Advertisement
Opinion

ಹೋಮಿಯೊಪತಿಯಿಂದ ಜಾನುವಾರುಗಳ ಚಿಕಿತ್ಸೆ | ಮೂರು ಸಾವಿರ ಉಪಚಾರಗಳ ಅವಲೋಕನ |

Share

ಮನುಷ್ಯರ ಹಾಗೆ ಜಾನುವಾರುಗಳಿಗೂ ಅಗತ್ಯ ಚಿಕಿತ್ಸೆಗಳನ್ನು ನೀಡಬೇಕಾಗುತ್ತದೆ.‌ ಹಿಂದಿನ ಕಾಲದಲ್ಲಿ ಹಳ್ಳಿ ಮದ್ದಿನಿಂದಲೇ ಜಾನುವಾರುಗಳ ರೋಗಗಳನ್ನು ಗುಣಪಡಿಸಲಾಗುತ್ತಿತ್ತು. ಕ್ರಮೇಣ ಇತರ ಔಷಧಿ ಬಂತು. ಹಳ್ಳಿ ಮದ್ದು ಮರೆಗೆ ಸರಿಯಿತು. ಈಗ ಹೋಮಿಯೋಪತಿಯಲ್ಲಿ ಕೂಡ ಜಾನುವಾರುಗಳ ರೋಗ ಗುಣಪಡಿಸುವ ಔಷಧಿಗಳು ಲಭ್ಯವಿದೆ.  

Advertisement
Advertisement

ಇಲ್ಲಿ ಹೋಮಿಯೊಪತಿಯಿಂದ(Homeopathy) ಚಿಕಿತ್ಸೆ(Treatment) ಮಾಡಲಾದ ಮೂರು ಸಾವಿರ ಜಾನುವಾರುಗಳ ರೋಗಗಳು(Cattle desease), ಬಳಸಿದ ಔಷಧಿ(Medicine), ಜಾನುವಾರುಗಳ ಮಾಲೀಕರು, ದಿನಾಂಕ, ಮುಂತಾದ ವಿವರಗಳನ್ನು ವ್ಯವಸ್ಥಿತವಾಗಿ ದಾಖಲೆ ಮಾಡಿಕೊಳ್ಳಲಾಗಿದೆ. ಹಳೆಯ ದಾಖಲೆಗಳ ಆಧಾರದ ಮೇಲೆ ರೋಗಗಳ ಪ್ರಮಾಣವನ್ನು ಶೇಕಡಾವಾರು ವಿಂಗಡಣೆ ಮಾಡಲಾಗಿದೆ. ಈ ಚಾರ್ಟ ನೋಡಿದರೆ ಒಂದು ವಿಷಯ ಸ್ಪಷ್ಟವಾಗಿ ಗಮನಿಸಬಹುದು. ಶೇಕಡಾ 43 ಪ್ರಮಾಣ ಅಂದರೆ 1302 ರೋಗಗಳು ಕೆಚ್ಚಲಿಗೆ(mastitis) ಸಂಬಂಧಪಟ್ಟ ಕೇಸ್ ಗಳೇ ಆಗಿದೆ. ಯಾಕೆ ಇಷ್ಟೊಂದು, ಹತ್ತಿರ ಹತ್ತಿರ ಅರ್ಧದಷ್ಟು ಶೇಕಡ ರೋಗ ಕೆಚ್ಚಲು ಬಾವಿನ ಸಮಸ್ಯೆಗಳೇ ಆಗಿದೆ? ಉತ್ತರ ಸ್ಪಷ್ಟವಾಗಿದೆ.

Advertisement

ಹೋಮಿಯೊಪತಿ ಚಿಕಿತ್ಸಾ ಪದ್ಧತಿಯು ಕೆಚ್ಚಲು ಬಾವಿನ ರೋಗ ಗುಣಪಡಿಸಲು ಅತ್ಯಂತ ಯಶಸ್ವಿ ಆಗಿದೆ. ಹೈನುಗಾರಿಕೆಯಲ್ಲಿ ಅತಿ ಹೆಚ್ಚು ಆರ್ಥಿಕ ನಷ್ಟ ತಂದೊಡ್ಡುವ ರೋಗ ಇದೇ ಕೆಚ್ಚಲು ಬಾವು. ಕೆಚ್ಚಲು ಬಾವಿನಲ್ಲಿಯೂ ಬಹಳಷ್ಟು ಬೇರೆ ಬೇರೆ ವಿಧದ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಅವುಗಳಲ್ಲಿ ಅತಿ ಹೆಚ್ಚು ಕೇಸ್ ಬರುವದು ಕೆಚ್ಚಲು ಗಟ್ಟಿಯಾಗುವದು, ಹಾಲು ಮೊಸರಿನಂತೆ ಆಗುವದು, ಜ್ವರ, ಹಿಂಡಿ ಹುಲ್ಲು ತಿನ್ನುವುದಿಲ್ಲ. ಇದು ಕೆಚ್ಚಲು ಬಾವಿನ ಆರಂಭದ ಲಕ್ಷಣ. ಸಾಧ್ಯವಾದಷ್ಟು ಬೇಗ ಹೋಮಿಯೊಪತಿ ಔಷಧಿ ಹಾಕಿದರೆ ಕೇವಲ ಒಂದರಿಂದ ಎರಡು ದಿನದಲ್ಲಿ ಆಕಳನ್ನು ಸಹಜ ಸ್ಥಿತಿಗೆ ತರಬಹುದು. ಸಾಮಾನ್ಯವಾಗಿ ಹಾಲು ಹೆಚ್ಚಿಗೆ ಇರುವ ಕೆಚ್ಚಲಿನ ಭಾಗಕ್ಕೆ ರೋಗ ತಗಲುತ್ತದೆ. ಈ ರೀತಿಯ ಕೇಸ್ ಗಳು 945 ಬಂದಿದೆ.

