#GaneshaFestival | ಇದು ಸಿಹಿ ಸಿಹಿ ಗಣಪತಿ | ಮಂಡ್ಯದಲ್ಲಿ ಪ್ರಥಮ ಬಾರಿಗೆ ಬೆಲ್ಲದ ಗಣಪ ತಯಾರಿ | ಪರಿಸರ ಸ್ನೇಹಿ ಬೆಲ್ಲದ ಗಣಪನಿಗೆ ಭಾರಿ ಬೇಡಿಕೆ |

September 17, 2023
5:24 PM
ಮಂಡ್ಯದಲ್ಲಿ ಪ್ರಥಮ ಬಾರಿಗೆ ಬೆಲ್ಲದ ಗಣಪನನ್ನ ತಯಾರು ಮಾಡಲಾಗ್ತಿದೆ. ಕೆಮಿಕಲ್ ಇಲ್ಲದ ಪಕ್ಕಾ ಪರಿಸರ ಸ್ನೇಹಿ ಬೆಲ್ಲದ ಗಣಪನನ್ನ ತಯಾರು ಮಾಡಿದ್ದಾರೆ.

ಗಣೇಶ ಹಬ್ಬಕ್ಕೆ ಇನ್ನೇನು 2-3 ತಿಂಗಳು ಬಾಕಿ ಇರುವಾಗಲೇ ಗಣೇಶ ಮೂರ್ತಿ ತಯಾರಕರು ತಯಾರಿ ನಡೆಸುತ್ತಾರೆ. ಎಲ್ಲಿ ನೋಡಿದರಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್‌ನದ್ದೇ ಭರಾಟೆ. ಪರಿಸರ ಕಾಳಜಿ ಹಿನ್ನೆಲೆಯಲ್ಲಿ ಪಿಓಪಿ ಗಣೇಶ ಮೂರ್ತಿಗಳನ್ನು ಬ್ಯಾನ್‌ ಮಾಡಿದ್ರೂ, ಅದರ ಹಾವಳಿ ನಿಂತಿಲ್ಲ. ಆದರೆ ಇತ್ತೀಚೆಗೆ ಜನರೇ ಹೆಚ್ಚು ಪರಿಸರ ಸ್ನೇಹಿ ಗಣಪತಿ (Natural) ಮೂರ್ತಿಗಳ ಮೊರೆ ಹೋಗ್ತಿದ್ದಾರೆ. ಹಾಗಾಗಿ ತಯಾರಕರು ಹೆಚ್ಚು ಪರಿಸರ ಸ್ನೇಹಿ ಮೂರ್ತಿಗಳನ್ನೇ ತಯಾರುತ್ತಿದ್ದಾರೆ. ಇದೀಗ ಬೆಲ್ಲದ (Jaggery)  ಗಣಪನ ಮೂರ್ತಿಯನ್ನು  ಸಕ್ಕರೆನಾಡು ಮಂಡ್ಯದಲ್ಲಿದಲ್ಲಿ ತಯಾರಿಸಿ ಈಗ ಬೆಲ್ಲದ ಗಣಪನದ್ದೇ ಹವಾ. ಬೆಲ್ಲದಿಂದ ತಯಾರಾದ ಗಣಪನಿಗೆ ಎಲ್ಲಿಲ್ಲದ ಬೇಡಿಕೆ ಹೆಚ್ಚಾಗಿದೆ.

Advertisement
Advertisement

ಮಂಡ್ಯ ಅಂದ್ರೆ ಬರಿ ಸಕ್ಕರೆನಾಡಲ್ಲಾ. ಮಂಡ್ಯ ಬೆಲ್ಲಕ್ಕೂ ಈಗ ಸಾಕಷ್ಟು ಬೇಡಿಕೆ ಇದೆ. ಈಗ ಮಂಡ್ಯ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದು, ಮಂಡ್ಯದಲ್ಲಿ ಪ್ರಥಮ ಬಾರಿಗೆ ಬೆಲ್ಲದ ಗಣಪನನ್ನ ತಯಾರು ಮಾಡಲಾಗ್ತಿದೆ. ಕೆಮಿಕಲ್ ಇಲ್ಲದ ಪಕ್ಕಾ ಪರಿಸರ ಸ್ನೇಹಿ ಬೆಲ್ಲದ ಗಣಪನನ್ನ ತಯಾರು ಮಾಡಿದ್ದಾರೆ.

