Advertisement
MIRROR FOCUS

ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯದಲ್ಲಿ ಪ್ರಗತಿ | ಪ್ರಾತ್ಯಕ್ಷಿಕೆಯ ವಿಡಿಯೋದಲ್ಲಿದೆ ಕಾರ್ಮಿಕರನ್ನು ಹೊರತರುವ ಪ್ಲಾನ್

Share

ಉತ್ತರಾಖಂಡದ (Uttarakhand) ಉತ್ತರಕಾಶಿಯಲ್ಲಿ (Uttarkashi) ಸುರಂಗದಲ್ಲಿ (Tunnel) ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆ (Rescue operation) ಇಂದಿಗೆ (ಶುಕ್ರವಾರ) 13ನೇ ದಿನಕ್ಕೆ ಕಾಲಿಟ್ಟಿದೆ. ಕಳೆದ ತಡರಾತ್ರಿ ತಾಂತ್ರಿಕ ಅಡಚಣೆಯಿಂದಾಗಿ ಕಾರ್ಮಿಕರನ್ನು ರಕ್ಷಿಸುವ ಕಾರ್ಯ ವಿಳಂಬವಾಗಿದೆ. ಸಿಲ್ಕ್ಯಾರಾ ಸುರಂಗದಲ್ಲಿ (Tunnel Collapse)  ಸಿಲುಕಿರುವ ಕಾರ್ಮಿಕರನ್ನು ಹೇಗೆ ಸುರಕ್ಷಿತವಾಗಿ ಹೊರಕರೆತರಲಾಗುವುದು ಎಂಬುದನ್ನು ಪ್ರಾತ್ಯಕ್ಷಿಕೆ ಮೂಲಕ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತೋರಿಸಿದೆ. ಅದರ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

Advertisement
Advertisement
Advertisement

ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರುವುದಕ್ಕೆ ಮಾರ್ಗ ಸಿದ್ಧಪಡಿಸಲು ಅವಶೇಷಗಳ ಮೂಲಕ ಪೈಪ್‌ಲೈನ್‌ ಹಾಕಲಾಗಿದೆ. ಅದರ ಮೂಲಕ ಗಾಲಿ ಸ್ಟ್ರೆಚರ್‌ಗಳಲ್ಲಿ (wheeled stretchers) ಒಬ್ಬೊಬ್ಬರಾಗಿ ಕಾರ್ಮಿಕರನ್ನು ಹೊರಕ್ಕೆ ಕರೆತರಲಾಗುವುದು ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಸಿಬ್ಬಂದಿ ತಿಳಿಸಿದ್ದಾರೆ.

Advertisement

ಕಾರ್ಮಿಕರನ್ನು ಸುರಕ್ಷಿತವಾಗಿ ಹೇಗೆ ಕರೆತರಲಾಗುತ್ತದೆ ಎಂಬುದನ್ನು ಪ್ರಾತ್ಯಕ್ಷಿಕೆ ಮಾಡಿರುವ ವಿಡಿಯೋವನ್ನು ಹಂಚಿಕೊಂಡಿದೆ. ಅವಶೇಷಗಳ ಮೂಲಕ ಹಾಕಿರುವುದು ವೆಲ್ಡಿಂಗ್‌ ಮಾಡಿರುವ ಪೈಪ್‌ಲೈನ್‌. ಎನ್‌ಡಿಆರ್‌ಎಫ್ ಸಿಬ್ಬಂದಿ, ಗಾಲಿ ಸ್ಟ್ರೆಚರ್ ಅನ್ನು ಹಗ್ಗದಿಂದ ಎಳೆಯುವಾಗ ಕಾರ್ಮಿಕರ ಕೈಕಾಲುಗಳಿಗೆ ವೆಲ್ಡಿಂಗ್‌ ಭಾಗದ ಪೈಪ್‌ಲೈನ್‌ ತಾಗಿ ಗಾಯಗಳಾಗದಂತೆ ನೋಡಿಕೊಳ್ಳಲು, ಅವರು ಸ್ಟ್ರೆಚರ್‌ನಲ್ಲಿ ಮಲಗುವಂತೆ ಮಾಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯು ಈಗ ಅಂತಿಮ ಹಂತ ತಲುಪಿದೆ. ಸದ್ಯ ಎಲ್ಲಾ ಕಾರ್ಮಿಕರು ಸುರಕ್ಷಿತವಾಗಿದ್ದು, ಉಕ್ಕಿನ ಪೈಪ್‌ಗಳ ಮೂಲಕ ಆಹಾರ ಮತ್ತು ನೀರನ್ನು ಸರಬರಾಜು ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿರ್ಮಾಣ ಹಂತದಲ್ಲಿರುವ ಸುರಂಗವು ಮಹತ್ವಾಕಾಂಕ್ಷೆಯ ಚಾರ್ ಧಾಮ್ ಯೋಜನೆಯ ಭಾಗವಾಗಿದೆ. ಇದು ಹಿಂದೂ ಯಾತ್ರಾ ಸ್ಥಳಗಳಾದ ಬದರಿನಾಥ್, ಕೇದಾರನಾಥ, ಗಂಗೋತ್ರಿ ಮತ್ತು ಯಮುನೋತ್ರಿಗಳಿಗೆ ಸಂಪರ್ಕವನ್ನು ಹೆಚ್ಚಿಸಲು ರಾಷ್ಟ್ರೀಯ ಮೂಲಸೌಕರ್ಯ ಉಪಕ್ರಮವಾಗಿದೆ.

Source : ANI

Advertisement

The rescue operation to save 41 workers stuck in the tunnel in Uttarakhand (Uttarakhand) has entered the 13th day today (Friday). A technical glitch delayed the rescue operation late last night. The National Disaster Management Force demonstrated how to safely evacuate workers trapped in the Silkyara Tunnel (Tunnel Collapse). Its video has been shared.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಅಡಿಕೆ ಮೇಲೆ ಕ್ಯಾನ್ಸರ್‌ ತೂಗುಗತ್ತಿಯ ಭಯ ಏಕೆ ? | ಅಡಿಕೆಯ ಔಷಧೀಯ ಅಧ್ಯಯನ ಸಾಕಷ್ಟಿದೆ | ಈಗ ಸಂಘಟಿತ ಹೋರಾಟ ಅಗತ್ಯ |

ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…

1 hour ago

ಸಾವಯವ ಕೃಷಿ ಎಂದರೆ ಏನು..?

https://youtu.be/VwddfpkQ94Y?si=LMz9u08OYbG4B2il

7 hours ago

ನ.23 | ಗುತ್ತಿಗಾರು ಸಹಕಾರಿ ಸಂಘದ ಶತಮಾನೋತ್ಸವ | ಕೃಷಿ ವಿಚಾರಗೋಷ್ಠಿ | ಅಡಿಕೆ ರೋಗಗಳ ಬಗ್ಗೆ ಮಾಹಿತಿ ವಿನಿಮಯ |

ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…

8 hours ago

ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ

ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…

1 day ago

ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮನವಿ

ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…

1 day ago