ಮಿಜೋರಾಂನಲ್ಲಿ ಅಡಿಕೆ ಬೆಳೆಗೆ ಉತ್ತೇಜನ | ಅಡಿಕೆ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಆದ್ಯತೆ | ರೈತರಿಂದ ಪೊರಕೆ ಕಡ್ಡಿ ಖರೀದಿಸುವ ಸರ್ಕಾರ |

June 21, 2025
4:04 PM

ಕೃಷಿ ಬೆಳವಣಿಗೆಯ ಬಗ್ಗೆ ಮಿಜೋರಾಂ ಸರ್ಕಾರವು ಆದ್ಯತೆ ನೀಡುತ್ತಿದೆ. ಕಳೆದ ಕೆಲವು ಸಮಯಗಳಿಂದ ಕೃಷಿ ಬೆಳವಣಿಗೆ ಹಾಗೂ ಕೃಷಿಕರಿಗೆ ಆದ್ಯತೆಯನ್ನು ನೀಡುತ್ತಿದೆ, ಪ್ರೋತ್ಸಾಹದ ಯೋಜನೆಗಳನ್ನು ಹಮ್ಮಿಕೊಂಡಿದೆ. ಅಡಿಕೆ ಬೆಳೆಗೂ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಮೌಲ್ಯವರ್ಧನೆ ಹಾಗೂ ಮಾರುಕಟ್ಟೆ ಕಡೆಗೂ ಗಮನಹರಿಸಿದೆ. ಇದೀಗ ಮಿಜೋರಾಂನ ಕೋಲಾಸಿಬ್ ಮತ್ತು ಮಾಮಿತ್‌ಗಳಲ್ಲಿ ಅಡಿಕೆ ಸಂಸ್ಕರಣಾ ಘಟಕಗಳ ಸ್ಥಾಪಿಸಲು ಸಿದ್ಧತೆ ನಡೆಯುತ್ತಿದೆ.

Advertisement

ಮಿಜೋರಾಂ ಮುಖ್ಯಮಂತ್ರಿ ಲಾಲ್ದುಹೋಮ ಅವರು ಈ ಬಗ್ಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ್ದಾರೆ. ಯೋಜನೆಗಳ ಪ್ರಗತಿಯ ಕುರಿತು ಮಾತನಾಡಿದ ಭೂ ಸಂಪನ್ಮೂಲ ಕಾರ್ಯದರ್ಶಿ ಲಾಲ್‌ಸಾಂಗ್ಲಿಯಾನ, ಈಶಾನ್ಯ ಮಂಡಳಿಯ (ಎನ್‌ಇಸಿ) ಆರ್ಥಿಕ ನೆರವಿನೊಂದಿಗೆ ಕೊಲಾಸಿಬ್‌ನ ಚಂಫೈ ಮತ್ತು ಮಾಮಿತ್ ಜಿಲ್ಲೆಯ ಜಮುವಾಂಗ್‌ನಲ್ಲಿ ಅಡಿಕೆ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ ಎಂದು  ತಿಳಿಸಿದ್ದಾರೆ. ರಾಜ್ಯದ ವಿವಿಧ ಭಾಗಗಳಲ್ಲಿ ರಬ್ಬರ್, ಕಾಫಿ, ಅಡಿಕೆಯಂತಹ ವಾಣಿಜ್ಯ ಬೆಳೆಗಳಿಗೆ ಆದ್ಯತೆ ನೀಡಲಾಗಿದೆ. ಈ ಎಲ್ಲಾ ಕೃಷಿಗಳಿಗೂ ಅಗತ್ಯವಾದ  ಕೃಷಿ ಸಂಪರ್ಕ ರಸ್ತೆಗಳ ನಿರ್ಮಾಣ,  ಗೋದಾಮುಗಳ ನಿರ್ಮಾಣವನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಇದೇ ವೇಳೆ, ರೈತರು ಎದುರಿಸುತ್ತಿರುವ ಸವಾಲುಗಳಿಂದಾಗಿ, ಮುಂದಿನ ವರ್ಷದಿಂದ ಪೊರಕೆ ಕಡ್ಡಿಗಳ ಗ್ರೇಡಿಂಗ್ ನಿಲ್ಲಿಸಲು ನಿರ್ಧರಿಸಲಾಯಿತು. ಸರ್ಕಾರವು ರೈತರಿಂದ ಶುಂಠಿ, ಅರಿಶಿನ, ಮಿಜೋ ಮೆಣಸಿನಕಾಯಿ ಮತ್ತು ಪೊರಕೆ ಕಡ್ಡಿಗಳನ್ನು  ಖರೀದಿಸುತ್ತಿದೆ ಎಂದೂ ವಿವರಿಸಿದರು. ಮಿಜೋರಾಂನಲ್ಲಿ ಕಾಫಿ ಕೃಷಿಯನ್ನು ಉತ್ತೇಜಿಸಲು ನಿರ್ಧರಿಸಲಾಯಿತು ಮತ್ತು ರಬ್ಬರ್ ಕ್ಲಸ್ಟರ್‌ಗಳಿಗೆ 100 ಸಬ್ಸಿಡಿ ರಬ್ಬರ್ ರೋಲಿಂಗ್ ಯಂತ್ರಗಳನ್ನು ಒದಗಿಸಲಾಗುವುದು ಎಂದು ಹೇಳಿಕೆ ತಿಳಿಸಿದ್ದಾರೆ.

(ಸುದ್ದಿ ಮೂಲ :ಪಿಟಿಐ)

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಶರಧಿ.ಡಿ.ಎಸ್
July 13, 2025
8:14 AM
by: ದ ರೂರಲ್ ಮಿರರ್.ಕಾಂ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಕೃತಿಕಾ
July 13, 2025
8:01 AM
by: ದ ರೂರಲ್ ಮಿರರ್.ಕಾಂ
ರಾಜ್ಯಾದ್ಯಂತ ಲಕ್ಷ ವೃಕ್ಷ ಗಿಡಗಳ ನಾಟಿ ಕಾರ್ಯಕ್ರಮ | ಹೆಬ್ರಿಯ ಉದ್ಯಾನವನದಲ್ಲಿ ಗಿಡ ನೆಡುವ ಮೂಲಕ ಚಾಲನೆ
July 13, 2025
7:50 AM
by: The Rural Mirror ಸುದ್ದಿಜಾಲ
ಶತ್ರುಗಳಿಂದ ಈ ರಾಶಿಯವರಿಗೆ ಜೀವಕ್ಕೆ ಅಪಾಯವಿದೆ..?
July 13, 2025
7:40 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror