ಮನುಷ್ಯನಾಗಿ ಹುಟ್ಟಿದ ಮೇಲೆ ಏನಾದ್ರು ತಿಂದು ಬದುಕಲೇ ಬೇಕು. ಆದರೆ ಈಗಿನ ಪರಿಸ್ಥಿತಿಯಲ್ಲಿ ಯಾವುದನ್ನು ತಿನ್ನುವುದು ಅನ್ನೋದೇ ದೊಡ್ಡ ತಲೆ ನೋವಾಗಿದೆ. ಯಾವುದನ್ನು ಮುಟ್ಟುವಂಗಿಲ್ಲ. ಬೆಲೆ ಗಗನಕ್ಕೇರಿ ಕುಳಿತಿದೆ. ಹಣ್ಣು, ತರಕಾರಿ, ಬೇಳೆಕಾಳು.. ಈಗ ಮೀನು ಬೆಲೆಯೂ ಏರಿಕೆ ಕಂಡಿದೆ.
ತರಕಾರಿ ಬೆಲೆ#Vegetable Price ಹೆಚ್ಚಳ ಆಗಿದ್ದು, ಜನರ ಜೇಬು ಸುಡುತ್ತಿದೆ. ಅದರಲ್ಲಿಯೂ ಟೊಮೆಟೊಗಳು#Tomato ನೋಡಲು ಮಾತ್ರ ಸುಂದರವಾಗಿ ಕಾಣುತ್ತಿವೆ. ಖರೀದಿ ಮಾಡಲು ಹೋದಾಗ ಕೆಂಡದಂತೆ ಸುಡುತ್ತಿವೆ. ಇದೀಗ ಮೀನು#Fish ಗಳ ಬೆಲೆ#Price ಸಹ ಏರಿಕೆಯಾಗಿದೆ. ಕಳೆದ ತಿಂಗಳಿಗೆ ಹೋಲಿಕೆ ಮಾಡಿದ್ರೆ ಶೇ.30-40 ರಷ್ಟು ಬೆಲೆ ಏರಿಕೆ ಕಂಡಿದೆ ಎಂದು ಮಾರಾಟಗಾರರು ಹೇಳುತ್ತಾರೆ. ಜೂನ್ ನಿಂದ ಆಗಸ್ಟ್ ತಿಂಗಳಲ್ಲಿ ಮೀನುಗಳು ಮರಿ ಸಮಯವಾಗಿರುತ್ತೆ. ಈ ಅವಧಿಯಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ನಿಷೇಧ ಹಾಕಲಾಗಿರುತ್ತದೆ.
ಈ ಮೂರು ತಿಂಗಳಿನಲ್ಲಿ ಫೂರೈಕೆಯ ಪ್ರಮಾಣವು ಕಡಿಮೆ ಇದೆ. ಆದ್ರೆ ಬೇಡಿಕೆಯ ಪ್ರಮಾಣ ಶೇ.30ಕ್ಕಿಂತ ಹೆಚ್ಚಿದೆ. ಈ ಹಿನ್ನೆಲೆ ಮೀನು ಬೆಲೆ ಏರಿಕೆಯಾಗಿದೆ. ರಾಜ್ಯಕ್ಕೆ ಹೊರ ರಾಜ್ಯಗಳಿಂದ ಮೀನು ರಫ್ತು ಬರಬೇಕಿದೆ. ಸದ್ಯ ಒರಿಸ್ಸಾ, ವಿಶಾಖಪಟ್ಟಣಂ, ನಾಗಪಟ್ಟಣಂ, ಕನ್ಯಾಕುಮಾರಿ, ಕೇರಳ ಭಾಗದಿಂದ ಮೀನು ಬರುತ್ತಿದೆ. ಈ ಹಿಂದೆ ಮಂಗಳೂರು, ಮಲ್ಪೆ, ಕಾರವಾರ, ದಂಗೊಡ್ಡಿ, ಭಟ್ಕಳ ಭಾಗದಿಂದ ಬರುತ್ತಿತ್ತು. ಮೀನುಗಾರಿಕೆಗೆ ನಿರ್ಬಂಧ ಹಿನ್ನೆಲೆ ಹೊರ ರಾಜ್ಯಗಳಿಂದ ಮೀನು ತರಿಸಿಕೊಳ್ಳಲಾಗುತ್ತಿದೆ.
