ಮುಂಗಾರು ಪೂರ್ವ ಮಳೆ ತಂದ ಸಂಕಷ್ಟ | ಆಹಾರ ಉತ್ಪನ್ನಗಳ ಧಾರಣೆ ಮೇಲೆ ಪರಿಣಾಮ ?

May 23, 2022
10:47 PM
News Summary
ಮುಂಗಾರು ಪೂರ್ವ ಮಳೆ ಉತ್ತಮವಾಗಿಯೇ ಬಂದಿದೆ. ಕೃಷಿಗೆ, ಭೂಮಿ, ಪರಿಸರಕ್ಕೆ ಉತ್ತಮವಾಗಿತ್ತಾದರೂ ಕೃಷಿ ಬೆಳೆಗೆ, ಇಳುವರಿಗೆ ಸಂಕಷ್ಟವಾಗಿದೆ. 

ಹಲವಾರು ದಿನಗಳಿಂದ ರಾಜ್ಯದಲ್ಲಿ ಸುರಿಯುತ್ತಿರುವ ಮುಂಗಾರು ಪೂರ್ವ ಮಳೆಯಿಂದಾಗಿ ಕರ್ನಾಟಕದಾದ್ಯಂತ ರೈತರು ಸಂಕಷ್ಟ ಅನುಭವಿಸಿದ್ದಾರೆ. ಇನ್ನೊಂದು ಕಡೆ ಆಹಾರ ಸಂಸ್ಕರಣಾ ಗುಡಿ ಕೈಗಾರಿಕೆಗಳೂ ಹೊಡೆತವನ್ನು ಅನುಭವಿಸಿವೆ.

Advertisement
Advertisement
Advertisement

ಮಳೆಯು ದಕ್ಷಿಣ  ಕನ್ನಡ ಜಿಲ್ಲೆಯ ಅಡಿಕೆ ಬೆಳೆಗಾರರಿಗೆ ದೊಡ್ಡ ಹೊಡೆತ ಈಗ ನೀಡಿಲ್ಲವಾದರೂ ರಬ್ಬರ್‌ ಬೆಳೆಗಾರರಿಗೆ ಸಂಕಷ್ಟವಾಗಿದೆ. ಮಳೆಗಾಲ ಪೂರ್ವದಲ್ಲಿ  ರಬ್ಬರ್‌ ಮರಗಳಿಗೆ ಪ್ಲಾಸ್ಟಿಕ್‌ ಹೊದಿಕೆ ಅಳವಡಿಕೆ ಕಷ್ಟವಾಗಿದೆ. ಮಳೆಗಾಲದಲ್ಲಿ ರಬ್ಬರ್‌ ಟ್ಯಾಪಿಂಗ್‌ ಮಾಡಲು ಪ್ಲಾಸ್ಟಿಕ್‌ ಹೊದಿಕೆ ಅನಿವಾರ್ಯವಾಗಿದೆ. ಆದರೆ ಮಳೆಯ ಕಾರಣದಿಂದ ನಿಗದಿತ ಸಮಯಕ್ಕೆ ಪ್ಲಾಸ್ಟಿಕ್‌ ಹೊದಿಕೆ ಅಳವಡಿಕೆ ಕಷ್ಟವಾಗಿದೆ.  ಕಳೆದ ವರ್ಷ ಅಕಾಲಿಕ ಮಳೆ ಅಡಿಕೆ ಒಣಗಿಸಲು ಕಷ್ಟವಾಗಿತ್ತು.

Advertisement

ದಾವಣಗೆರೆಯಂತಹ ಜಿಲ್ಲೆಗಳಲ್ಲಿ ಮಳೆಯಿಂದಾಗಿ ಭತ್ತ ಮತ್ತು ರಾಗಿ ಕಟಾವು ಚಟುವಟಿಕೆಗಳಿಗೆ ಅಡ್ಡಿಯುಂಟಾಗಿದೆ. ಮಾತ್ರವಲ್ಲದೆ ತೇವಾಂಶದ ಜೊತೆಗೆ ಅವುಗಳ ಗುಣಮಟ್ಟದ ಮೇಲೂ ಪರಿಣಾಮ ಬೀರಿದೆ. ಇನ್ನೂ ಕೆಲ ದಿನ ಮಳೆ ಮುಂದುವರಿದರೆ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ದಕ್ಷಿಣ ಕನ್ನಡದ ರೈತರು ಬೇಯಿಸಿದ ಅಕ್ಕಿ ಉತ್ಪಾದನೆಗೆ ಸಹ ಹೊಡೆತ ಬಿದ್ದಿದೆ. ಹಲವು ಕಡೆಗಳಲ್ಲಿ ಈ ವರ್ಷ ಮಾರ್ಚ್‌ನಲ್ಲಿ ಕಟಾವು ಮಾಡಿದ ಬೆಳೆ ಇನ್ನೂ ಹಲವೆಡೆ ಬೇಯಿಸಿ ಒಣಗಿಸಿಲ್ಲ. ಹೀಗಾಗಿ ಇಲ್ಲಿನ ಕುಚುಲಕ್ಕಿ ಇನ್ನೂ ತಯಾರಿ ಹಂತದಲ್ಲಿಯೇ ಇದೆ.

