ಗೋ ಉಳಿಸಲು “ದೊಡ್ಡಿ” ಗೆ ಮೊರೆ ಹೋಗಬಹುದೇ…? ಮೂರು ದಶಕದ ಹಿಂದೆ ತುಂಬಿದ ಸರ್ಕಾರಿ ಶಾಲೆಯ ತರಗತಿ ಕೋಣೆಯನ್ನು ದನದ ದೊಡ್ಡಿ ಇದ್ದಂಗಿದೆ ಎನ್ನುತ್ತಿದ್ದರು. ಇವತ್ತು ದನದ ದೊಡ್ಡಿ ಇಲ್ಲದಿದ್ದರೂ , ಜಾನುವಾರು ಕಡಿಮೆಯಾದರೂ ಆಗಾಗ್ಗೆ “ದೊಡ್ಡಿ” ಎಂಬ ಪದ ಕೇಳಿಸಿಕೊಳ್ಳುತ್ತೇವೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಆರಗ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲೊಂದು ದರೆಗುರುಳುವ ದಿನ ಎಣಿಸುತ್ತಿರುವ ದನದ ದೊಡ್ಡಿಯೊಂದಿದೆ. ನನಗೆ ಗೊತ್ತಿದ್ದಂತೆ ಮಲೆನಾಡಿನ ಬಹುತೇಕ ಗ್ರಾಮ ಪಂಚಾಯತಿಯಲ್ಲಿ ದನದ ದೊಡ್ಡಿ ಇತ್ತು. ಊರ ತುಡುಗು ಜಾನುವಾರುಗಳು ಕೃಷಿ ಜಮೀನಿನ ಮೇಲೆ ದಾಳಿ ಮಾಡಿದಾಗ ಆ ಸದರಿ ಜಮೀನಿನ ಮಾಲಿಕರು ಈ ತುಡುಗು ಜಾನುವಾರುಗಳನ್ನು ಈ ದೊಡ್ಡಿ ತಂದು ಗ್ರಾಮ ಪಂಚಾಯತಿ ಕಾರ್ಯಾಲಯ ಸಂಧರ್ಭದಲ್ಲಿ, ದೊಡ್ಡಿಯ ಬೀಗದ ಕೀಲಿ ಪಡೆದು ಗೋವುಗಳ ದೊಡ್ಡಿ ಬಂಧನವನ್ನು ದಾಖಲಿಸಿ ಬರುತ್ತಿದ್ದರು. ಗ್ರಾಮ ಪಂಚಾಯತಿಯವರು ಆ ಬಂಧಿತ ಜಾನುವಾರುಗಳಿಗೆ ಮೇವು ನೀರು ಕೊಡುತ್ತಿದ್ದರು. ತದನಂತರ ಆ ತುಡುಗು ಜಾನುವಾರುಗಳ ಮಾಲಿಕರು ತಮ್ಮ ಜಾನುವಾರುಗಳು ದೊಡ್ಡಿಯಲ್ಲಿ ಬಂಧನವಾಗಿರುವುದನ್ನ ಖಾತ್ರಿ ಪಡಿಸಿಕೊಂಡು ಗ್ರಾಮ ಪಂಚಾಯತಿಗೆ ಸೂಕ್ತ “ದಂಡ” ಪಾವತಿಸಿ ತಮ್ಮ ಗೋವುಗಳನ್ನು ಬಿಡಿಸಿಕೊಂಡು ಬರುತ್ತಿದ್ದರು.
ಇದು ಗೋವುಗಳ ಮಾಲಿಕ ರಿಗೆ ಒಂದು ಬಗೆಯ ಶಿಕ್ಷೆ ಮತ್ತು ಎಚ್ಚರಿಕೆ ಇದ್ದಂತೆ. ಇದೆಲ್ಲಾ ಒಂದು ಕಾಲದಲ್ಲಿ ನಮ್ಮ ಹಳ್ಳಿಯಲ್ಲಿ ಯಥೇಚ್ಛವಾಗಿ ಜಾನುವಾರುಗಳು ಇದ್ದ ಕಾಲದಲ್ಲಿ ನೆಡೆಯುತ್ತಿದ್ದ ಘಟನೆ. ಆದರೆ ಇದೀಗ ದೊಡ್ಡಿಗಳು ಹೀಗಿತ್ತು ಎಂದು ನೋಡಲೇ ಸಿಗದಷ್ಟು ಕಾಣೆ ಯಾಗಿದೆ. ನಮ್ಮ ಆರಗದ ದೊಡ್ಡಿ ವಿಶೇಷ ವಿನ್ಯಾಸದಿಂದ ದೂರದಿಂದ ನೋಡಿದವರ ಗಮನ ಸೆಳೆಯುತ್ತದೆ. ಬಹುತೇಕ ಆರಗದ ವರಿಗೇ ಈ ಕಟ್ಟಡ ಏನು ಎತ್ತ ಎಂಬ ಮಾಹಿತಿ ಇಲ್ಲ. ಈ ಕಟ್ಟಡದೊಳಗೆ ಇಪ್ಪತ್ತೈದು ಮೂವತ್ತು ಜಾನುವಾರುಗಳನ್ನು ತುಂಬಬಹುದು. ದೊಡ್ಡಿಯ ಮುಂದಿನ ಭಾಗದ ಕೋಣೆ ಯಲ್ಲಿ ದೊಡ್ಡಿ ನಿರ್ವಾಹಕನಿಗೆ ಚಿಕ್ಕದಾಗಿ ವ್ಯವಸ್ಥೆ ಇದೆ.