ಯಾವ್ಯವ ಫಿಶ್ ಎಷ್ಟೆಷ್ಟು ದರ?
| ಮೀನಿನ ತಳಿಗಳು | ಇಂದಿನ ದರ (ಕೆಜಿ- ರೂ.ಗಳಲ್ಲಿ) | ಹಳೆಯ ದರ (ಕೆಜಿ- ರೂ.ಗಳಲ್ಲಿ) |
| ಬಂಗುಡೆ | 350 | 120 |
| ಬೂತಾಯಿ | 250 | 140 |
| ಕಪ್ಪು ಮಾಂಜಿ | 1000 | 600 |
| ಬಿಳಿ ಮಾಂಜಿ | 1020 | 600 |
| ಮದಿಮಾಲ್ | 570 | 250 |
| ಕೊಡ್ಡಾಯಿ | 450 | 250 |
| ಕಾಣಿ | 600 | 400 |
| ಇಂಡಿಯನ್ ಸಾಲ್ಮನ್ | 910 | 650 |
| ಸೀ ಪ್ರಾನ್ಸ್ | 650 | 500 |
| ಟ್ಯೂನಾ | 380 | 250 |
| ಕ್ರಾಬ್ | 450 | 300 |
| ಸಿಲ್ವರ್ ಫಿಶ್ | 250 | 180 |
| ಕೆರೆ ಮೀನು | 200 | 180 |
| ಬರಗುಡ | 450 | 300 |
ಹೋಟೆಲ್ ಊಟ ತಿಂಡಿ ದುಬಾರಿ – ಟೊಮೆಟೊ ರೇಟ್ ಕೇಜಿಗೆ 100ರಿಂದ 120ರ ಗಡಿ ದಾಟಿದೆ. ಹೀಗಾಗಿ ಬೆಂಗಳೂರಲ್ಲಿ ಹೋಟೆಲ್ ಊಟ-ತಿಂಡಿ ದರ ಕೂಡ ದುಬಾರಿ ಆಗ್ತಿದೆ. ಊಟ ತಿಂಡಿ ದರ ಶೇಕಡಾ 10ರಷ್ಟು ಏರಿಸಲು ಹೋಟೆಲ್ ಮಾಲೀಕರ ಸಂಘ ನಿರ್ಧರಿಸಿದೆ. ಟೊಮೆಟೊ ಬೆಲೆ ಇಳಿಕೆ ಆಗೋವರೆಗೂ ಹೋಟೆಲ್‌ಗಳಲ್ಲಿ ಟೊಮೆಟೊ ಬಾತ್ ಹಾಗೂ ಕೆಚೆಪ್ ಸ್ಥಗಿತಗೊಳಿಸಲಾಗಿದೆ. ಬೆಂಗಳೂರಿನ 24 ಸಾವಿರ ಹೋಟೆಲ್‌ಗಳಲ್ಲಿ ಬೆಲೆ ಏರಿಕೆ ಆಗಲಿದೆ.
ಟೊಮೆಟೊ ಬೆಳೆಗೆ ಕಾವಲು – ಟೊಮೆಟೊ ಬೆಲೆ ಹೆಚ್ಚಾಗಿರುವ ಕಾರಣ ಹಲವೆಡೆ ಟೊಮೆಟೊ ಕಳ್ಳತನ ಪ್ರಕರಣಗಳು ವರದಿ ಆಗ್ತಿವೆ. ಹೀಗಾಗಿ ಅಂಗಡಿ ಮಂಡಿಯಲ್ಲೂ ಟೊಮೆಟೊಗೆ ಭಾರೀ ಭದ್ರತೆ ಒದಗಿಸಲಾಗಿದೆ. ಕೋಲಾರದಲ್ಲಿ ಹಗಲು ರಾತ್ರಿ ಜಮೀನಿನಲ್ಲೇ ಟೆಂಟ್ ಹಾಕಿಕೊಂಡು ರೈತರು ಕಾವಲು ಕಾಯುತ್ತಿದ್ದಾರೆ.
ಕ್ಯಾನ್ಸರ್ ವಿರುದ್ಧ ಹೋರಾಟ ಎಂದರೆ ಕೇವಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದು ಮಾತ್ರವಲ್ಲ. ರೋಗ…
ರಾಜ್ಯದಲ್ಲಿ ಅಕ್ರಮ ವಲಸಿಗರು ಹಾಗೂ ಬಾಂಗ್ಲಾ ಅಕ್ರಮ ವಲಸಿಗರ ಬಗ್ಗೆ ಮಾಹಿತಿಯನ್ನು ವಿಧಾನಪರಿಷತ್…
ಪ್ರಯತ್ನ, ಪರಿಶ್ರಮ, ಛಲ ಇದ್ದರೂ ಸೋಲು ಬೆನ್ನತ್ತಿದರೆ ಕಾರಣವೇನು? ಹಿರಿಯರ ಪಾಪದ ಫಲ,…
ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಯಾವುದೇ ರೀತಿ ತೊಂದರೆಯಾಗದಂತೆ ಅಗತ್ಯ ಕ್ರಮ…
ಶಾಲೆಯ ಹಂತದಲ್ಲಿ ಮಕ್ಕಳಿಗೆ ಕಲಿಸಬೇಕಾದ ಶಿಕ್ಷಣ ಏನು..?. ಈ ಪ್ರಶ್ನೆಗೆ ಹಲವರದು ಹಲವು…
ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಶಾಲಾ ಮಕ್ಕಳಿಗೆ ಚೆಸ್ ಆಟವನ್ನು ಪರಿಚಯಿಸುವ “ಚೆಸ್…