ಸುದ್ದಿಗಳು

ದ್ವಿತೀಯ ಪಿಯುಸಿ ಫಲಿತಾಂಶ | ಪುತ್ತೂರು ಅಂಬಿಕಾ ಪದವಿ ಪೂರ್ವ ವಿದ್ಯಾಲಯ ವಿದ್ಯಾರ್ಥಿಗಳು ರಾಜ್ಯಕ್ಕೆ 6ನೇ ಸ್ಥಾನ | ಪುತ್ತೂರು ತಾಲೂಕಿಗೆ ಪ್ರಥಮ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಪುತ್ತೂರು ನಗರದ ನಟ್ಟೋಜಾ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಂಸ್ಥೆಯ ಪದವಿ ಪೂರ್ವ ವಿದ್ಯಾಲಯ ಬಪ್ಪಳಿಗೆಯ (ವಸತಿಯುತ) ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 100 ಪ್ರತಿಶತ ಹಾಗೂ ನೆಲ್ಲಿಕಟ್ಟೆ ಕಾಲೇಜಿನ ವಿದ್ಯಾರ್ಥಿಗಳು ಶೇ. 99.12 ಪ್ರತಿಶತ ಫಲಿತಾಂಶದೊಂದಿಗೆ ಸಾಧನೆ ಮೆರೆದಿದ್ದಾರೆ. ವಿಜ್ಞಾನ ವಿಭಾಗದ ಅಜಿತ್ ಕುಮಾರ್ ಕೆ.ಎಸ್. ಮತ್ತು ಹಿಮಾನಿ ಎ.ಸಿ. 594 ಅಂಕಗಳೊಂದಿಗೆ ತಾಲೂಕಿಗೆ ಪ್ರಥಮ ಹಾಗೂ ರಾಜ್ಯಕ್ಕೆ 6ನೇ ಸ್ಥಾನ ಪಡೆದಿದ್ದಾರೆ.

Advertisement

ಅಂಬಿಕಾ ಪದವಿಪೂರ್ವ ವಿದ್ಯಾಲಯ ನೆಲ್ಲಿಕಟ್ಟೆಯ ವಿಜ್ಞಾನ ವಿಭಾಗದಲ್ಲಿ 228 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 127 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ 97 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಅಂಬಿಕಾ ಪದವಿಪೂರ್ವ ವಿದ್ಯಾಲಯ ಬಪ್ಪಳಿಗೆಯ ವಿಜ್ಞಾನ ವಿಭಾಗದಲ್ಲಿ 177 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 101 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ 75 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಓರ್ವ ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಪುತ್ತೂರು ಚಿಕ್ಕಮುಡ್ನೂರಿನ ಶ್ರೀನಿವಾಸ ಬಡೆಕಿಲ್ಲಾಯ ಮತ್ತು ರೇಖಾ ಕೆ.ವಿ. ದಂಪತಿಯ ಪುತ್ರ ಅಜಿತ್ ಕುಮಾರ್ ಕೆ.ಎಸ್. (594), ಪುತ್ತೂರಿನ ಚಿದಾನಂದ ಪೂಜಾರಿ ಮತ್ತು ಶೋಭಾ ಎಂ. ದಂಪತಿಯ ಪುತ್ರಿ ಹಿಮಾನಿ ಎ.ಸಿ. (594), ಪುತ್ತೂರು ಬಪ್ಪಳಿಗೆಯ ಬಿ.ಕೆ. ಸುರೇಶ್ ಮತ್ತು ಜಯಂತಿ ಎಸ್. ದಂಪತಿಯ ಪುತ್ರಿ ಕೆ.ಎಸ್. ಮನೀಶಾ (593), ಕಡಬ ಕಾಣಿಯೂರಿನ ಪದ್ಮನಾಭ ಜಿ. ಮತ್ತು ಹೇಮಾವತಿ ದಂಪತಿಯ ಪುತ್ರ ಉತ್ತಮ್ ಜಿ. (593), ಕಡಬ ಕಾಣಿಯೂರಿನ ಪ್ರದೀಪ್ ಬಿ. ಮತ್ತು ವಿದ್ಯಾ ದಂಪತಿಯ ಪುತ್ರ ವಿಕಾಸ್ ಬಿ. (589), ಕಡೇಶಿವಾಲಯದ ನರಸಿಂಹ ರಾವ್ ಮತ್ತು ಸಂಧ್ಯಾ ರಾವ್ ದಂಪತಿಯ ಪುತ್ರ ಆದಿತ್ಯ ಡಿ. ರಾವ್ (589), ಕಡಬ ಸುಬ್ರಹ್ಮಣ್ಯದ ರಾಘವೇಂದ್ರ ಆಚಾರ್ ಮತ್ತು ಸುಧಾಮಣಿ ದಂಪತಿಯ ಪುತ್ರಿ ಅನ್ವಿತಾ ಕೆ. (587), ಬಂಟ್ವಾಳ ಪೆರ್ನೆಯ ಚಂದ್ರಶೇಖರ್ ಎನ್. ಮತ್ತು ವನಿತಾ ದಂಪತಿಯ ಪುತ್ರ ವಿಷ್ಣುಪ್ರಸಾದ್ (587), ಸುಳ್ಯ ಐವರ್ನಾಡಿನ ವಿಶ್ವನಾಥ ಎಸ್. ಮತ್ತು ಗೀತಾ ಕೆ. ದಂಪತಿಯ ಪುತ್ರಿ ದ್ವಿತಿ ಎಸ್. (585), ಸುಳ್ಯ ಕನಕಮಜಲಿನ ಜಿ. ಮುರಲಿಕೃಷ್ಣ ಭಟ್ ಮತ್ತು ಶ್ವೇತಾ ಎಂ. ಭಟ್ ದಂಪತಿಯ ಪುತ್ರಿ ವೈಷ್ಣವಿ ಜಿ. ಭಟ್ (585), ಪುತ್ತೂರು ಹೆಬ್ಬಾರಬೈಲಿನ ರಾಮಗೋಪಾಲ ನೂಜಾಜೆ ಮತ್ತು ಪೂರ್ಣಿಮಾ ನೂಜಾಜೆ ದಂಪತಿಯ ಪುತ್ರ ಶ್ರೀಶ ನಿಡ್ವಣ್ಣಾಯ (585), ಪುತ್ತೂರು ಕಲ್ಲೇಗದ ಧರ್ಮಪಾಲ್ ಕೆ. ಮತ್ತು ಲತಾಕುಮಾರಿ ದಂಪತಿಯ ಪುತ್ರ ಅಕ್ಷಯ್ ಡಿ.ಎಲ್. (585), ಸುಳ್ಯದ ಶ್ರೀಧರ ರಾವ್ ಎಚ್. ಮತ್ತು ರಾಜೇಶ್ವರಿ ಎಸ್. ರಾವ್ ದಂಪತಿಯ ಪುತ್ರಿ ಅಮೂಲ್ಯ ರಾವ್ (585), ಪುತ್ತೂರಿನ ಶಿವರಾಮ್ ಆಳ್ವ ಮತ್ತು ಸೀಮಾ ಆಳ್ವ ದಂಪತಿಯ ಪುತ್ರಿ ವರ್ಷಿಣಿ ಆಳ್ವ (584), ಸುಳ್ಯ ಪೆರುವಾಜೆಯ ಹೊನ್ನಪ್ಪ ಗೌಡ ಮತ್ತು ಆಶಾಲತಾ ದಂಪತಿಯ ಪುತ್ರಿ ಸಾನ್ವಿ ಜೆ. ಎಚ್. (584), ಕಾಸರಗೋಡು ಮಂಜೇಶ್ವರದ ರಾಮಕೃಷ್ಣ ಭಟ್ ಎಮ್. ಮತ್ತು ವೇದಾವತಿ ಎ. ದಂಪತಿಯ ಪುತ್ರಿ ಸಂಹಿತಾ ಎಂ. (583), ಪುತ್ತೂರು ಬನ್ನೂರಿನ ಎಂ. ಕೇಶವ ಮತ್ತು ಪುಷ್ಪಲತಾ ದಂಪತಿಯ ಪುತ್ರಿ ಎಂ. ಮೃಣಾಲಿ (583), ಕಡಬ ಬಳ್ಪದ ವಿಶ್ವೇಶ್ವರ ಬಿ. ಮತ್ತು ಪುಷ್ಪಲತಾ ಯು. ದಂಪತಿಯ ಪುತ್ರಿ ಮಹತಿ ಬಿ. (583), ಬಂಟ್ವಾಳ ಪೆರ್ನೆಯ ಉಮೇಶ್ ನಾಯಕ್ ಮತ್ತು ಉಷಾ ದಂಪತಿಯ ಪುತ್ರ ಸಂಜಯ್ ಕುಮಾರ್ (581), ಪುತ್ತೂರಿನ ಜೀವನ್ ಮತ್ತು ಜ್ಯೋತಿಲಕ್ಷ್ಮೀ ದಂಪತಿಯ ಪುತ್ರಿ ಜೋಶಿತಾ (580), ಕಾಸರಗೋಡಿನ ರಮೇಶ್ ಭಟ್ ವೈ.ವಿ. ಮತ್ತು ಸವಿತ ದಂಪತಿಯ ಪುತ್ರ ಅನ್ವಿತ್ ಆರ್. ಭಟ್. (580) ಉತ್ತಮ ಅಂಕಗಳೊಂದಿಗೆ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಅರ್ಧಕೇಂದ್ರ ಯೋಗದಿಂದ ಈ 3 ರಾಶಿಗೆ ಯಶಸ್ಸು | ಕೋಟ್ಯಾಧಿಪತಿ ಯೋಗ!

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜೋತಿಷಿಗಳನ್ನು ಸಂಪರ್ಕಿಸಿ 9535156490

7 hours ago

ಹೊಸರುಚಿ | ಗುಜ್ಜೆ ಮೊಸರು ಗೊಜ್ಜು

ಗುಜ್ಜೆ ಮೊಸರು ಗೊಜ್ಜು ಬೇಕಾಗುವ ಸಾಮಾಗ್ರಿಗಳು :  ಗುಜ್ಜೆ 1 ಕಪ್ ಬೇಯಿಸಿ…

7 hours ago

ಜಮ್ಮು- ಕಾಶ್ಮೀರ | ಪ್ರವಾಸಿಗರ ಮೇಲೆ ಉಗ್ರರ ದಾಳಿ | ಉಗ್ರರ ದಾಳಿಗೆ ಕನ್ನಡಿಗ ಸೇರಿ 20 ಕ್ಕೂ ಹೆಚ್ಚು ಜನರು ಬಲಿ

ಜಮ್ಮು- ಕಾಶ್ಮೀರದ  ಪೆಹಲ್ಗಾಮ್ ನಲ್ಲಿಂದು ಪ್ರವಾಸಿಗರ ಮೇಲೆ  ಭಯೋತ್ಪಾದಕ ದಾಳಿ ನಡೆದಿದೆ. ಘಟನೆಯಲ್ಲಿ…

18 hours ago

ಹವಾಮಾನ ವರದಿ | 22.04.2025 | ಅಲ್ಲಲ್ಲಿ ಸಂಜೆ ಗುಡುಗು ಸಹಿತ ಮಳೆ | ಎ.26ರಿಂದ ಮಳೆ ಹೆಚ್ಚಾಗುವ ನಿರೀಕ್ಷೆ

23.04.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…

21 hours ago

ಭಾರತದ ತೋಟಗಾರಿಕಾ ಹಣ್ಣಿನ ಬೆಳೆಗಳತ್ತ ಚಿತ್ತ | ಜಾಗತಿಕ ಮಾರುಕಟ್ಟೆಗೆ ಭಾರತೀಯ ತಾಜಾ ಹಣ್ಣುಗಳ ಪರಿಚಯ |

ಮಹಾರಾಷ್ಟ್ರದ ಅಹಲ್ಯಾನಗರದಿಂದ ಅಮೆರಿಕದ ನ್ಯೂಯಾರ್ಕ್‌ಗೆ 14 ಟನ್‌ಗಳಷ್ಟು ಭಾರತೀಯ ದಾಳಿಂಬೆಯನ್ನು ರಫ್ತು ಮಾಡಲಾಗಿದೆ.…

1 day ago