ಈಗಲೂ ಈ ದೊಡ್ಡಿಯ ಪರಿಕಲ್ಪನೆಯ ಊರಿಗೊಂದು “ಗೋ ಪಾಲನಾ ಕೇಂದ್ರ”ದ ಅವಶ್ಯಕತೆ ಇದೆ. ಊರಿನ ಗೋಪಾಲಕ ರೈತರಿಗೆ ಪರ ಊರಿಗೆ ಹೋಗುವುದಾದಲ್ಲಿ ಕೆಲ ದಿವಸಗಳವರಗೆ ಅವರ ಗೋವುಗಳನ್ನು ನಿರ್ವಹಣೆ ಮಾಡಿಕೊಡುವಂತಹ “ಗೋಪಾಲನಾ ಕೇಂದ್ರ” ಬೇಕಿದೆ. ಈ ಗೋಪಾಲನಾ ಕೇಂದ್ರ ಪಟ್ಟಣದ ಸಾಕು ಪ್ರಾಣಿಗಳ ” ಪೆಟ್ ಕೇರ್ ಸೆಂಟರ್ ” ನಮೂನೆಯಲ್ಲಿ ನಿರ್ವಹಣೆ ಆಗಬೇಕು. ಈ ತರಹದ ಗೋಪಾಲನಾ ಕೇಂದ್ರ ವನ್ನು ಸರ್ಕಾರ ಅಂಗನವಾಡಿ ಯಂತೆ ಸ್ಥಾಪಿಸಿ ನಿರ್ವಹಣೆ ಮಾಡಿದರೆ ಸಾಕಷ್ಟು ಗೋವು ಗಳು ಕಸಾಯಿಖಾನೆಯ ಪಾಲಾಗದೇ ಉಳಿಯುತ್ತದೆ. ಇದನ್ನು ಖಾಸಗಿ ಮಠ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸರ್ಕಾರ ಸ್ಥಾಪಿಸಬಹುದು. ನೆನಪಿಡಿ ಇದು ಗೋಶಾಲೆ ಅಲ್ಲ…
ಊರ ಕೃಷಿಕ ಗೋಪಾಲಕರ ಗೋವುಗಳ ತಾತ್ಕಾಲಿಕ ಪಾಲನಾ ಕೇಂದ್ರ ಮಾತ್ರ. ಗೋಪಾಲಕರಿಗೆ ಅನಾರೋಗ್ಯ ವಾದಾಗ, ತುರ್ತು ಕಾರ್ಯ ನಿಮಿತ್ತ ಪರ ಊರಿಗೆ ಹೋಗಬೇಕಾದ ಸಂದರ್ಭದಲ್ಲಿ, ಮದುವೆ ಮಂಜಿ ಇನ್ನಿತರ ಕಾರ್ಯಕ್ರಮ ದ ಸಂಧರ್ಭದಲ್ಲಿ ಇಂತಹ ಗೋಪಾಲನಾ ಕೇಂದ್ರ ದಲ್ಲಿ ಗೋಪಾಲಕರು ತಮ್ಮ ಗೋವುಗಳನ್ನು ತಂದು ಬಿಟ್ಟು ತಮ್ಮ ಕೆಲಸ ಮುಗಿದ ಮೇಲೆ ಮರಳಿ ತಮ್ಮ ಮನೆಗೆ ಹಸುಗಳನ್ನು ಹೊಡೆದುಕೊಂಡು ಹೋಗಬಹುದು. ಗೋವುಗಳ ನಿರ್ವಹಣಾ ಬಾಬ್ತಿನ ಹಣವನ್ನು ಗೋವುಗಳ ಮಾಲಿಕ ಗೋಪಾಲನಾ ಕೇಂದ್ರ ದವರಿಗೆ ನೀಡಬೇಕು. ಈ ತರಹದ ಸಾಧ್ಯತೆಯ ಬಗ್ಗೆ ಚಿಂತನೆ ಮಾಡಬೇಕಿದೆ….
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…
ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…