ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ನೇರವಾಗಿ ರಾಗಿ ಖರೀದಿ ಮಾಡಲು ಖರೀದಿ ನೋಂದಣಿ ಕೇಂದ್ರ ತೆರೆಯಲಾಗಿದೆ. ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್ ಮುನಿಯಪ್ಪ ಕೇಂದ್ರಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರಾಗಿ, ಜೋಳ ಭತ್ತ ಖರೀದಿ ಕೇಂದ್ರಗಳನ್ನು ತೆರೆದು, ಧಾನ್ಯ ಸಂಗ್ರಹಣೆ ಮಾಡಿ ಪಡಿತರ ಮೂಲಕ ಹಂಚಲಾಗುವುದು ಎಂದು ಹೇಳಿದ್ದಾರೆ. ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ, ಕರ್ನಾಟಕ ಕೃಷಿ ಮಾರಾಟ ಮಂಡಳಿ ಮತ್ತು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ಈ ಮೂರು ನಿಗಮಗಳಿಗೆ ಜಿಲ್ಲೆಗಳನ್ನು ಹಂಚಿಕೆ ಮಾಡಲಾಗಿದೆ. ರಾಜ್ಯದಲ್ಲಿ ಸಾರ್ವಜನಿಕ ವಿತರಣೆ ಮೂಲಕ ಹಂಚಿಕೆ ಮಾಡುತ್ತಿರುವ ಪಡಿತರ ಚೀಟಿಗಳಿಗೆ ಅಗತ್ಯವಿರುವ 4.30 ಕೋಟಿ ಮೆಟ್ರಿಕ್ ಟನ್ ರಾಗಿ, 2.24 ಕೋಟಿ ಟನ್ ಭತ್ತ ಹಾಗೂ 1 ಲಕ್ಷ ಮೆಟ್ರಿಕ್ ಟನ್ ಜೋಳವನ್ನು ರೈತರಿಂದ ಖರೀದಿಸಲು ಸಚಿವ ಸಂಪುಟ ಉಪಸಮಿತಿ ಅನುಮೋದನೆ ನೀಡಿದೆ. ಎಫ್.ಎ.ಕ್ಯೂ ಮಾನದಂಡಗಳಂತೆ ಉತ್ತಮ ಗುಣಮಟ್ಟದ ಧಾನ್ಯಗಳನ್ನು ಖರೀದಿಸಲಾಗುತ್ತಿದೆ ಎಂದು ಸಚಿವ ಮುನಿಯಪ್ಪ ತಿಳಿಸಿದ್ದಾರೆ.
ಹೆಚ್ಚುತ್ತಿರುವ ತಾಪಮಾನದ ಕಾರಣದಿಂದ 2030 ರ ವೇಳೆಗೆ ಭಾರತವು ತನ್ನ ಒಟ್ಟು ದೇಶೀಯ…
ಭಾರತೀಯ ಕೃಷಿ ವಲಯದ ಮೇಲೆ ಹವಾಮಾನ ವೈಪರೀತ್ಯದ ಪರಿಣಾಮಗಳನ್ನು ತಗ್ಗಿಸಲು ಸರ್ಕಾರ ಸುಸ್ಥಿರ…
ದೇಶದ 40 ಸಾವಿರ ಗ್ರಾಮ ಪಂಚಾಯತ್ ಗಳಿಗೆ ಕಚೇರಿಗಳಿಲ್ಲ, 2.28 ಲಕ್ಷ ಪಂಚಾಯತ್…
ಮಂತ್ರಗಳನ್ನು ಬೇರೆಯವರು ಉಪಯೋಗಿಸದಂತೆ ಹಿಂದೆ ಬ್ರಾಹ್ಮಣರು ಮಾಡಿದಂತೆ ಈಗ ತಾಂತ್ರಿಕತೆಯನ್ನು ತಿಳಿದವರು ಮಾಡುತ್ತಿದ್ದಾರೆ.…
ಇಂದು ರಾಜ್ಯದ ವಿವಿದೆಡೆ ಮಳೆಯ ವಾತಾವರಣ ಇದೆ. ಮಳೆಯ ವಾತಾವರಣವು ಮುಂದಿನ 10…
ಗುಜ್ಜೆ ಬೋಂಡಾಕ್ಕೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ : ಗುಜ್ಜೆ 3/4…