ನಂತರದ ಸಮಸ್ಯೆ ಎಂದರೆ ಹಾಲಿನಲ್ಲಿ ರಕ್ತ ಮಿಶ್ರವಾಗಿ ಬರುವುದು. ಕರು ಹಾಕಿದ ಆರಂಭದ ದಿನಗಳಲ್ಲಿ ಈ ತೊಂದರೆ ಹೆಚ್ಚು. ಜಾಸ್ತಿ ಆತಂಕ ಪಡುವ ಅವಶ್ಯಕತೆ ಇಲ್ಲ. ಮೂರು ದಿನಗಳೊಳಗಾಗಿ ಹಾಲನ್ನು ಶುದ್ಧ ಗೊಳಿಸಬಹುದು. ನಂತರದ ದಿನಗಳಲ್ಲೂ ಈ ರೋಗ ಬರುವ ಸಾಧ್ಯತೆ ಇದೆ. ಹಾಲಿನಲ್ಲಿ ರಕ್ತ ಸಮಸ್ಯೆಯ 161 ಕೇಸ್ ಗಳು ಬಂದಿದೆ. ಇವಲ್ಲದೇ ಮೊಲೆಬಾವು ( ಎಮ್ಮೆಗಳಲ್ಲೆ ಮೊಲೆ ಉರಿಊತಗೊಂಡು ಕಪ್ಪಗಾಗಿ ಕೊಳೆಯಲು ಶುರು ಆಗುತ್ತದೆ ), ಹಾಲು ಸೊರೆ ಬಿಡುವುದಿಲ್ಲ, ಮೊಲೆ ಒಳಗೆ ಹಾಲು ಬರುವ ದಾರಿಯಲ್ಲಿ ದುರ್ಮಾಂಸದ ರೀತಿ ಬೆಳೆದು ಹಾಲು ಹೊರಗೆ ಬರುವುದಿಲ್ಲ, ಹಾಲಿನ ರುಚಿಯಲ್ಲಿ ವ್ಯತ್ಯಾಸ ಬರುವುದು, ಗುಣಮಟ್ಟ ಕಡಿಮೆ ಇರುವುದು, ಮುಂತಾದ ಕೆಚ್ಚಲಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳು ಹೋಮಿಯೊಪತಿಯಿಂದ ಗುಣವಾಗಿದೆ.

Advertisement

ಕೆಲವು ಆಕಳು ಗಬ್ಬ ಕಟ್ಟಿದ ಏಳು ತಿಂಗಳಾದರೂ ಹಾಲಿನ ಪ್ರಮಾಣ ಕಡಿಮೆ ಆಗುವುದಿಲ್ಲ. ಹಾಲನ್ನು ಒಣಗಿಸಲು ಒಮ್ಮೆಲೆ ನೀರು, ಹಿಂಡಿ ಕಡಿಮೆ ಮಾಡುವ ಹಾಗೂ ಇಲ್ಲ. ಈ ಸಮಯದಲ್ಲಿ ಹೋಮಿಯೊಪತಿ ಮೆಡಿಸಿನ್ ಉಪಯೊಗಕ್ಕೆ ಬರುತ್ತದೆ. ಹಾಲನ್ನು ಒಣಗಿಸುವುದರ ಜೊತೆಗೆ ಕೆಚ್ಚಲು ಬಾವು ಬರದಂತೆಯೂ ತಡೆಯುತ್ತದೆ. ನಾವು ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಗಬ್ಬದ ಆಕಳಿಗೆ ( ಹಾಲು ಹಿಂಡದಿರುವ ) ಕೆಚ್ಚಲು ಬಾವು ಬಂದರೆ ಗುರುತಿಸುವುದು ಕಷ್ಟ. ಅದರಲ್ಲೂ ಜ್ವರ ಬರದೇ, ಆಹಾರ ಬಿಡದೆ ಇದ್ದರೆ ಯಾರೂ ಕೆಚ್ಚಲ ಕಡೆ ಗಮನ ಹರಿಸುವುದಿಲ್ಲ. ಇಂತಹ ಕೆಚ್ಚಲು ಬಾವು ನಮಗೆ ತಿಳಿಯುವಷ್ಟರಲ್ಲಿ ಕೆಲ ದಿನಗಳು ಕಳೆದು ಹೋಗಿರುತ್ತದೆ. ಯಾವುದೇ ಕಾರಣಕ್ಕೂ ಹಾಳಾದ ಹಾಲನ್ನು ಕೆಚ್ಚಲಿನಲ್ಲಿ ಉಳಿಸ ಬಾರದು. ಕೆಚ್ಚಲಿನ ಯಾವ ಭಾಗದ ಹಾಲು ಹಾಳಾಗಿದೆಯೋ ಅದನ್ನು ಮಾತ್ರ ಹಿಂಡಿ ಸ್ವಚ್ಛಗೊಳಿಸಬೇಕು.

