ್ತಮವಾಗಿ ಚಿಕ್ಕ ಪ್ರಮಾಣದಲ್ಲಿ ಸಾವಯವ ಬತ್ತ ಕೂಡ ಬೆಳೆಯುತ್ತಾರೆ. ಎಷ್ಟೋ ಜನ ಗೋಪಾಲನೆಯನ್ನು ಕಷ್ಟ ಕಷ್ಟ ಎಂದು ಮಾಡಿದರೆ  ಪ್ರವೀಣ್ ಅವರು “ಖುಷಿಯಿಂದ ಗೋಪಾಲನೆ” ಮಾಡುತ್ತಾರೆ. ಮೇವಿನ ಸಮಸ್ಯೆ, ನೆಂಟರಿಷ್ಟರು, ಪ್ರವಾಸ ಇತ್ಯಾದಿಗಳಿಗೆ ಸಮಯ ಸಿಗದ ಕೊರತೆಯ ನಡುವೆ ಗೋಗಳಿಂದ ಸಿಗುವ ಪ್ರೀತಿ ಅದರಿಂದಾಗಿ ಸಿಗುವ ಅನಿರ್ವಚನೀಯ ಆರೋಗ್ಯಕರ ನೆಮ್ಮದಿ ದೊಡ್ಡದು ಎನ್ನುತ್ತಾರೆ ಪ್ರವೀಣ್.

Advertisement

ಈ ಗೋವಿನ ಪ್ರೀತಿಯ ಗೋಪಾಲನೆಯನ್ನು ಅರ್ಥ ಮಾಡಿಕೊಳ್ಳದ ಸಮಾಜ ಪ್ರವೀಣ್ ಪತ್ನಿಯನ್ನು ದಾರಿಯಲ್ಲಿ ತಡೆದು ನಿಲ್ಲಿಸಿ ದಿನಕ್ಕೆ “ಸಾವಿರ ರೂ ಸಂಬಳ” ಸಿಗುವ ಈ ಕಾಲದಲ್ಲಿ ನಿನ್ನ ಗಂಡ ಈ ಗೋವಿನ ಹಿಂದೆ ಬಿದ್ದು ಯಾಕೆ ಒದ್ದಾಡಬೇಕು…? ಅವನಿಗೆ ಈ ಗೋಪಾಲನೆ ಬಿಟ್ಟು ಕೂಲಿ ಕೆಲಸ ಮಾಡಲು ಹೇಳು…” ಎನ್ನುತ್ತಾರಂತೆ. ಆದರೆ ನಾನು ಪ್ರಾಣ ಹೋದರೂ ಗೋಪಾಲನೆ ಬಿಡುವುದಿಲ್ಲ.. ಈ ಗೋಪಾಲನೆ ಯಲ್ಲಿನ ಪ್ರತ್ಯಕ್ಷ ಮತ್ತು ಪರೋಕ್ಷ ಸುಖ ಲಾಭ ನನಗೆ ಮಾತ್ರ ಗೊತ್ತು. ಎಂದು ಪ್ರವೀಣ್ ಹೇಳುತ್ತಾರೆ. ಹೊಸಬರು ಈ ಗೋ ಸೇವೆ ಮಾಡುತ್ತಾ ಮಾರುಕಟ್ಟೆ ಕಂಡುಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುಬಹುದು. ಆ ಬಗೆಗಿನ ತಾಳ್ಮೆ ಇದ್ದಲ್ಲಿ ಮಲೆನಾಡು ಗಿಡ್ಡ ದೇಸಿ ತಳಿ ಹಸು ಸಾಕಣೆ ಮಾಡಿಯೂ ನೆಮ್ಮದಿ ಆರೋಗ್ಯಕರ ಜೀವನ ನೆಡೆಸ ಬಹುದು.. ಎಂಬ ಮಾರ್ಗದರ್ಶನ ವನ್ನೂ ಪ್ರವೀಣ್ ಮಾಡುತ್ತಾರೆ.

