ಭಾರತದ ವಿವಿಧ ಕಡೆಗಳಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುವ ಸಾಮರ್ಥ್ಯ ಇರುವ ಡ್ರಾಗನ್ ಫ್ರುಟ್(ಕಮಲಂ) ಹಾಗೂ ಹಲಸು ಬೆಳೆಯ ಬಗ್ಗೆ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಐಐಎಚ್‌ಆರ್ ವಿಜ್ಞಾನಿಗಳು ಮಾಹಿತಿ ನೀಡಿದರು.ಇದೇ ವೇಳೆ ಹೆಚ್ಚಿನ ಮೌಲ್ಯದ ಹಣ್ಣಿನ ಬೆಳೆಗಳ ಪ್ರಚಾರದ ಕುರಿತು ಚರ್ಚೆ ನಡೆಸಿದರು.…..ಮುಂದೆ ಓದಿ….
ಭಾರತದ ವಿವಿಧ ರಾಜ್ಯಗಳಲ್ಲಿ ವಿಸ್ತೀರ್ಣ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿರುವ ಕಮಲಂ(ಡ್ರಾಗನ್ ಫ್ರುಟ್) ಆಯ್ಕೆಗಳಾದ ಐಐಎಚ್‌ಆರ್ ಪಿಂಕ್ ಮತ್ತು ಐಐಎಚ್‌ಆರ್ ವೈಟ್ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದರು.ಕಮಲಂ ಲಾಭದಾಯಕ ಹಣ್ಣಿನ ಬೆಳೆಯಾಗಿದ್ದು, ಇದನ್ನು ಮೆಕ್ಸಿಕೊ, ಆಸ್ಟ್ರೇಲಿಯಾ, ಥೈಲ್ಯಾಂಡ್, ತೈವಾನ್, ಇಸ್ರೇಲ್ ಇತ್ಯಾದಿ ದೇಶಗಳಲ್ಲಿ ವಾಣಿಜ್ಯಿಕವಾಗಿ ಬೆಳೆಸಲಾಗುತ್ತಿದೆ. ಆದರೆ ಈಗ ಭಾರತದ ರೈತರಲ್ಲಿ ಜನಪ್ರಿಯತೆಯನ್ನು ಗಳಿಸುತ್ತಿದೆ. ಕಮಲಂನಲ್ಲಿನ ಸುಧಾರಿತ ತಳಿಶಾಸ್ತ್ರ ಮತ್ತು ತಳಿಗಳು ಈ ಬೆಳೆಯ ವಿಸ್ತೀರ್ಣ ವಿಸ್ತರಣೆಗೆ ಮತ್ತು ರೈತರ ಆದಾಯವನ್ನು ಸುಧಾರಿಸಲು ದಾರಿ ಮಾಡಿಕೊಡುತ್ತವೆ ಎಂಬ ಮಾಹಿತಿಯನ್ನು ವಿಜ್ಞಾನಿಗಳು ನೀಡಿದರು.
ಕೆಂಪು ಬಣ್ಣದ ಹಲಸಿನ ಹಣ್ಣು ಸಿದ್ದು ಮತ್ತು ಶಂಕರ ಪ್ರಭೇದಗಳನ್ನು ಐಸಿಎಆರ್ ಮತ್ತು ಐಐಎಚ್ ಆರ್ ಬೆಂಬಲದೊಂದಿಗೆ ಅಭಿವೃದ್ಧಿಪಡಿಸಲಾಗಿದೆ ಮತ್ತು ಅವು ಹಲಸಿನ ಹಣ್ಣಿನ ಕೃಷಿಯ ಮೇಲೆ ಉತ್ತಮ ಪರಿಣಾಮ ಬೀರಿವೆ. 1500 ಕ್ಕೂ ಹೆಚ್ಚು ಎಕರೆಗಳಲ್ಲಿ ಈ ಪ್ರಭೇದವನ್ನು ಬೆಳೆಯಲಾಗುತ್ತಿದೆ. ರೈತರು ಸುಮಾರು 50 ಲಕ್ಷ ರೂ.ಗಳ ಲಾಭವನ್ನು ಪಡೆಯುತ್ತಾರೆ ಎಂದು ವಿಜ್ಞಾನಿಗಳು ವಿವರಿಸಿದರು.
ಮತ್ತೊಂದು ಪ್ರಮುಖ ಹಣ್ಣಿನ ಬೆಳೆಯಾದ ಆವಕಾಡೊ, ರೈತರ ಆದಾಯದ ಸುಸ್ಥಿರತೆಗಾಗಿ ದೊಡ್ಡ ಪ್ರಮಾಣದಲ್ಲಿ ಕೃಷಿ ಮಾಡಬಬಹುದಾಗಿದೆ. ಈ ನಿಟ್ಟಿನಲ್ಲಿ ಐಐಎಚ್‌ಆರ್ ಎರಡು ಪ್ರಭೇದಗಳಾದ ಅರ್ಕಾ ಸುಪ್ರೀಂ ಮತ್ತು ಅರ್ಕಾ ರವಿಯನ್ನು ಬಿಡುಗಡೆ ಮಾಡಿದೆ. ಈ ಪ್ರಭೇದಗಳು ನಿಯಮಿತವಾಗಿ ಫಲ ನೀಡುವ, ಹೆಚ್ಚಿನ ಇಳುವರಿ ನೀಡುವ. 400-600 ಗ್ರಾಂ ಹಣ್ಣಿನ ತೂಕವನ್ನು ಹೊಂದಿದ್ದು, ಸುಮಾರು 80% ತಿರುಳು ಮತ್ತು ಉಷ್ಣವಲಯದ ಪ್ರದೇಶಗಳಲ್ಲಿ ಕೃಷಿಗೆ ಸೂಕ್ತವಾಗಿದೆ ಎಂಬ ಮಾಹಿತಿಯನ್ನು ಸಚಿವರಿಗೆ ನೀಡಿದರು. ಈ ಹಣ್ಣಿನ ಬೆಳೆಗಳನ್ನು ಉತ್ತೇಜಿಸಲು ತೋಟಗಾರಿಕಾ ವಿಜ್ಞಾನ ವಿಭಾಗ, ಐಸಿಎಆರ್ ಮತ್ತು ಐಸಿಎಆರ್-ಐಐಎಚ್ಆರ್ ಬೆಂಗಳೂರಿನ ಪ್ರಯತ್ನಗಳನ್ನು ಸಚಿವರು ಶ್ಲಾಘಿಸಿದರು.
ಈ ಸಂದರ್ಭ ಡಾ. ದೇವೇಶ್ ಚತುರ್ವೇದಿ, ಡಾ. ವಿಬಿ ಪಟೇಲ್, ಪ್ರಿಯ ರಂಜನ್ ಮತ್ತು ಬೆಂಗಳೂರಿನ ಐಐಎಚ್‌ಆರ್ ಪ್ರಧಾನ ವಿಜ್ಞಾನಿ ಡಾ. ಜಿ ಕರುಣಾಕರನ್ ಇದ್ದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಎರಡು…
ಎಪ್ರಿಲ್ 24 ರಂದು ಮಧ್ಯಾಹ್ನ ನಿಮ್ಮ ನೆರಳನ್ನು ಕಾಣಲಾಗುವುದಿಲ್ಲ. ಏಕೆಂದರೆ ಈಗ ಕರ್ಕಾಟಕ…
ಹಂಚಿ ತಿನ್ನುವ ಅಭ್ಯಾಸ ರೂಡಿ ಇಲ್ಲವಾದರೂ ಸಂಸಾರಿಯಾದ ಕೂಡಲೇ ಎಲ್ಲವೂ ಬದಲಾಗುತ್ತದೆ. ಆ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಸಕಲಜೀವಿಗಳ ಆಡುಂಬೊಲ ನಮ್ಮೀ ಪ್ರಕೃತಿ. ಪ್ರಕೃತಿಯೊಡಲು ನಮ್ಮತಾಯ ಮಡಿಲು. ಪ್ರಕೃತಿಯು ಕೆಲವೆಡೆ ರುದ್ರರಮಣೀಯ;…
ಹಕ್ಕಿಗಳು ಮರಿಗಳಿಗೆ ಹಾರಲು ಕಲಿಸುತ್ತವೆ. ಒಮ್ಮೆ ಹಾರಲು ಬಂತೆಂದರೆ ಗೂಡು ಬಿಟ್ಟು ಹಾರುತ್ತವೆ…