Advertisement
ಸುದ್ದಿಗಳು

ಚುನಾವಣಾ ಕಣ | ಪುತ್ತೂರಿನಲ್ಲಿ ನಂಬರ್‌ 7 ರ ಆಟ | ಸಂಖ್ಯಾ ಶಾಸ್ತ್ರದ ಭವಿಷ್ಯ ಏನು ಹೇಳಿದೆ… ? |

Share

ಚುನಾವಣಾ ಕಣದಲ್ಲಿ  ಈ ಬಾರಿ ಪುತ್ತೂರು ಕ್ಷೇತ್ರವು ಎಲ್ಲೆಡೆಯಿಂದಲೂ ಗಮನ ಸೆಳೆದಿದೆ. ಯಾರಾಗಬಹುದು ಶಾಸಕರು ಎನ್ನುವ ಕುತೂಹಲ ಎಲ್ಲೆಡೆಯೂ ಇದೆ ಈ ನಡುವೆ ಕುಮಾರಸುಬ್ರಹ್ಮಣ್ಯ ಮುಳಿಯಾಲ ಅವರು ಕೇರಳದ ಪ್ರಸಿದ್ಧ ಜ್ಯೋತಿಷಿಯೊಬ್ಬರ ಬಳಿ ಸಂಖ್ಯಾಶಾಸ್ತ್ರದ ಮಾಹಿತಿ ಪಡೆದಿದ್ದಾರೆ. ಈ ಬಗ್ಗೆ ಅವರು ಮಾಡಿರುವ ವಿಶ್ಲೇಷಣೆ ಇಲ್ಲಿದೆ…

Advertisement
Advertisement
Advertisement

17 – 04- 2023 ರಂದು ಅರುಣ್‌ ಕುಮಾರ್‌ ಪುತ್ತಿಲ  ನಾಮಪತ್ರ ಸಲ್ಲಿಸಿದ ದಿನ.ಇದನ್ನು ಎಲ್ಲಾ ಕೂಡಿಸಿದರೆ  ಸಂಖ್ಯೆ1. ಬರುತ್ತದೆ. ಚುನಾವಣಾ ದಿನಾಂಕ 10 . ಇದನ್ನೂ ಕೂಡಿಸಿದರೆ ಸಂಖ್ಯೆ1 . ಸೂರ್ಯನಿಂದ ಆಳಲ್ಪಡುವ ಈ ಸಂಖ್ಯೆ ನಾಯಕತ್ವದ ಗುಣ ಸೂಚಿಸುತ್ತದೆ .ಇವರು ತುಂಬಾ ಪ್ರಖರರು ಮತ್ತು ಪ್ರಮುಖರಾಗಿರುತ್ತಾರೆ ಇದು ಪ್ರಥಮ ಎಂಬುದನ್ನು ಸೂಚಿಸುತ್ತದೆ. ಅಂದರೆ ಗೆಲುವು ಎಂದು ಅರ್ಥ ಅಥವಾ ಹೊಸ ಶಖೆಯ ಪ್ರಾರಂಭ ಎಂಬ ಅರ್ಥ .ಶ್ರೇಣಿಯಲ್ಲಿ ಮೊದಲಿಗರಾಗುತ್ತಾರೆ ಎಂಬುದಾಗಿ ಯೋಚಿಸಬಹುದು.

Advertisement

ದಿನಾಂಕ17 ,ಅಂದರೆ  ಸಂಖ್ಯೆ 8. ಎಂಟು  ಅಷ್ಠದಿಕ್ಪಾಲಕರು ಎಂದು ಅರ್ಥ. ಇದರಿಂದ ಅಷ್ಠ ದಿಕ್ಪಾಲಕರ ಅನುಗ್ರಹ ಇದೆ ಎಂದು ತಿಳಿಯಬಹುದು. ಪುತ್ತಿಲರ ಕ್ರಮ ಸಂಖ್ಯೆ 7 . ಸಂಖ್ಯೆ  7 ಮಾತ್ರ ಸಾರ್ವತ್ರಿಕವಾಗಿ ಎಲ್ಲರಿಗೂ ಲಕ್ಕಿ7ನಂಬರ್. ಹಾಗಾಗಿಯೇ ಈ ಸಂಖ್ಯೆಯನ್ನು ಮಂಗಳಕರ, ಶುಭಪ್ರದ ಭಾವಿಸಿ ಆ ದಿನಂದಂದು ತಮ್ಮ ಕೆಲಸಕಾರ್ಯಗಳನ್ನು ಆರಂಭಿಸುತ್ತಾರೆ. ಅಂದರೆ ಪುತ್ತಿಲ ರ ಗೆಲುವುವಿನ ಶುಭಾರಂಭದ ಸಂಖ್ಯೆ ಅವರ ಕ್ರಮ ಸಂಖ್ಯೆಯಾಗಿ ಒದಗಿ ಬಂದಿದೆ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಸಂಖ್ಯೆ 7 ಚಂದ್ರನನ್ನು ಸೂಚಿಸುತ್ತದೆ. ಈ ಸಂಖ್ಯೆಯಲ್ಲಿ ಹುಟ್ಟಿದವರು  ಸ್ವತಂತ್ರವಾಗಿ ಇರಲು ಬಯಸುತ್ತಾರೆ. ಇವರದು ತುಂಬಾ ತೀಕ್ಷ್ಣವಾದ ವ್ಯಕ್ತಿತ್ವ. ತಮ್ಮಷ್ಟಕ್ಕೆ ತಾವೇ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಇವರದು ವಿರಾಮ ಇಲ್ಲದಂತೆ ದುಡಿಯುವ ಜಾಯಮಾನ . ಪುತ್ತಿಲ ರದ್ದು ಇದೆ ವ್ಯಕ್ತಿತ್ವ. ಸಂಖ್ಯೆ7  ಸಪ್ತ ಋಷಿಗಳ ಪ್ರತೀಕ ಹಾಗಾಗಿ ನಮ್ಮ ಸನಾತನ ನಂಬಿಕೆಯ ಸಪ್ತಋಷಿಗಳ ಅನುಗ್ರಹವೂ ಪುತ್ತಿಲರಿಗೆ ಇದೆ ಎಂದಾಯಿತು. ಅಂದರೆ ಒಂದು ಕಡೆಯಿಂದ ದೇವಾದಿ ದೇವತೆಗಳ ಅನುಗ್ರಹ,  ಋಷಿಗಳ ಯೋಗಿಗಗಳ ಅನುಗ್ರಹ, ಪ್ರಕೃತಿಯ ಅನುಗ್ರಹ, ಅಸಂಖ್ಯ ಸಂಖ್ಯೆಯ ಜನರ ಅನುಗ್ರಹ ,  ಸ್ವಂತದ ಸಂಕಲ್ಪ ಶಕ್ತಿ, ಹಿಂದುತ್ವದ  ಭಾರತ ಮಾತೆಯ ಶ್ರಿರಕ್ಷೆ. ಹೀಗೇ ಎಲ್ಲಾ ಶಕ್ತಿಗಳೂ ಒಂದೇ ಕಡೆಗೆ ಕೇಂದ್ರೀಕೃತವಾಗಿರುವುದರಿಂದ ಅರುಣ್‌ ಕುಮಾರ್‌ ಅವರ ಪರವಾಗಿಯೇ ಅಲೆ ಕಂಡುಬರುತ್ತಿದೆ.

Advertisement

ಹೀಗೆ ಜಗತ್ತಿನ ಎಲ್ಲಾ ಅನುಗ್ರಹ ಕಾರಕ ಶಕ್ತಿಗಳು ಪುತ್ತಿಲರ ಪರವಾಗಿ ಇರುವಾಗ , ಮತ್ತು ಅವರು ನಾಮಪತ್ರ ಸಲ್ಲಿಸುವಾಗ ಕತ್ತಲೆಯ ಅಮಾವಾಸ್ಯೆಯಾಗಿರದೆ  ಭರವಸೆಯ ಬೆಳಕು ಬೆಳಗುತ್ತಿರುವಾಗ ಪ್ರತಿಸ್ಪರ್ದಿಗಳಿಗೆ ಗೆಲುವು ಮರೀಚಿಕೆಯೇ ಸರಿ. ಇಷ್ಟು ವರ್ಷಗಳಲ್ಲಿ ಏನಾಗಿದೆ ಎಂಬುದು ಲೆಕ್ಕಾಚಾರ ಅಲ್ಲ, ಈ ಸಲ  ಈ ಬಾರಿಯ ಸ್ಪರ್ಧಾ ಕಣದಲ್ಲಿ ಪುತ್ತಿಲರೋ ಪ್ರತಿಸ್ಪರ್ದಿಗಳೋ ಎಂಬ ಕಾಲಘಟ್ಟದಲ್ಲಿ  ಪ್ರಪಂಚದ ಸಕಲ ಶಕ್ತಿಗಳು ಪುತ್ತಿಲರ ಪರವಾಗಿದೆ. ಎಂಬುದರಲ್ಲಿ ಸಂಶಯವಿಲ್ಲ. ಹಾಗಾಗಿಯೇ ಈ ಬಾರಿ ಪುತ್ತೂರಿಗೆ ಪುತ್ತಿಲ ಎಂಬ ಟ್ರೆಂಡ್‌ ಕೂಡಾ ಸರಿಯಾಗುತ್ತಿದೆ.

ಬರಹ :
ಕುಮಾರ ಸುಬ್ರಹ್ಮಣ್ಯ ಮುಳಿಯಾಲ .
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 19.01.2025 | ಇಂದು ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಕೃಷಿಕರೇ ಇರಲಿ ಎಚ್ಚರ |

20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…

6 hours ago

ಸರ್ಕಾರದ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳುವಂತೆ ಸಚಿವ ಈಶ್ವರ್ ಖಂಡ್ರೆ ಕರೆ

ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…

10 hours ago

ಅಡಿಕೆ ಬೆಳೆಗಾರರಿಗೆ ಆತಂಕ ಬೇಡ | ಅಡಿಕೆ ಬೆಳೆಗಾರರ ಸಮಸ್ಯೆ ಬಗಹೆರಿಸಲು ಸಿದ್ದ | ಕೇಂದ್ರ ಸಚಿವ ಶಿವರಾಜ್ ಸಿಂಗ್  ಚಾವ್ಙಾಣ್ ಭರವಸೆ |

ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…

10 hours ago

ಕ್ಯಾಂಪ್ಕೋ ತಯಾರಿಕೆಯ ಕೊಬ್ಬರಿ ಎಣ್ಣೆ “ಕಲ್ಪ” 5 ಲೀಟರ್ ಕ್ಯಾನ್ ಬಿಡುಗಡೆ

ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…

3 days ago

ಮುಂಜಾನೆ ಏಳಬೇಕು, ಬೇಗನೇ ಏಳಬೇಕು

ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…

3 days ago

ಹವಾಮಾನ ವರದಿ | 15-01-2025 | ಕೆಲವು ಕಡೆ ಇಂದೂ ತುಂತುರು ಮಳೆ ಸಾಧ್ಯತೆ |

ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…

4 days ago