ದ್ವಿದಳ ಧಾನ್ಯಗಳು ಮತ್ತು ತರಕಾರಿಗಳಂತಹ ಅಲ್ಪಾವಧಿಯ ಬೆಳೆಗಳು ಕೂಡಾ ಸಂಕಷ್ಟದಲ್ಲಿದೆ. ತರಕಾರಿ ಕಟಾವು ಮಾಡಿದರೆ ಮಾರುಕಟ್ಟೆ ಸಾಗಿಸಲು ಕಷ್ಟವಾಗುತ್ತದೆ. ಮಳೆ ಬಿದ್ದೊಡನೆ ಕೊಳೆಯಲು ಆರಂಭವಾಗುತ್ತದೆ. ಕಟಾವು ಮಾಡಿದರೂ ಸಂಕಷ್ಟ, ಕಟಾವು ಮಾಡದೇ ಇದ್ದರೂ ಸಂಕಷ್ಟ.ಈ ವರ್ಷ ಅತಿವೃಷ್ಟಿಯಿಂದ ಶೇ.50 ರಷ್ಟು ತರಕಾರಿ ನಾಶವಾಗಿದೆ. ಈಗಾಗಲೇ ಟೊಮೊಟೋ ದರ ಏರಿಕೆಯ ಹಾದಿಯಲ್ಲಿದೆ, ಇದೀಗ ಮಳೆಯ ಕಾರಣದಿಂದ ತರಕಾರಿ ಸರಬರಾಜೂ ಆಗದೆ ಇನ್ನಷ್ಟು ಧಾರಣೆ ಏರಿಕೆ ಸಾಧ್ಯತೆ ಇದೆ.

Advertisement

ಚಿತ್ರದುರ್ಗ ಸೇರಿದಂತೆ ಮಾವು ಬೆಳೆಯುವ ಪ್ರದೇಶದಲ್ಲಿ  ಭಾರಿ ಗಾಳಿ, ಆಲಿಕಲ್ಲು ಮಳೆಯಿಂದಾಗಿ ಮಾವಿನ ಹೂವುಗಳು, ಬೇಗನೆ ಕಟಾವು ಆಗಬೇಕಿದ್ದ ಮಾವಿನ ಹೂವುಗಳು ಸಹ ಬಾಡದ ಹಣ್ಣನ್ನು ಕಳೆದುಕೊಂಡಿದೆ. .ಹಾಗಾಗಿ ಈ ಬಾರಿ ಹೂವು ಕಡಿಮೆಯಾಗಿದೆ. ಮಳೆಯಿಂದ ಮಾವಿಗೆ ಹೆಚ್ಚಿನ ಹಾನಿಯಾಗಿದೆ.

ಈಗಿನ ಮಳೆಗೆ ಕಂದಾಯ ಇಲಾಖೆಯು 7,010 ಹೆಕ್ಟೇರ್ ಕೃಷಿ ಭೂಮಿಯಲ್ಲಿ ಬೆಳೆ ನಷ್ಟದ ಪ್ರಮಾಣವನ್ನು ಅಂದಾಜಿಸಿದೆ ಮತ್ತು 5,736 ಹೆಕ್ಟೇರ್‌ಗಳಲ್ಲಿನ ತೋಟಗಾರಿಕೆ ಬೆಳೆಗಳು ಸಹ ನಾಶವಾಗಿವೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

Advertisement

.

 

Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಹೊಸ ಬೆಳೆ…. ರೈತರು ಚಿಂತನೆ ಮಾಡಬೇಕಾದ್ದೇನು…? ಕರಾವಳಿ, ಮಲೆನಾಡಿನಲ್ಲಿ ಉತ್ಪತ್ತಿ ನೀಡುವ “ಪರ್ಯಾಯ ಬೆಳೆಯ ಅಗತ್ಯವಿದೆ
April 24, 2024
2:57 PM
by: The Rural Mirror ಸುದ್ದಿಜಾಲ
ಪ್ಯಾಕೆಟ್ ಹಿಟ್ಟು ಆರೋಗ್ಯಕ್ಕೆ ಒಳ್ಳೆಯದೆ ಅಥವಾ ಹಾನಿಕರವೇ? ಪ್ಯಾಕೆಟ್ ಹಿಟ್ಟು ಉಪಯೋಗಿಸಿದರೆ ಏನಾಗುತ್ತದೆ ತಿಳಿದುಕೊಳ್ಳಿ..
April 24, 2024
2:32 PM
by: The Rural Mirror ಸುದ್ದಿಜಾಲ
ಅಡಿಕೆ ಆಮದು ಒಪ್ಪಂದು ರದ್ದು…! | ಭರವಸೆ ನೀಡಿದ ಕಾಂಗ್ರೆಸ್‌ |
April 24, 2024
2:23 PM
by: ದ ರೂರಲ್ ಮಿರರ್.ಕಾಂ
24 ಗಂಟೆಗಳಲ್ಲಿ 80 ಭೂಕಂಪ | ಭೂಕಂಪದ ತೀವ್ರತೆಯಲ್ಲಿ ತೈವಾನ್‌ |
April 23, 2024
2:39 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror