ಪಶ್ಚಿಮ ಮಹಾರಾಷ್ಟ್ರದ ಸತಾರಾ ಮೂಲದ ಸದ್ಯ ಬೆಂಗಳೂರಿನಲ್ಲಿರುವ ಪ್ರಿಯಾಂಕಾ ಮೋಹಿತೆ ಅವರು ಗುರುವಾರ ಕಾಂಚನ್‌ಜುಂಗಾ ಪರ್ವತವನ್ನು ಏರುವ ಮೂಲಕ 8,000 ಮೀಟರ್‌ಗಳ ಮೇಲಿನ ಐದು ಶಿಖರಗಳನ್ನು ಏರಿದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ. ವಿಶ್ವದ 10 ನೇ ಅತಿ ಎತ್ತರದ ಪರ್ವತ ಶಿಖರವಾದ ಅನ್ನಪೂರ್ಣ ಮೌಂಟ್ (8,091 ಮೀ) ಅನ್ನು ಅವರು ಏರುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ.
2020 ರ ತೇನ್ಸಿಂಗ್ ನಾರ್ಗೆ ಸಾಹಸ ಪ್ರಶಸ್ತಿ ಪುರಸ್ಕೃತರಾದ ಪ್ರಿಯಾಂಕಾ ಮೋಹಿತೆ (30) ಅವರು ಮೂರನೇ ಅತಿ ಎತ್ತರದ ಪರ್ವತವಾದ ಕಾಂಚನಜುಂಗಾ ಪರ್ವತಕ್ಕೆ (8,586 ಮೀ) ತನ್ನ ಯಾತ್ರೆಯನ್ನು ಮೇ.4 ರಂದು ಸಂಜೆ 4.52 ಕ್ಕೆ ಯಶಸ್ವಿಯಾಗಿ ಪೂರ್ಣಗೊಳಿಸಿದರು, ”ಎಂದು ಅವರ ಸಹೋದರ ಆಕಾಶ್ ಮೋಹಿತೆ ಪಿಟಿಐಗೆ ತಿಳಿಸಿದರು.
ಏಪ್ರಿಲ್ 2021 ರಲ್ಲಿ, ಅವರು ವಿಶ್ವದ 10 ನೇ ಅತಿ ಎತ್ತರದ ಪರ್ವತ ಶಿಖರವಾದ ಅನ್ನಪೂರ್ಣ ಮೌಂಟ್ (8,091 ಮೀ) ಅನ್ನು ಏರಿದ್ದರು ಮತ್ತು ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳಾ ಆರೋಹಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಪ್ರಿಯಾಂಕಾ ಮೋಹಿತೆ 2013 ರಲ್ಲಿ ವಿಶ್ವದ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ (8,849 ಮೀ), 2018 ರಲ್ಲಿ ಲೊಟ್ಸೆ (8,516 ಮೀ), ಮೌಂಟ್ ಮಕಾಲು (8,485 ಮೀ) ಮತ್ತು 2016 ರಲ್ಲಿ ಕಿಲಿಮಂಜಾರೋ ಪರ್ವತ (5,895 ಮೀ) ಏರಿದ್ದಾರೆ.
2019 ರಲ್ಲಿ, ಅವರು ಮೌಂಟ್ ಎವರೆಸ್ಟ್‌ನ ಆಗ್ನೇಯಕ್ಕೆ 19 ಕಿಲೋಮೀಟರ್ ದೂರದಲ್ಲಿರುವ ಮಹಾಲಂಗೂರ್ ಹಿಮಾಲಯದ ಐದನೇ ಅತಿ ಎತ್ತರದ ಶಿಖರ ಮಕಾಲುವನ್ನು ಏರಿದರು. ಮಾಧ್ಯಮದೊಂದಿಗೆ ಮಾತನಾಡಿದ ಪ್ರಿಯಾಂಕ ಮೋಹಿತೆ ಅವರು, “ನಾನು ಟ್ರೆಕ್ಕಿಂಗ್‌ಗಾಗಿ ಸೋದರ ಸಂಬಂಧಿ ಮತ್ತು ನನ್ನ ಚಿಕ್ಕಪ್ಪನ ಜೊತೆ ಹೋಗುತ್ತಿದ್ದೆ. ಬೆಟ್ಟಗಳ ನಗರವಾದ ಸತಾರಾದಿಂದ ಬಂದ ನಾನು ಬಾಲ್ಯದಿಂದಲೂ ನನ್ನ ಪ್ರದೇಶದಲ್ಲಿ ಬೆಟ್ಟಗಳನ್ನು ಹುಡುಕಿ ಏರುತ್ತಿದೆ. 7 ನೇ ತರಗತಿಯಲ್ಲಿದ್ದಾಗ ನಾನು ವೃತ್ತಿಪರ ಗುಂಪಿನೊಂದಿಗೆ ಚಾರಣವನ್ನು ಪ್ರಾರಂಭಿಸಿದೆ ಎನ್ನುತ್ತಾರೆ.
12 ನೇ ತರಗತಿ ಪರೀಕ್ಷೆಯ ನಂತರ ಅವರು ನೆಹರು ಇನ್‌ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್‌ನಲ್ಲಿ 2010 ರಲ್ಲಿ ಪರ್ವತಾರೋಹಣದಲ್ಲಿ ಕೋರ್ಸ್ ತೆಗೆದುಕೊಂಡರು. ನಂತರ ಅವರು 2012 ರಲ್ಲಿ ತನ್ನ ಮುಂದುವರಿದ ಪರ್ವತಾರೋಹಣ ಕೋರ್ಸ್ ಅನ್ನು ಮುಗಿಸಿದರು. ಆಕೆಯ ಮೊದಲ ಆರೋಹಣ 2012 ರಲ್ಲಿ. ಅವರು 6200 ಮೀಟರ್ ಎತ್ತರವಿರುವ ಬಂದರ್‌ಪೂಂಚ್ ಪರ್ವತವನ್ನು ಏರಿದರು.
ಮಹಾರಾಷ್ಟ್ರ ಮೂಲದ ಈಕೆ ಈಗ ಬೆಂಗಳೂರಿನಲ್ಲಿ ನೆಲೆಸಿದ್ದು, 2017-2018ರ ಸಾಹಸ ಕ್ರೀಡೆಗಳಿಗಾಗಿ ಮಹಾರಾಷ್ಟ್ರ ಸರ್ಕಾರದ ಶಿವ ಛತ್ರಪತಿ ರಾಜ್ಯ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ.
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…
ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…