Advertisement

ಕಡಿಮೆ ಖರ್ಚಿನಲ್ಲಿ ತಯಾರು: ಮಂಡ್ಯದ ವಿಕಾಸನ ಸಂಸ್ಥೆಯ ಸಹಯೋಗದೊಂದಿಗೆ ಹಳುವಾಡಿ ಗ್ರಾಮದ ತಮ್ಮಯ್ಯ ಎಂಬುವವರು ತಮ್ಮ ಹಾಲೆ ಮನೆಯಲ್ಲಿ ಗಣೇಶನ ಮೂರ್ತಿಗಳನ್ನ ತಯಾರು ಮಾಡ್ತಿದ್ದಾರೆ. ಸುಮಾರು 2 ಅಡಿ ಎತ್ತರದಷ್ಟು ಗಣೇಶ ಮೂರ್ತಿ ಹಾಗೂ ಅರ್ಧ ಅಡಿ ಎತ್ತರದಷ್ಟು ಗೌರಿ ಮೂರ್ತಿಗಳನ್ನ ಸಹ ತಯಾರು ಮಾಡಲಾಗ್ತಿದೆ. ಈ ಗಣೇಶ ಮೂರ್ತಿ ಅತಿ ಕಡಿಮೆ ಖರ್ಚಿನಲ್ಲಿ ತಯಾರು ಮಾಡಲಾಗ್ತಿದ್ದು, ಗಣೇಶ ಮೂರ್ತಿ ಕೊಂಡುಕೊಳ್ಳುವವರಿಗೂ ಇದು ಕೈಗೆಟುಕುವ ಬೆಲೆಗೆ ದೊರಕುತ್ತಿದೆ.

Advertisement

ಹಲವು ಜಿಲ್ಲೆಗಳಿಂದ ಬೇಡಿಕೆ : ಸದ್ಯ ಮಂಡ್ಯ ಬೆಲ್ಲದ ಗಣಪನಿಗೆ ರಾಜ್ಯದ ಹಲವು ಜಿಲ್ಲೆಗಳಿಂದ ಬೇಡಿಕೆ ಹೆಚ್ಚಾಗಿದೆ. ಅಲ್ಲದೆ ವಿಸರ್ಜನೆ ಸಂದರ್ಭದಲ್ಲಿ ಕೂಡ ನೀರಿಗೆ ಗಣಪನನ್ನ ಬಿಟ್ಟ ಬಳಿಕ ಬಹು ಬೇಗ ನೀರಿನಲ್ಲಿ ಗಣಪತಿ ಕರಗಲಿದೆ. ಹೀಗಾಗಿ ನೀವು ಕೂಡ ಈ ಬಾರಿ ಬೆಲ್ಲದ ಗಣಪತಿಗೆ ಜೈ ಎನ್ನುವ ಮೂಲಕ ಪರಿಸರಕ್ಕೆ ಹಾನಿಯೂಂಟು ಮಾಡುವ ಪಿಒಪಿ ಹಾಗೂ ವಿಷಕಾರಿ ಬಣ್ಣದ ಗಣಪನಿಗೆ ಗುಡ್ ಬೈ ಹೇಳಿ.

Source : Digital Media

Advertisement
Advertisement
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಸಮುದ್ರದ ಉಪ್ಪು, ಅಯೋಡಿಕರಿಸಿದ ಟೇಬಲ್ ಉಪ್ಪು, ಸೈಂಧವ ಉಪ್ಪು, ಕಪ್ಪು ಉಪ್ಪು : ಯಾವ ಉಪ್ಪು ಆರೋಗ್ಯಕ್ಕೆ ಒಳ್ಳೆಯದು?
May 19, 2024
5:08 PM
by: The Rural Mirror ಸುದ್ದಿಜಾಲ
ವರುಣ ಕೃಪೆ ತೀರದಿದ್ರೆ ಭಾರಿ ಸಂಕಷ್ಟ : ಡೆಡ್ ಸ್ಟೋರೇಜ್ ತಲುಪಿದ ತುಂಗಭದ್ರಾ ಜಲಾಶಯ!
May 19, 2024
2:16 PM
by: The Rural Mirror ಸುದ್ದಿಜಾಲ
Karnataka Weather | 19-05-2024 | ಇಂದೂ ಮಳೆ ಇದೆ ಅಲ್ಲಲ್ಲಿ | ಮೇ.22 ನಂತರ ಚಂಡಮಾರುತ ಸಾಧ್ಯತೆ |
May 19, 2024
12:22 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror