ಅರಣ್ಯ ನಾಶ, ಗಣಿಗಾರಿಕೆ ಸೇರಿದಂತೆ ಹಲವು ಸವಾಲುಗಳ ಮೂಲಕ ಆತಂಕದ ಭವಿಷ್ಯವನ್ನು ಎದುರಿಸುತ್ತಿರುವ ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಜನಜಾಗೃತಿ ಮೂಡಿಸುವ ವಿನೂತನ ಪ್ರಯತ್ನವೊಂದು ಕಲಾತ್ಮಕವಾಗಿ ಅನಾವರಣಗೊಂಡಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ದೊಂಬೆಕೊಪ್ಪ ಗ್ರಾಮದ ಸಾರಾ ಸಂಸ್ಥೆ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.
ರಾಜ್ಯದ ಮಲೆನಾಡು ಹಾಗೂ ಕರಾವಳಿಯನ್ನು ಬೆಸೆದಿರುವ ಪಶ್ಚಿಮ ಘಟ್ಟಗಳು ಶುದ್ಧಗಾಳಿ, ಪರಿಸರ ಹಾಗೂ ಬೆಟ್ಟಗುಡ್ಡಗಳಿಂದ ಗಮನ ಸೆಳೆಯುತ್ತವೆ. ಅಭಿವೃದ್ಧಿಯ ಹೆಸರಿನಲ್ಲಿ ಇಂತಹ ಪ್ರಾಕೃತಿಕ ಸಂಪತ್ತು ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದ್ದು, ಜೀವಿವೈವಿಧ್ಯತೆಯ ರಕ್ಷಣೆ ಸವಾಲಿನ ಕೆಲಸವಾಗಿದೆ. ಪರಿಸರ ಹಾಗೂ ಜೀವಿವೈಧ್ಯತೆಯ ಮಹತ್ವವನ್ನು ಸಾಮಾನ್ಯ ಜನರಿಗೆ ಸರಳ ಮಾಧ್ಯಮದ ಮೂಲಕ ತಿಳಿಸುವ ಪ್ರಯತ್ನವೊಂದು ಸದ್ದಿಲ್ಲದೆ ಸಾಗಿದೆ. ಪಶ್ಚಿಮ ಘಟ್ಟಗಳ ವರ್ತಮಾನ ಮತ್ತು ಭವಿಷ್ಯದ ಕುರಿತು ಸೂಕ್ಷ್ಮ ಅಲೋಚನೆಗಳನ್ನು ಅಭಿವ್ಯಕ್ತಪಡಿಸಲು ಚಿತ್ರಕಲೆಯಂತಹ ಮಾಧ್ಯಮವನ್ನು ಪ್ರಬಲವಾಗಿ ಬಳಸಿಕೊಳ್ಳುವ ಪ್ರಯತ್ನ ನಡೆದಿದ್ದು, ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ದೊಂಬೆಕೊಪ್ಪ ಗ್ರಾಮದ ಸಾರಾ ಸಂಸ್ಥೆ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.
ಚಿತ್ರಗಳ ಮೂಲಕ ಪಶ್ಚಿಮ ಘಟ್ಟಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಅಭಿವ್ಯಕ್ತಿಸುವ 15 ದಿನಗಳ ಶಿಬಿರ ನಡೆದಿದ್ದು, ಬೆಟ್ಟ, ನದಿ, ಪ್ರಾಣಿ,ಪಕ್ಷಿ ಸಂಕುಲ, ವೃಕ್ಷ ಸಂಕುಲದ ಮಹತ್ವವನ್ನು ಸೃಜನಶೀಲವಾಗಿ ಚಿತ್ರಗಳ ಮೂಲಕ ಬಿಡಿಸಿರುವ ಕಲಾವಿದರು , ಸ್ಥಳೀಯರೊಂದಿಗೆ ಚಿಂತನ-ಮಂಥನದಲ್ಲೂ ಭಾಗಿಯಾಗಿದ್ದಾರೆ.
ಸಾರಾ ಸಂಸ್ಥೆ ಪಶ್ಚಿಮ ಘಟ್ಟದ ಪ್ರಾಕೃತಿಕ ಸಂಪತ್ತು ಮತ್ತು ಸವಾಲುಗಳ ಕುರಿತು ತನ್ನದೇ ಆದ ಸಂಶೋಧನಾತ್ಮಕ ಕೆಲಸವನ್ನು ನಿರ್ವಹಿಸುತ್ತಿದೆ. ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಕೇರಳ ಹಾಗೂ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಯುವ ಕಲಾವಿದರು ಈ ಪ್ರಯತ್ನದಲ್ಲಿ ಕೈಜೋಡಿಸಿದ್ದಾರೆ. ಈ ಹಿಂದೆ ಸಾರಾ ಸಂಸ್ಥೆ ಮಲೆನಾಡಿನ ದೇಶೀಯ ಭತ್ತದ ತಳಿಗಳ ರಕ್ಷಣೆ ಸೇರಿದಂತೆ ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಚಿತ್ರಕಲಾ ಶಿಬಿರಕ್ಕೆ ವಿವಿಧ ರಾಜ್ಯಗಳಿಂದ ಹಲವು ಕಲಾವಿದರು ಆಗಮಿಸಿದ್ದು, ಪಶ್ಚಿಮ ಘಟ್ಟದ ಜ್ವಲಂತ ಸಮಸ್ಯೆಗಳನ್ನು ಬಣ್ಣಗಳಲ್ಲಿ ಬಿಡಿಸುವ ಮೂಲಕ ಸೃಜನಶೀಲ ಅಭಿವ್ಯಕ್ತಿಗೆ ಸಾಕ್ಷಿಯಾಗಿದ್ದಾರೆ ಎನ್ನುತ್ತಾರೆ ಸಾರಾ ಸಂಸ್ಥೆ ಮುಖ್ಯಸ್ಥ ಅರುಣ್ ಕುಮಾರ್. ತಮ್ಮ ಸಂಸ್ಥೆಯು ಮಲೆನಾಡು ಹಾಗೂ ಪಶ್ಚಿಮ ಘಟ್ಟದ ಪರಂಪರೆ, ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಪರಿಚಯಿಸುವ ಮತ್ತು ಸಂರಕ್ಷಿಸುವ ಕೆಲಸ ಮಾಡುತ್ತಿದೆ ಎನ್ನುತ್ತಾರೆ ಸಾರಾ ಸಂಸ್ಥೆಯ ಗುರುಮೂರ್ತಿ ವರದ ಮೂಲ.
ಅಭಿವೃದ್ಧಿ ಹೆಸರಿನಲ್ಲಿ ಪ್ರಕೃತಿಯನ್ನು ನಾಶಗೊಳಿಸುವ ಪ್ರಯತ್ನಗಳು ನಡೆದಿರುವುದು ಅಪಾಯಕಾರಿ ಎನ್ನುತ್ತಾರೆ ಚಿತ್ರಕಲಾವಿದ ಮೈಸೂರಿನ ದಯಾನಂದ್. ಹಲವು ಕುತೂಹಲಗಳಿಗೆ ಈ ಶಿಬಿರ ಸಾಕ್ಷಿಯಾಗಿದ್ದು, ಪರಿಸರ ಸಂರಕ್ಷಣೆ , ಜಾಗೃತಿಗೆ ವೇದಿಕೆಯಾಗಿದೆ ಎನ್ನುತ್ತಾರೆ ಶಿಬಿರಾರ್ಥಿ ಹೇಮಾಂಗಿನಿ.
ನಾಡಿನ ನೈಸರ್ಗಿಕ ಸಂಪನ್ಮೂಲದ ತೊಟ್ಟಿಲು ಎನಿಸಿರುವ ಪಶ್ಚಿಮಘಟ್ಟಗಳನ್ನು ಸಂರಕ್ಷಿಸುವುದು ಮತ್ತು ಅಲ್ಲಿನ ಜೀವಿವೈವಿಧ್ಯತೆಯನ್ನು ರಕ್ಷಿಸುವುದು ಭವಿಷ್ಯದ ಹಿತದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದ್ದು, ಎಲ್ಲರೂ ಈ ಕುರಿತು ಅಲೋಚಿಸುವುದು ಅಗತ್ಯ ಎಂಬ ಸಂದೇಶವನ್ನು ಈ ಶಿಬಿರ ನೀಡಿದೆ.
15.07.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ಧಾತ್ರಿ ಕೆ ರಾವ್ , 7ನೇ ತರಗತಿ ಶ್ರೀ ಅನ್ನಪೂರ್ಣೇಶ್ವರಿ ವಿದ್ಯಾಮಂದಿರ, ನಿಲುವಾಗಿಲು,…
ಭವಿಷ್ಯ ಕೆ ಪಿ, 8 ನೇ ತರಗತಿ, ಸೈಂಟ್ ಆನ್ಸ್ ಇಂಗ್ಲಿಷ್ ಮೀಡಿಯಂ…
ರಾಜ್ಯದ ವಿವಿದೆಡೆ ಸದ್ಯ ಸಾಧಾರಣ ಮಳೆಯಾಗುತ್ತಿದೆ. ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಕೂಡಾ…
ಸಾವಯವ ತಾಲೂಕು ಎಂದು ಘೋಷಣೆ ಮಾಡಲು ಸಿದ್ಧವಾಗಿರುವ ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನಲ್ಲಿ…
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 9535156490