ಸುದ್ದಿಗಳು

ಮಹಿಳೆಯನ್ನು ನುಂಗಿದ ಹೆಬ್ಬಾವು…! | ಅಪರೂಪದ ಘಟನೆ.. |

Share

ಸಾಮಾನ್ಯವಾಗಿ ಹೆಬ್ಬಾವು ಮನುಷ್ಯರನ್ನು ನುಂಗುವುದಿಲ್ಲ ಎಂಬುದು ವಾದ. ಆದರೆ ಭಾರತ ಹೊರತುಪಡಿಸಿ ಇತರ ಕೆಲವು ದೇಶಗಳಲ್ಲಿನ ಹೆಬ್ಬಾವು ಪ್ರಬೇಧವು ಮನುಷ್ಯರನ್ನೂ ನುಂಗುತ್ತವೆ. ಇಂಡೋನೇಷ್ಯಾದ ಜಾಂಬಿ ಪ್ರಾಂತ್ಯದಲ್ಲಿ ಮಹಿಳೆಯೊಬ್ಬರನ್ನು ಹೆಬ್ಬಾವು ಕೊಂದು ಸಂಪೂರ್ಣ ನುಂಗಿದೆ ಎಂದು ವರದಿಯಾಗಿದೆ.

ಸುಮಾರು 50 ವರ್ಷದ ಮಹಿಳೆ ಬೆಳಗ್ಗೆ ರಬ್ಬರ್ ಟ್ಯಾಪಿಂಗ್‌ಗೆ ಹೋಗಿದ್ದರು. ಭಾನುವಾರ ಬೆಳಗ್ಗೆ ಟ್ಯಾಪಿಂಗ್‌ ಗೆ ಹೋದವರು ನಾಪತ್ತೆಯಾಗಿದ್ದರು. ಇಡೀ ದಿನ ಅವರ ಮನೆಯವರುಯ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಆದರೆ ಟ್ಯಾಪಿಂಗದ ಸಾಮಾಗ್ರಿಗಳು ರಬ್ಬರ್‌ ತೋಟದಲ್ಲಿ ಪತ್ತೆಯಾಗಿತ್ತು. ಹೀಗಾಗಿ ಗ್ರಾಮಸ್ಥರು ತಂಡಗಳ ಮೂಲಕ ಹುಡುಕಾಡಿದರು. ಈ ಸಂದರ್ಭ ಗ್ರಾಮಸ್ಥರಿಗೆ ಹೆಬ್ಬಾವು ಕಾಣಿಸಿದ್ದು, ಅದರ ಹೊಟ್ಟೆ ಮನುಷ್ಯರನ್ನೇ ಹೋಲುವ ಮಾದರಿ ಇದ್ದರಿಂದ ಸಂದೇಹದಿಂದ ಹಾವನ್ನು ಕೊಂದು ಅದರೊಳಗೆ ಪತ್ತೆ ಮಾಡಿದಾಗ ಮಹಿಳೆಯ ಶವ ಪತ್ತೆಯಾಗಿದೆ.

ಹೆಬ್ಬಾವು ಮನುಷ್ಯರನ್ನು ನುಂಗುವುದು  ಅಪರೂಪದ ಘಟನೆ. ಆದರೆ ಇಂಡೋನೇಷ್ಯಾದಲ್ಲಿ ಹೆಬ್ಬಾವು ಕೊಂದು ತಿಂದಿರುವುದು ಇದೇ ಮೊದಲಲ್ಲ. 2017 ಮತ್ತು 2018 ರಲ್ಲಿ  ಇಂತಹ ಎರಡು  ಸಾವುಗಳು ವರದಿಯಾಗಿವೆ.

 

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಹೊಸರುಚಿ | ಗುಜ್ಜೆ ಶೇಂಗಾ ಪಲ್ಯ

ಗುಜ್ಜೆ ಶೇಂಗಾ ಪಲ್ಯ ಮಾಡುವ ವಿಧಾನ...

5 hours ago

ಕೇರಳದಲ್ಲಿ ಹೀಟ್‌ ವೇವ್‌ ಎಲರ್ಟ್‌ | 10 ಜಿಲ್ಲೆಗಳಿಗೆ ಎಲ್ಲೋ ಎಲರ್ಟ್‌ |

ಕೇರಳದಲ್ಲಿ ಇನ್ನೂ ಎರಡು ದಿನಗಳ ಕಾಲ ತಾಪಮಾನ ಏರಿಕೆಯ ಬಗ್ಗೆ ಹವಾಮಾನ ಇಲಾಖೆ…

12 hours ago

ಮೆಣಸಿನಕಾಯಿ ಬೆಲೆ ಕುಸಿತ | ಒಣ ಮೆಣಸಿನಕಾಯಿ ಖರೀದಿಸುವಂತೆ ಬಸವರಾಜ ಬೊಮ್ಮಾಯಿ ಪತ್ರ

ಕೇಂದ್ರ ಸರ್ಕಾರದ ಯೋಜನೆಯಡಿ ಕರ್ನಾಟಕದ ರೈತರೂ ಬೆಳೆದ ಮೆಣಸಿನಕಾಯಿಯನ್ನೂ ಖರೀದಿಸಬೇಕು ಎಂದು ಸಂಸದ…

13 hours ago

ಬೆಂಗಳೂರಿನಲ್ಲಿ ನೀರಿನ ದರ ಒಂದು ಲೀಟರ್‌ಗೆ ಒಂದು ಪೈಸೆ ಏರಿಕೆ ಮಾಡಲು ಸರ್ಕಾರ ಚಿಂತನೆ

ಬೆಂಗಳೂರಿನಲ್ಲಿ ನೀರಿನ ದರ ಒಂದು ಲೀಟರ್‌ಗೆ ಒಂದು ಪೈಸೆಯಷ್ಟು ಏರಿಕೆ ಮಾಡಲು ಚಿಂತನೆ…

13 hours ago

ಒಂದು ವರ್ಷದಲ್ಲಿ 10 ಲಕ್ಷ ಮನೆಗಳಿಗೆ ಸೌರ ಫಲಕ

ಮನೆ ಛಾವಣಿಗಳ ಮೇಲೆ ಸೌರ ಫಲಕಗಳನ್ನು ಅಳವಡಿಸುವ ಮೂಲಕ ವಿದ್ಯುತ್ ಉತ್ಪಾದಿಸಿ ಮನೆಗಳಿಗೆ…

1 day ago

ನಂದಿನಿ ಹಾಲಿನ ದರ ಏರಿಕೆಗೆ ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ ವಿರೋಧ

ನಂದಿನ ಹಾಲಿನ ದರ ಏರಿಕೆಗೆ ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ ವಿರೋಧ ವ್ಯಕ್ತಪಡಿಸಿದೆ. …

1 day ago