ನಾವೆಲ್ಲರೂ ಮಲೆನಾಡು ಗಿಡ್ಡ ತಳಿ ಈ ಕಾಲದ ಜೆರ್ಸಿ ಇತರೆ ಹೆಚ್ಚು ಹಾಲು ಕೊಡುವ ತಳಿ ಗೋವುಗಳನ್ನ ಹೋಲಿಸಿ
ನಷ್ಟ ಕಷ್ಟ ಎನ್ನುವ ಕಾಲದಲ್ಲಿ  ಪ್ರವೀಣ್ ಬೆಳ್ಳಾರೆಯವರು ಮಲೆನಾಡು ಗಿಡ್ಡ ತಳಿಯ ಸಾಕಣೆಯಲ್ಲೇ ಬಾಳು ಬೆಳಗಿಸಿಕೊಳ್ಳುತ್ತಿದ್ದೇನೆ ಎಂದು ಹೆಮ್ಮೆಯಿಂದ ಹೇಳುತ್ತಿರುವುದು ಅತ್ಯಂತ ಖುಷಿಯ ಹೆಮ್ಮೆಯ ವಿಚಾರವಾಗಿದೆ.
ಮಲೆನಾಡು ಗಿಡ್ಡ ತಳಿ ಉಳಿಸೋಣ ಮತ್ತು ಮಲೆನಾಡು ಗಿಡ್ಡ ತಳಿ ಗವ್ಯೋತ್ಪನ್ನಗಳ ಮೌಲ್ಯವರ್ಧನೆಯ ಬಗ್ಗೆ ಚಿಂತನೆ ಮಾಡುವ ಈ ಸಂಧರ್ಭದಲ್ಲಿ ಪ್ರವೀಣ್ ಬೆಳ್ಳಾರೆ ನಮ್ಮೆಲ್ಲರ ಮಧ್ಯೆ ಮಲೆನಾಡು ಗಿಡ್ಡ ಉಳಿಸೋಣ ವಿಚಾರದಲ್ಲಿ
“ಬೆಳ್ಳಿ ರೇಖೆ”. ಅವರ ತಯಾರಿಕೆಯ ಗವ್ಯೋತ್ಪನ್ನಗಳನ್ನು ಅವರಿಂದ ಖರೀದಿಸಿ ಅವರ ಗೋ ಸೇವೆಯನ್ನು ಇನ್ನಷ್ಟು ಪ್ರೋತ್ಸಾಹಿಸೋಣವಾಗಲಿ.

Advertisement
Mr. Praveen Bellare said with confidence that I am living contentedly by managing Malnadu gidda thali cow (Desi cow). Mr. is from Bellare village, Sullia taluk, Dakshina Kannada district. Read PUC wife two children and mother at home. There is a paddy field enough to produce three quintals of rice and a fifteen cents site with a cow shed.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

Published by
ಪ್ರಬಂಧ ಅಂಬುತೀರ್ಥ

Recent Posts

ರಬ್ಬರ್‌ ಕೃಷಿಯಲ್ಲಿ ಇಳುವರಿ

https://youtu.be/9_lVHANbkbw?si=gs51b1nRlhqHImMM

3 hours ago

ಅಡಿಕೆ ಸಿಪ್ಪೆಯ ರಸದಿಂದ ಸೋಪು |

https://youtu.be/NM1Mfpu5cnY?si=-xAjUYPzEeRWDTx8

3 hours ago

ರಬ್ಬರ್‌ ಕೃಷಿ | ಕೃಷಿಯಲ್ಲಿ ಮಾರ್ಪಾಡು – ಹೆಚ್ಚು ಇಳುವರಿ ಪಡೆಯುತ್ತಿರುವ ಕೃಷಿಕ |

ಕೇರಳ ಹಾಗೂ ಕರ್ನಾಟಕ ಗಡಿಭಾಗದಲ್ಲಿ ರಬ್ಬರ್‌ ಕೃಷಿ ಕಳೆದ ಕೆಲವು ವರ್ಷಗಳಿಂದ ಬೆಳೆದಿದೆ.…

15 hours ago

ಕ್ಯಾನ್ಸರ್ ನಿಯಂತ್ರಿಸುವಲ್ಲಿ ಹೆಚ್ಚಿನ ಸಂಶೋಧನೆ ಅಗತ್ಯ | ಬಸವರಾಜ ಬೊಮ್ಮಾಯಿ

ಭಾರತೀಯ ಸಂಶೋಧನಾ ಕೇಂದ್ರಗಳು ಕ್ಯಾನ್ಸರ್ ನಿಯಂತ್ರಿಸುವಲ್ಲಿ ಹೆಚ್ಚಿನ ಸಂಶೋಧನೆ ನಡೆಸಬೇಕು ಎಂದು ಮಾಜಿ…

17 hours ago

ಸಾಮಾಜಿಕ ಬಹಿಷ್ಕಾರ ಪದ್ದತಿಯನ್ನು ಬೇರು ಸಮೇತ ಕೀಳಬೇಕು | ಶ್ಯಾಂ ಭಟ್

ನಾಗರಿಕ ಸಮಾಜದಲ್ಲಿ ಸಮಾಜಿಕ ಬಹಿಷ್ಕಾರ ಎನ್ನುವ ಅನಿಷ್ಟ ಪದ್ದತಿ  ಬುಡ ಸಮೇತ ತೆಗೆದು…

17 hours ago

ಅಡಿಕೆ ಬೆಳೆ ವಿಸ್ತರಣೆ ಚರ್ಚೆ | ಭಾರತದಲ್ಲಿ ಅಡಿಕೆ ಗಿಡ ನಾಟಿ ನಿಷೇಧ ಹೇಳಿಕೆಗೆ ಮಿಜೋರಾಂನಲ್ಲಿ ವಿರೋಧ |

ಮಿಜೋರಾಂ ಮುಖ್ಯಮಂತ್ರಿ ಅವರು ಭಾರತದಲ್ಲಿ ಅಡಿಕೆ ಬೆಳೆಗಳನ್ನು  ನಿಷೇಧಿಸುವ ಕುರಿತು ವಿಧಾನಸಭೆಯಲ್ಲಿ ಮಾತನಾಡಿದ್ದರು.…

19 hours ago