ಬರಹ :
ಪ್ರಸನ್ನ ಹೆಗಡೆ
–   9448202477
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ನೀವು ನಿರಂತರವಾಗಿ ಹೆಡ್‌ಫೋನ್ ಬಳಸುತ್ತಿದ್ದರೆ ಜಾಗರೂಕರಾಗಿರಿ! ಕಿವಿಯ ಮೇಲೆ ಪರಿಣಾಮಗಳು…..

ಇತ್ತೀಚಿನ ದಿನಗಳಲ್ಲಿ, ಜನರು ಮೊಬೈಲ್ ಫೋನ್‌ಗಳನ್ನು(Mobile Phone) ಹಿಡಿದಿಟ್ಟುಕೊಳ್ಳುವ ಬದಲು ಇಯರ್‌ಫೋನ್(Ear Phone)…

28 mins ago

ಹಲಸು ಮೇಳದತ್ತೊಂದು ಪಯಣ ಮಾಡೋಣವೇ? : ಪುತ್ತೂರಿನಲ್ಲಿ ಹಲಸು ಮೇಳ

ಇದೋ, ಬಂದಿದೆ ನೋಡಿ 2024ರ ಹಲಸು ಮೇಳ(Jackfruit Mela) ಪುತ್ತೂರು(Puttur). ಪ್ರತಿ ವರ್ಷದಂತೆ…

55 mins ago

ಸಗಣಿಯಲ್ಲಡಗಿದೆ ಬೆಳೆಗೆ ಅವಶ್ಯಕ ಪೋಷಕಾಂಶಗಳು : ನೈಸರ್ಗಿಕ ಕೃಷಿಯಲ್ಲಿ ದೇಶಿ ಗೋವಿನ ಮಹತ್ವ ಬಹಳ ಮುಖ್ಯ

ಒಂದು ಸಸ್ಯ(Plant) ಪರಿಪೂರ್ಣವಾಗಿ ಮತ್ತು ಆರೋಗ್ಯವಾಗಿ(Healthy) ಬೆಳೆಯಬೇಕಾದರೆ ಸುಮಾರು 108 ಪೋಷಕಾಂಶಗಳ(Nutrition) ಅವಶ್ಯಕತೆ…

1 hour ago

ಗದಗ ಜಿಮ್ಸ್ ಆಸ್ಪತ್ರೆಗೆ ತಟ್ಟಿದ ಬರದ ಬಿಸಿ | ನೀರಿಲ್ಲದೆ ರೋಗಿಗಳ ಪರದಾಟ | ದಾರಿಕಾಣದಾದ ಸಿಬ್ಬಂದಿಗಳು

ರಾಜ್ಯದ ಕೆಲ ಭಾಗಗಳಲ್ಲಿ ಚೆನ್ನಾಗಿ ಮಳೆಯಾಗುತ್ತಿದೆ(Heavy Rain). ನೀರಿಲ್ಲದೆ ಬೇಸತ್ತಿದ್ದ ಜನ ಜಾನುವಾರುಗಳು…

2 hours ago

ಹವಾಮಾನ ಸಂಕಷ್ಟ | ಕಾದ ಭೂಮಿಗೆ ‘ರೆಡ್‌ ಅಲರ್ಟ್‌’ | ಜಗತ್ತಿನ ತಾಪಮಾನ 1.5 ಡಿಗ್ರಿ ಇಳಿಕೆ ಸಾಧ್ಯವಾಗುತ್ತಿಲ್ಲ…!

ಹವಾಮಾನ ವೈಪರೀತ್ಯ, ತಾಪಮಾನ ಏರಿಕೆ ಜಗತ್ತಿನಲ್ಲಿ ಬಹುದೊಡ್ಡ ಸಮಸ್ಯೆಯಾಗಿದೆ. ಆಹಾರ ಉತ್ಪಾದನೆ ಮೇಲೂ…

2 hours ago

Karnataka Weather | 17-05-2024 | ಹೆಚ್ಚಿನ ಕಡೆಗಳಲ್ಲಿ ಗುಡುಗು ಸಹಿತ ಮಳೆ | ಮೇ 22ರ ನಂತರ ವಾಯುಭಾರ ಕುಸಿತ ಸಾಧ್ಯತೆ |

ಮೇ 22ರ ನಂತರ ಪ್ರಭಲ ಮುಂಗಾರು ಮಾರುತಗಳು ಅಂಡಮಾನ್ ಕಡೆ ಚಲಿಸುವುದರಿಂದ ಬಂಗಾಳಕೊಲ್ಲಿಯಲ್ಲಿ…

4 hours ago