ಸರ್ವ ಸುಸಜ್ಜಿತ ಪುತ್ತೂರು ಮಿನಿವಿಧಾನ ಸೌಧ. ಸಮರ್ಥ ಶಾಸಕರು. ಹಾಗಿದ್ದರೂ ಪುತ್ತೂರು ಮಿನಿವಿಧಾನ ಸೌಧದ ಲಿಫ್ಟ್ ವ್ಯವಸ್ಥೆ ಕೈಕೊಟ್ಟಿದೆ. ಇದರಿಂದಾಗಿ ವಿಕಲಚೇತನರು ಸಂಕಷ್ಟ ಪಡಬೇಕಾಗಿದೆ. ಶುಕ್ರವಾರ ವೀಲ್ ಚಯರ್ ಮೂಲಕ ವಿಕಲಚೇತನರೊಬ್ಬರನ್ನು ಕಚೇರಿಯಲ್ಲಿನ ತುರ್ತು ಕೆಲಸಕ್ಕೆ ಕರೆತಂದ ವಿಡಿಯೋ ಈಗ ವೈರಲ್ ಆಗಿದೆ.
ಪುತ್ತೂರು ಮಿನಿವಿಧಾನ ಸೌಧ ಸರ್ವ ಸುಸಜ್ಜಿತವಾಗಿ ನಿರ್ಮಾಣವಾಗಿದೆ.ಎಲ್ಲಾ ಕಚೇರಿಗಳೂ ಒಂದೇ ಕಡೆ ಇರಬೇಕು ಎಂಬುದು ಸರಕಾರದ ಉದ್ದೇಶ. ಆದರೆ ಆರಂಭದಲ್ಲಿ ನೋಂದಣಿ ಇಲಾಖೆ ಮಿನಿವಿಧಾನ ಸೌಧಕ್ಕೆ ವರ್ಗಾವಣೆ ಆಗುವುದಕ್ಕೆ ನೀಡಿರುವುವ ಕಾರಣವೂ ಇದೇ ಆಗಿತ್ತು. ಅಲ್ಲಿನ ಮೇಲಿನ ಮಹಡಿಗೆ ವಿಕಲಚೇತನರಿಗೆ ತೆರಳಲು ಕಷ್ಟ ಎನ್ನುವ ಮಾತಿತ್ತು.ಇದಕ್ಕಾಗಿ ಆಗಿನ ಸಹಾಯಕ ಕಮೀಶನರ್, ಈಗಿನ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆವಿ ಅವರು ಲಿಫ್ಟ್ ವ್ಯವಸ್ಥೆ ಮಾಡಿಸಲು ಕ್ರಮ ಕೈಗೊಂಡು ಎಲ್ಲಾ ಇಲಾಖೆಗಳೂ ಒಂದೇ ಕಡೆ ಲಭ್ಯವಾಗುವಂತೆ, ವಿಕಲಚೇತನರಿಗೂ ವ್ಯವಸ್ಥೆ ಆಗುವಂತೆ ಮಾಡಿದ್ದರು.
ಇದೀಗ ಲಿಫ್ಟ್ ವ್ಯವಸ್ಥೆ ಹಾಳಾಗಿ 15 ದಿನ ಕಳೆದರೂ ದುರಸ್ತಿಯಾಗಿಲ್ಲ.ಹೀಗಾಗಿ ಸಮಸ್ಯೆ ಆಗಿದೆ ಎಂದು ದೂರುತ್ತಾರೆ ವಿಕಲಚೇತನರು. ಶಾಸಕರ ಕಚೇರಿಯೂ ಇದೇ ಮಿನಿವಿಧಾನ ಸೌಧದಲ್ಲಿದ್ದರೂ ವ್ಯವಸ್ಥೆ ಸುಧಾರಿಸದ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಂಬತ್ತು ತಿಂಗಳ ಹಿಂದೆ ಜೂನ್ 5 ರಂದು ISS ಅಂದರೆ ಅಂತಾರಾಷ್ಟ್ರೀಯ ಬಾಹ್ಯಾಕಾಶ…
ಮಂಗನಕಾಯಿಲೆ ಸೋಂಕು ಮಲೆನಾಡು ಕಡೆಗಳಲ್ಲಿ ಹೆಚ್ಚಾಗಿ ಕಾಣಿಸುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಕೆಲವು ಕಡೆ…
ರೈತರ ಪಂಪ್ ಸೆಟ್ ಗಳಿಗೆ ಪ್ರತಿನಿತ್ಯ 7 ಗಂಟೆಗಳ ಕಾಲ ವಿದ್ಯುತ್ ಪೂರೈಕೆ…
ಅಮೆರಿಕದ ಹಲವು ರಾಜ್ಯಗಳಲ್ಲಿ ಅತ್ಯಂತ ಪ್ರಬಲ ಚಂಡಮಾರುತ ಹಾಗೂ ಸುಳಿಗಾಳಿ ಉಂಟಾಗಿದ್ದು, ಈವರೆಗೆ…
ರಾಜ್ಯದ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಾ. 20 ರವರೆಗೆ ಬಿಸಿ ಗಾಳಿ ಬೀಸುವ…
ಕಣಿವೆ ರಾಜ್ಯ ಕಾಶ್ಮೀರದಲ್ಲಿ ಹಿಮಪಾತ ಆರಂಭವಾಗಿದೆ. ಕಾಶ್ಮೀರದ ಹಲವು ಭಾಗಗಳಲ್ಲಿ ಎರಡು ದಿನಗಳ…