ಗಣೇಶ ಹಬ್ಬಕ್ಕೆ ಇನ್ನೇನು 2-3 ತಿಂಗಳು ಬಾಕಿ ಇರುವಾಗಲೇ ಗಣೇಶ ಮೂರ್ತಿ ತಯಾರಕರು ತಯಾರಿ ನಡೆಸುತ್ತಾರೆ. ಎಲ್ಲಿ ನೋಡಿದರಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್‌ನದ್ದೇ ಭರಾಟೆ. ಪರಿಸರ ಕಾಳಜಿ ಹಿನ್ನೆಲೆಯಲ್ಲಿ ಪಿಓಪಿ ಗಣೇಶ ಮೂರ್ತಿಗಳನ್ನು ಬ್ಯಾನ್ ಮಾಡಿದ್ರೂ, ಅದರ ಹಾವಳಿ ನಿಂತಿಲ್ಲ. ಆದರೆ ಇತ್ತೀಚೆಗೆ ಜನರೇ ಹೆಚ್ಚು ಪರಿಸರ ಸ್ನೇಹಿ ಗಣಪತಿ (Natural) ಮೂರ್ತಿಗಳ ಮೊರೆ ಹೋಗ್ತಿದ್ದಾರೆ. ಹಾಗಾಗಿ ತಯಾರಕರು ಹೆಚ್ಚು ಪರಿಸರ ಸ್ನೇಹಿ ಮೂರ್ತಿಗಳನ್ನೇ ತಯಾರುತ್ತಿದ್ದಾರೆ. ಇದೀಗ ಬೆಲ್ಲದ (Jaggery) ಗಣಪನ ಮೂರ್ತಿಯನ್ನು ಸಕ್ಕರೆನಾಡು ಮಂಡ್ಯದಲ್ಲಿದಲ್ಲಿ ತಯಾರಿಸಿ ಈಗ ಬೆಲ್ಲದ ಗಣಪನದ್ದೇ ಹವಾ. ಬೆಲ್ಲದಿಂದ ತಯಾರಾದ ಗಣಪನಿಗೆ ಎಲ್ಲಿಲ್ಲದ ಬೇಡಿಕೆ ಹೆಚ್ಚಾಗಿದೆ.
ಮಂಡ್ಯ ಅಂದ್ರೆ ಬರಿ ಸಕ್ಕರೆನಾಡಲ್ಲಾ. ಮಂಡ್ಯ ಬೆಲ್ಲಕ್ಕೂ ಈಗ ಸಾಕಷ್ಟು ಬೇಡಿಕೆ ಇದೆ. ಈಗ ಮಂಡ್ಯ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದು, ಮಂಡ್ಯದಲ್ಲಿ ಪ್ರಥಮ ಬಾರಿಗೆ ಬೆಲ್ಲದ ಗಣಪನನ್ನ ತಯಾರು ಮಾಡಲಾಗ್ತಿದೆ. ಕೆಮಿಕಲ್ ಇಲ್ಲದ ಪಕ್ಕಾ ಪರಿಸರ ಸ್ನೇಹಿ ಬೆಲ್ಲದ ಗಣಪನನ್ನ ತಯಾರು ಮಾಡಿದ್ದಾರೆ.
ಕಡಿಮೆ ಖರ್ಚಿನಲ್ಲಿ ತಯಾರು: ಮಂಡ್ಯದ ವಿಕಾಸನ ಸಂಸ್ಥೆಯ ಸಹಯೋಗದೊಂದಿಗೆ ಹಳುವಾಡಿ ಗ್ರಾಮದ ತಮ್ಮಯ್ಯ ಎಂಬುವವರು ತಮ್ಮ ಹಾಲೆ ಮನೆಯಲ್ಲಿ ಗಣೇಶನ ಮೂರ್ತಿಗಳನ್ನ ತಯಾರು ಮಾಡ್ತಿದ್ದಾರೆ. ಸುಮಾರು 2 ಅಡಿ ಎತ್ತರದಷ್ಟು ಗಣೇಶ ಮೂರ್ತಿ ಹಾಗೂ ಅರ್ಧ ಅಡಿ ಎತ್ತರದಷ್ಟು ಗೌರಿ ಮೂರ್ತಿಗಳನ್ನ ಸಹ ತಯಾರು ಮಾಡಲಾಗ್ತಿದೆ. ಈ ಗಣೇಶ ಮೂರ್ತಿ ಅತಿ ಕಡಿಮೆ ಖರ್ಚಿನಲ್ಲಿ ತಯಾರು ಮಾಡಲಾಗ್ತಿದ್ದು, ಗಣೇಶ ಮೂರ್ತಿ ಕೊಂಡುಕೊಳ್ಳುವವರಿಗೂ ಇದು ಕೈಗೆಟುಕುವ ಬೆಲೆಗೆ ದೊರಕುತ್ತಿದೆ.
ಹಲವು ಜಿಲ್ಲೆಗಳಿಂದ ಬೇಡಿಕೆ : ಸದ್ಯ ಮಂಡ್ಯ ಬೆಲ್ಲದ ಗಣಪನಿಗೆ ರಾಜ್ಯದ ಹಲವು ಜಿಲ್ಲೆಗಳಿಂದ ಬೇಡಿಕೆ ಹೆಚ್ಚಾಗಿದೆ. ಅಲ್ಲದೆ ವಿಸರ್ಜನೆ ಸಂದರ್ಭದಲ್ಲಿ ಕೂಡ ನೀರಿಗೆ ಗಣಪನನ್ನ ಬಿಟ್ಟ ಬಳಿಕ ಬಹು ಬೇಗ ನೀರಿನಲ್ಲಿ ಗಣಪತಿ ಕರಗಲಿದೆ. ಹೀಗಾಗಿ ನೀವು ಕೂಡ ಈ ಬಾರಿ ಬೆಲ್ಲದ ಗಣಪತಿಗೆ ಜೈ ಎನ್ನುವ ಮೂಲಕ ಪರಿಸರಕ್ಕೆ ಹಾನಿಯೂಂಟು ಮಾಡುವ ಪಿಒಪಿ ಹಾಗೂ ವಿಷಕಾರಿ ಬಣ್ಣದ ಗಣಪನಿಗೆ ಗುಡ್ ಬೈ ಹೇಳಿ.
Source : Digital Media
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…