ಚುನಾವಣಾ ಕಣ | ಮತ್ತೆ #PuttilaForPuttur ಟ್ವಿಟ್ಟರ್‌ ಅಭಿಯಾನ | ನೂರಾರು ಜನರಿಂದ ಟ್ವಿಟ್ಟರ್‌ ಪೋಸ್ಟ್‌ | ಪುತ್ತೂರಿಗೆ ಯಾರು ? | ಸುಳ್ಯಕ್ಕೆ ಮತ್ತೆ ಎಸ್‌ ಅಂಗಾರ ?

April 11, 2023
10:46 AM

ಚುನಾವಣಾ ಕಣ ಈಗ ಚುರುಕಾಗುತ್ತಿದೆ. ಅದರಲ್ಲೂ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯ ಬಿಡುಗಡೆಗೆ ಕೊನೆಯ ಹಂತದಲ್ಲಿದೆ. ಕೊನೆಯ ಕ್ಷಣದಲ್ಲೂ ಪ್ರಯತ್ನಗಳು ಸಾಗಿವೆ. ಇದೀಗ ಪುತ್ತೂರಿನಲ್ಲಿ ಅರುಣ್‌ ಕುಮಾರ್‌ ಪುತ್ತಿಲ ಅವರಿಗೆ ಟಿಕೆಟ್‌ ಸಿಗಬೇಕು ಎಂಬ ಅಭಿಯಾನ, ಒತ್ತಡ ಹೆಚ್ಚಿದೆ. #PuttilaForPuttur ಎಂಬ ಟ್ವಿಟ್ಟರ್‌ ಅಭಿಯಾನ  ಸದ್ದು ಮಾಡುತ್ತಿದೆ. ಈ ಹಿಂದೆಯೂ ಟ್ವಿಟ್ಟರ್‌ ಅಭಿಯಾನ ಸದ್ದು ಮಾಡಿತ್ತು. ಇದೀಗ ಮತ್ತೆ ನೂರಾರು ಜನರು ಟ್ವೀಟ್‌ ಮಾಡುತ್ತಿದ್ದಾರೆ. ಕರ್ನಾಟಕದ ಸುದ್ದಿಗಳಲ್ಲಿ ಈಗ ಸುದ್ದಿಯಾಗಿರುವ ಸಂಗತಿಯಾಗಿದೆ.

ಈಚೆಗೆ ನಡೆದ ಬೆಳವಣಿಗೆಯಲ್ಲಿ ಹಾಲಿ ಶಾಸಕರು, ಸಚಿವರಿಗೆ ಟಿಕೆಟ್‌ ನೀಡುವ ಬಗ್ಗೆ ಚರ್ಚೆಯಾಗಿದೆ. ಅದರಲ್ಲಿ  ಪುತ್ತೂರು ಕ್ಷೇತ್ರ ಹೊರತುಪಡಿಸಿ ಉಳಿದೆಲ್ಲಾ ಕ್ಷೇತ್ರಗಳಿಗೆ ಹಾಲಿ ಶಾಸಕರುಗಳನ್ನೇ ಅಂತಿಮ ಮಾಡುವ ಚರ್ಚೆ ನಡೆದಿದೆ ಎಂದು ಮೂಲಗಳು ಹೇಳಿವೆ. ಪುತ್ತೂರಿನಲ್ಲಿ ಚುನಾವಣೆಯ ಹೊತ್ತಿನಲ್ಲಿ ಆರೋಪಗಳು ಬಂದ ಹಿನ್ನೆಲೆಯಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಕೇಳಿಬಂದಿದೆ. ಇದಕ್ಕಾಗಿ ಆಕಾಂಕ್ಷಿಗಳ ಪಟ್ಟಿ, ಜಾತೀವಾರು ಪಟ್ಟಿಗಳು ಮುನ್ನೆಲೆಗೆ ಬರುವ ಸಂದರ್ಭದಲ್ಲಿ ಪುತ್ತಿಲ ಅಭಿಮಾನಿಗಳು, ಕೆಲ ಕಾರ್ಯಕರ್ತರು ಟ್ವೀಟ್‌ ಮೂಲಕ ಗಮನಸೆಳೆಯುತ್ತಿದ್ದಾರೆ. ಇದೀಗ ಟ್ವಿಟ್ಟರ್‌ ಅಭಿಯಾನ ಚುರುಕಾಗಿದೆ.

ಸುಳ್ಯ ಕ್ಷೇತ್ರದಲ್ಲೂ ಅಭ್ಯರ್ಥಿ ಬದಲಾವಣೆಯ ಬಗ್ಗೆ ನಿನ್ನೆ ಬಿಡುಗಡೆಯಾಗಬೇಕಿದ್ದ ಬಿಜೆಪಿಯ ಪಟ್ಟಿಯ ಮೂಲಕವೂ ಗಮನ ಸಳೆದಿತ್ತು, ಆದರೆ ಕೊನೆಯ ಕ್ಷಣದಲ್ಲಿ ಮತ್ತೆ ಹಾಲಿ ಶಾಸಕರುಗಳಿಗೇ ಟಿಕೆಟ್‌ ಘೋಷಣೆಯ ಸಂದರ್ಭದಲ್ಲಿ  ಮತ್ತೆ ಅಂಗಾರ ಅವರಿಗೇ ಟಿಕೆಟ್‌ ಲಭ್ಯವಾಗುವ ಸಾಧ್ಯತೆಯ ಬಗ್ಗೆ ಕೇಳಿಬಂದಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ರಾಜ್ಯಾದ್ಯಂತ ನವರಾತ್ರಿ ಸಂಭ್ರಮ : ಶಕ್ತಿಪೀಠಗಳಲ್ಲಿ ವಿಶೇಷ ಪೂಜೆ, ಮಂಗಳೂರು–ಮಡಿಕೇರಿ–ಶ್ರೀರಂಗಪಟ್ಟಣದಲ್ಲಿ ದಸರಾ ಸಂಭ್ರಮ
October 11, 2026
10:37 AM
by: ದ ರೂರಲ್ ಮಿರರ್.ಕಾಂ
ಪಶ್ಚಿಮ ಘಟ್ಟ ಉಳಿಸಿ, ಉತ್ತರ ಕನ್ನಡ ರಕ್ಷಿಸಿ : ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆಗೆ ವಿರೋಧ
October 11, 2026
10:24 AM
by: ದ ರೂರಲ್ ಮಿರರ್.ಕಾಂ
ನಗರೀಕರಣದ ನಡುವೆ ಪ್ರಕೃತಿ, ವನ್ಯಜೀವಿಗಳ ಸಮತೋಲನ ಕಾಪಾಡುವುದು ಆದ್ಯತೆಯಾಗಲಿ
October 10, 2026
2:55 PM
by: ದ ರೂರಲ್ ಮಿರರ್.ಕಾಂ
ಕೊರಿಯರ್ ಮೂಲಕ ಮಾದಕ ದ್ರವ್ಯ ಸಾಗಾಟ..! ಮಂಗಳೂರಿನಲ್ಲಿ 1.58 ಕೋಟಿ ರೂ. ಮೌಲ್ಯದ ಎಂಡಿಎಂಎ ವಶ
October 10, 2026
2:51 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror