ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಆರಂಭಗೊಂಡಿದ್ದ ಪುತ್ತಿಲ ಪರಿವಾರವು 100 ದಿನ ಪೂರೈಸಿತು. ಈ ಹಿನ್ನೆಲೆಯಲ್ಲಿ ಪುತ್ತೂರು ಕೋಟೆಚಾ ಹಾಲ್ ನಲ್ಲಿ ನಗರ ಮತ್ತು ಗ್ರಾಮಾಂತರದ ಬೂತ್ ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳ ಪುತ್ತಿಲ ಪರಿವಾರದ ಸಮಾಗಮ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಸಾಧನೆ, ಯೋಜನೆ, ಯೋಚನೆಗಳ ಬಗ್ಗೆ ಮಾತುಕತೆ, ಅಭ್ಯಾಸವರ್ಗ ನಡೆಯಿತು.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಫರ್ಧೆ ಮಾಡಿದ್ದ ಅರುಣ್ ಕುಮಾರ್ ಪುತ್ತಿಲ ಅವರು ಎರಡನೇ ಸ್ಥಾನ ಪಡೆದರು. ಅದಾದ ಬಳಿಕ ಪುತ್ತಿಲ ಪರಿವಾರ ಸಾಮಾಜಿಕ ಕೆಲಸ ಕಾರ್ಯಗಳಿಗಾಗಿ, ಸಮಾಜಕ್ಕೆ ಶಕ್ತಿ ತುಂಬುವ ಉದ್ದೇಶದಿಂದ ಪುತ್ತಿಲ ಪರಿವಾರ ರಚನೆಗೊಂಡಿತ್ತು. 100 ದಿನಗಳ ಬಳಿಕ ಬೂತ್ ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳ ಸಮಾಗಮ ಹಾಗೂ ಅಭ್ಯಾಸ ವರ್ಗ ನಡೆಯಿತು. ಈ ಸಂದರ್ಭ ಬೂತ್ ಪ್ರಮುಖರಿಂದ ಇದುವರೆಗೆ ಬೂತ್ ಮಟ್ಟದಲ್ಲಿ ಮಾಡಿರುವ ಕೆಲಸ ಕಾರ್ಯಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. ಹಲವು ಬೂತ್ ಪ್ರಮುಖರು ತಮ್ಮ ಬೂತ್ ನಲ್ಲಿ ಮಾಡಿರುವ ಸಾಮಾಜಿಕ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ರಸ್ತೆ ದುರಸ್ತಿ, ಬಡವರಿಗೆ ನೆರವು, ಚುನಾವಣೆಯಲ್ಲಿ ಉಳಿಕೆ ಹಣದ ಬಳಕೆ, ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವಿಕೆ, ಆರ್ಥಿಕ ನೆರವು ಇತ್ಯಾದಿಗಳ ಬಗ್ಗೆ ಮಾಹಿತಿ ನೀಡಿದರು. ಕೇವಲ 100 ದಿನಗಳಲ್ಲಿ ಪುತ್ತಿಲ ಪರಿವಾರವು ಮಾಡಿರುವ ಕೆಲಸ ಕಾರ್ಯಗಳ ಬಗ್ಗೆ ಸಭೆಗೆ ಮಾಹಿತಿ ಲಭ್ಯವಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ನಿವೃತ್ತ ಪ್ರಾಂಶುಪಾಲ ಬಿ. ವಿ. ಸೂರ್ಯನಾರಾಯಣ , ಸಂಘಟನೆಯ ಉದ್ದೇಶದ ಗುರಿ ಈಡೇರಿಕೆಗೆ ಕೆಲಸ ಮಾಡಬೇಕು. ಸಾಮಾಜಿಕ ಚಟುವಟಿಕೆಯ ಮೂಲಕ ಸಮಾಜಕ್ಕೆ ಶಕ್ತಿ ತುಂಬುವ ಕೆಲಸ ನಿಜಕ್ಕೂ ಅನುಕರಣೀಯ. ಒಗ್ಗಟ್ಟಿನಿಂದ ಮಾಡುವ ಕೆಲಸದಲ್ಲಿ ಯಶಸ್ಸು ಲಭಿಸುತ್ತದೆ. ಸಾಮಾಜಿಕ ಚಟುವಟಿಕೆಯಿಂದ ನಿಜವಾದ ಸಂತೋಷವನ್ನು ಗಳಿಸಬಹುದು. ಜಯ ಸಿಗುವ ತನಕ ಪ್ರಯತ್ನವನ್ನು ಕೈಬಿಡಬಾರದು ಎಂದರು.
ಪುತ್ತಿಲ ಪರಿವಾರದ ಗೌರವಾಧ್ಯಕ್ಷ ಅರುಣ್ ಕುಮಾರ ಪುತ್ತಿಲ ಮಾತನಾಡಿ ರಾಜಕೀಯ ಉದ್ದೇಶ ಮಾತ್ರವಲ್ಲದೆ, ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಶಕ್ತಿ ತುಂಬುವ ವ್ಯವಸ್ಥೆಗೆ ಪರಿವಾರದ ಮೂಲಕ ಮಾಡಲಾಗುತ್ತಿದೆ. ಸಾಮಾಜಿಕ ಬದ್ಧತೆಯ ಜತೆಗೆ ಹೊಸ ನಾಯಕರನ್ನು ಸೃಷ್ಟಿಸುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಗೆ ಪರಿವಾರದ ವಿಸ್ತರಿಸುವ ಕಾರ್ಯವನ್ನು ಮಾಡಲಾಗುವುದು ಎಂದು ತಿಳಿಸಿದರು.
ದೇಶ ಸೇವೆಯ ಸಂದರ್ಭ ಅಪಘಾತದಲ್ಲಿ ಹುತಾತ್ಮರಾದ ಸೈನಿಕರಿಗೆ ಶ್ರದ್ಧಾಜಲಿ ಸಲ್ಲಿಸಲಾಯಿತು. ಇದೇ ವೇಳೆ ಪುತ್ತಿಲ ಪರಿವಾರದ ಸಾಮಾಜಿಕ ಚಟುವಟಿಕೆಗೆ ಸಹಾಯ ನೀಡುವವರ ಅನುಕೂಲಕ್ಕಾಗಿ ಕ್ಯೂ ಆರ್ ಕೋಡ್ ಬಿಡುಗಡೆ ಮಾಡಲಾಯಿತು. ಮಹಿಳಾ ಪರಿವಾರದ ಪದಾಧಿಕಾರಿಗಳನ್ನು ಘೋಷಿಸಲಾಯಿತು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಪುತ್ತಿಲ ಪರಿವಾರ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತಾ ವಹಿಸಿದ್ದರು. ಧಾರ್ಮಿಕ ಚಿಂತಕ ಶ್ರೀಕೃಷ್ಣ ಉಪಾಧ್ಯಾಯ, ಗೌರವ ಸಲಹೆಗಾರ ಸುನಿಲ್ ಬೋರ್ಕರ್, ಭೀಮ ಭಟ್ ಮತ್ತಿತರರು ಉಪಸ್ಥಿತರಿದ್ದರು.
ಪುತ್ತಿಲ ಪರಿವಾರದ ಕಾರ್ಯದರ್ಶಿ ರವಿ ಕುಮಾರ್ ಮಠ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲು ಪ್ರಸ್ತಾವನೆಗೈದರು. ನಗರ ಅಧ್ಯಕ್ಷ ಅನಿಲ್ ತೆಂಕಿಲ ವಂದಿಸಿದರು. ಮಾಧ್ಯಮ ವಕ್ತಾರ ನವೀನ್ ರೈ ಪಂಜಳ ಕಾರ್ಯಕ್ರಮ ನಿರೂಪಿಸಿದರು.
ಅಡಿಕೆ ನಿಷೇಧದ ತೂಗುಗತ್ತಿಯ ಮೇಲೆಯೇ ಉದ್ಯಮವನ್ನು ಮುನ್ನಡೆಸಬೇಕಾಗುತ್ತದೆ.ಇನ್ನಾದರೂ ಕಠಿಣ ಪರಿಶ್ರಮದೊಂದಿಗೆ ಅಂತಾರಾಷ್ಟ್ರೀಯ ಮಾನ್ಯತೆಯುಳ್ಳ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಅಡಿಕೆ ಹಾಳೆತಟ್ಟೆ ಅಮೇರಿಕಾದಲ್ಲಿ ನಿಷೇಧ ಹೇರಲಾಗುತ್ತಿದೆ. ಹೀಗಾಗಿ ಭಾರತದಿಂದ ಸದ್ಯ ಅಮೇರಿಕಾಕ್ಕೆ ಹಾಳೆತಟ್ಟೆ…
ಈಗಿನ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡಾಗ ಕಂಡು ಬರುವ ವಿಚಾರವೆಂದರೆ ಅಡಿಕೆಗೆ ಈಗ…
ಗಾಳಿಯ ಯದ್ವಾತದ್ವಾ ಚಲನೆಯ ಕಾರಣದಿಂದ ನಿರ್ದಿಷ್ಟ ಪ್ರದೇಶಗಳಲ್ಲಿ ಮಳೆಯಾಗುತ್ತಿದೆ ಅಂತ ಹೇಳಲು ಸಾಧ್ಯವಿಲ್ಲ.…
ಅರಣ್ಯ ಉಳಿದರಷ್ಟೇ ಮಾನವ ಉಳಿಯಲು ಸಾಧ್ಯ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ…