Advertisement
ಸುದ್ದಿಗಳು

ಕರ್ನಾಟಕ ಶಾಸ್ತ್ರೀಯ ಸಂಗೀತ ವಿದ್ವತ್ ಪರೀಕ್ಷೆಯಲ್ಲಿ ಸುನಾದ ಸಂಗೀತ ಶಾಲೆಯ ಆರು ವಿದ್ಯಾರ್ಥಿನಿಯರಿಗೆ ವಿಶಿಷ್ಟ ಶ್ರೇಣಿ

Share

ಮೈಸೂರಿನ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯವು 2026ರ ಮೇ ತಿಂಗಳಲ್ಲಿ ನಡೆಸಿದ ಕರ್ನಾಟಕ ಶಾಸ್ತ್ರೀಯ ಸಂಗೀತ ವಿಶೇಷ ಪರೀಕ್ಷೆಗಳ ವಿದ್ವತ್ ಪರೀಕ್ಷೆಯಲ್ಲಿ ಪುತ್ತೂರಿನ ಸುನಾದ ಸಂಗೀತ ಕಲಾ ಶಾಲೆಯ ಆರು ಮಂದಿ ವಿದ್ಯಾರ್ಥಿನಿಯರು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಸಂಗೀತ ಗುರುಗಳಾದ ವಿದ್ವಾನ್ ಕಾಂಚನ ಎ. ಈಶ್ವರ ಭಟ್ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿನಿಯರು ಪರೀಕ್ಷೆ ಎದುರಿಸಿದ್ದರು. ವಿಶೇಷವೆಂದರೆ, ಉತ್ತೀರ್ಣರಾದ ವಿದ್ಯಾರ್ಥಿನಿಯರೆಲ್ಲರೂ ತಮ್ಮ ಸಂಗೀತ ಅಭ್ಯಾಸದ ಆರಂಭದಿಂದಲೂ ಇದೇ ಗುರುಗಳ ಬಳಿ ತರಬೇತಿ ಪಡೆಯುತ್ತಿದ್ದಾರೆ. ಕಳೆದ 20 ವರ್ಷಗಳ ನಿರಂತರ ಅಭ್ಯಾಸ ಮತ್ತು ಗುರುಗಳ ಮಾರ್ಗದರ್ಶನ ಈ ಸಾಧನೆಗೆ ಕಾರಣವಾಗಿದೆ.

35 ವರ್ಷಗಳಿಂದ ಸಂಗೀತ ಸೇವೆ : ಸುನಾದ ಸಂಗೀತ ಕಲಾ ಶಾಲೆಯು ಕಳೆದ 35 ವರ್ಷಗಳಿಂದ ಸಂಗೀತ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಸಾವಿರಾರು ಸಂಗೀತ ಪ್ರತಿಭೆಗಳನ್ನು ರೂಪಿಸಿದೆ. ಈ ಅವಧಿಯಲ್ಲಿ ಅನೇಕ ವಿದ್ಯಾರ್ಥಿಗಳು ಜೂನಿಯರ್, ಸೀನಿಯರ್ ಮತ್ತು ವಿದ್ವತ್ ಪದವಿಗಳನ್ನು ಪಡೆದಿದ್ದಾರೆ.

ಶಾಲೆಯಲ್ಲಿ ಸಂಗೀತ ಶಿಕ್ಷಣ ಪಡೆದ ನೂರಾರು ವಿದ್ಯಾರ್ಥಿಗಳು ಇಂದು ಸ್ವತಃ ಸಂಗೀತ ತರಗತಿಗಳನ್ನು ನಡೆಸುತ್ತಿದ್ದು, ಸಂಗೀತ ಪರಂಪರೆಯನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುತ್ತಿರುವುದು ಶಾಲೆಯ ಸಾಧನೆಯಾಗಿದೆ.

ವಿವಿಧ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳ ಸಾಧನೆ : ಜೂನಿಯರ್ ವಿಭಾಗದಲ್ಲಿ 33 ವಿದ್ಯಾರ್ಥಿಗಳು, ಸೀನಿಯರ್ ವಿಭಾಗದಲ್ಲಿ 3, ವಿದ್ವತ್ ಪೂರ್ವ ಪರೀಕ್ಷೆಯಲ್ಲಿ ಶ್ರೀಹರಿ ಓಣಿಯಡ್ಕ, ಶ್ರೀಮತಿ ಅಶ್ವಿನಿ ,ಶ್ರೀಮತಿ ಅಮೃತವರ್ಷಿಣಿ, ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದರೆ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ಶ್ರೀಮತಿ ಸಂಧ್ಯಾ ಸತ್ಯನಾರಾಯಣ, ಶ್ರೀಮತಿ ಸೌರಭ, ಶ್ರೀಮತಿ ಧನ್ಯಶ್ರೀ, ಶ್ರೀಮತಿ ಅನುಷಾ, ಶ್ರೀಮತಿ ತನ್ಮಯಿ ಹಾಸನಡ್ಕ, ಶ್ರೀಮತಿ ಮನೋರಮ ಇವರು ವಿಶಿಷ್ಟ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.

ಸಂಧ್ಯಾ

ಧನ್ಯಶ್ರೀ
ಮನೋರಮ
ಸೌರಭ
ತನ್ಮಯಿ
ಅನುಷಾ

ವಿದ್ಯಾರ್ಥಿಗಳ ಈ ಸಾಧನೆಗೆ ಸಂಗೀತ ಗುರು ವಿದ್ವಾನ್ ಕಾಂಚನ ಎ. ಈಶ್ವರ ಭಟ್ ಹಾಗೂ ಸುನಾದ ಸಂಗೀತ ಕಲಾ ಶಾಲೆಯ ತಂಡದ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.

Six students of Puttur’s Sunada Sangeetha Kala School have secured distinction in the Vidwat examination conducted by the Gangubai Hangal University of Music and Performing Arts, Mysuru, in May 2026. The students received training under music teacher Vidwan Kanchana A. Eshwara Bhat. The institution has been serving the field of classical music education for 35 years and has trained thousands of students, many of whom have gone on to become music teachers.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮುಂದಿನ ಬೇಸಿಗೆಗೆ ಈಗಿನಿಂದಲೇ ಸಿದ್ಧರಾಗಿ – ನೀರು ಉಳಿಸದಿದ್ದರೆ ತೋಟ ಉಳಿಸುವುದು ಕಷ್ಟವಾಗಬಹುದು

2026ರ ಎಲ್‌ನಿನೋ ಪರಿಣಾಮದಿಂದ ಮುಂಗಾರು ಮತ್ತು ಹಿಂಗಾರು ದುರ್ಬಲಗೊಂಡಿರುವ ಹಿನ್ನೆಲೆಯಲ್ಲಿ ಮೇ 2027ರವರೆಗೆ…

3 hours ago

ಅಸ್ಸಾಂನಲ್ಲಿ ಅಡಿಕೆ ಸಾಗಣೆಗೆ ಸಮಸ್ಯೆ…? ಅಕ್ರಮ ಅಡಿಕೆ ಸಾಗಾಟವೇ ಈಗ ಸಂಕಷ್ಟವೇ…?

ಅಸ್ಸಾಂನ ಬರಾಕ್ ಕಣಿವೆಯ ಕಟಿಗೋರಾ ಭಾಗದಲ್ಲಿ ಸ್ಥಳೀಯ ಅಡಿಕೆ ಸಾಗಣೆಗೆ ಸಿಂಡಿಕೇಟ್ ಅಡ್ಡಿಪಡಿಸುತ್ತಿದೆ…

3 hours ago

ಹವಾಮಾನ ವರದಿ | 13-11-2026 | ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ – ಅಕ್ವಾನ್ ಚಂಡಮಾರುತದ ಪಥ ನಿಗೂಢ

ಕರ್ನಾಟಕದಾದ್ಯಂತ ಒಣಹವೆ ಮುಂದುವರಿಯಲಿದ್ದು, ಉತ್ತರ ಭಾರತದ ಶೀತ ಹಾಗೂ ಶುಷ್ಕ ಗಾಳಿಯಿಂದ ಚಳಿಯ…

22 hours ago

ತಾರಸಿ ಮೇಲೆ 150ಕ್ಕೂ ಹೆಚ್ಚು ಗಿಡಗಳ ಹಸಿರು ತೋಟ: ಔಷಧಿ ಸಸ್ಯಗಳಿಂದಲೇ ದಿನಬಳಕೆ ಉತ್ಪನ್ನ ತಯಾರಿಸಿ ಮಾರಾಟ ಮಾಡುತ್ತಿರುವ ಗೃಹಿಣಿ

ಬಳ್ಳಾರಿಯ ಗೃಹಿಣಿ ಆರ್.ಜೆ. ಸುಜಾತ ಅವರು ಮನೆಯ ತಾರಸಿಯಲ್ಲಿ 150ಕ್ಕೂ ಹೆಚ್ಚು ಸಸ್ಯಗಳನ್ನು…

1 day ago

ಬಳಕೆಯಾದ ಅಡುಗೆ ಎಣ್ಣೆ ವಿಲೇವಾರಿಗೆ ಅಧಿಕೃತ ಆ್ಯಪ್

ಹೋಟೆಲ್‌ಗಳಲ್ಲಿ ಬಳಕೆಯಾದ ಅಡುಗೆ ಎಣ್ಣೆ ಸಂಗ್ರಹಣೆ ಮತ್ತು ವಿಲೇವಾರಿಗೆ ಮೂರು ತಿಂಗಳೊಳಗೆ ಅಧಿಕೃತ…

1 day ago

ಕೃಷಿಯಲ್ಲಿ ಶೇ.4ಕ್ಕೂ ಅಧಿಕ ಬೆಳವಣಿಗೆ, ಬೆಳೆ ವೈವಿಧ್ಯತೆಗೆ ಆದ್ಯತೆ – ರೈತರಿಗೆ ತಂತ್ರಜ್ಞಾನ ಅಳವಡಿಸಿಕೊಳ್ಳಲು ಪ್ರಧಾನಿ ಮೋದಿ ಕರೆ

ಕೃಷಿ ಕ್ಷೇತ್ರದಲ್ಲಿ ವಾರ್ಷಿಕ ಶೇ.4ಕ್ಕೂ ಅಧಿಕ ಬೆಳವಣಿಗೆ ದಾಖಲಾಗಿದ್ದು, ರೈತರ ಆದಾಯ ಹೆಚ್ಚಿಸಲು…

1 day ago