#Rain | ದುರ್ಬಲಗೊಂಡ ಮುಂಗಾರು | ಭಾರತದ ಕಾಲು ಭಾಗವು ಮಳೆಯ ಕೊರತೆ ಎದುರಿಸುತ್ತಿದೆ…! |

August 7, 2023
7:00 AM
ಈ ಬಾರಿ ಮುಂಗಾರು ದುರ್ಬಲಗೊಂಡಿದ್ದು, ದೇಶದ ಶೇ.25 ಪ್ರದೇಶದಲ್ಲಿ ಮಳೆಯ ಕೊರತೆ ಕಾಡುತ್ತಿದೆ. ಹೀಗಾಗಿ ಕೃಷಿ ಸೇರಿದಂತೆ ಎಲ್ಲಾ ಕ್ಷೇತ್ರಗಳಿಗೂ ಹಿಡೆತ ಬೀಳಲಿದೆ.

ಕಳೆದ 5 ವರ್ಷಗಳಿಂದ ಮುಂಗಾರು ಮಳೆಯ ಸ್ಥಿತಿ ಬದಲಾಗುತ್ತಿದೆ. ಇದೀಗ ಈ ವರ್ಷ ಮಳೆಯ ಕೊರತೆ ಇಡೀ ದೇಶದಲ್ಲಿ ಕಾಡುತ್ತಿದೆ. ಈಗಿನ ಪ್ರಕಾರ ಭಾರತದ ಭೂಪ್ರದೇಶದ ಕಾಲುಭಾಗವು ಬರ ಮಾದರಿಯ ಪರಿಣಾಮವನ್ನು  ಎದುರಿಸುತ್ತಿದೆ. ಮುಂಗಾರು ತೀರಾ ದುರ್ಬಲವಾಗಿದೆ. 

Advertisement
Advertisement

ಭಾರತದಲ್ಲಿ ಏಪ್ರಿಲ್‌ ತಿಂಗಳಿನಿಂದ ಮಳೆಯ ನಿರೀಕ್ಷೆ ಆರಂಭವಾಗಿದೆ. ಅಂದಿನಿಂದಲೇ ಬರಗಾಲದ ಪರಿಸ್ಥಿತಿ ಎದುರಿಸಬೇಕಾಗಿ ಬಂದಿದೆ. ಕೆಲವು ರಾಜ್ಯಗಳಲ್ಲಿ, ಕೆಲವು ಪ್ರದೇಶಗಳಲ್ಲಿ ಮಳೆಯಾಗಿದೆ. ಆದರೆ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಆಗಸ್ಟ್‌ನಲ್ಲಿ ಕೂಡಾ ವಾಡಿಕೆಗಿಂತ ಕಡಿಮೆ ಮಳೆಯಾಗುವ ನಿರೀಕ್ಷೆಯಿದೆ. ದೇಶದ ಕೆಲವು ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾದರೂ ಕನಿಷ್ಠ 25.1 ಶೇ ಪ್ರದೇಶವು ಬರಗಾಲದಂತಹ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಮುಂಬರುವ ವಾರಗಳಲ್ಲಿ ಮತ್ತೆ ದುರ್ಬಲ ಮುಂಗಾರು ಮುಂದುವರಿಯಲಿದ್ದು, ದೇಶದ ಕೃಷಿ ಪರಿಸ್ಥಿತಿ ಸಂಕಷ್ಟಕ್ಕೆ ಬರಲಿದೆ.

Advertisement

ಜಾರ್ಖಂಡ್, ಬಿಹಾರ, ಪಶ್ಚಿಮ ಬಂಗಾಳದ ಪೂರ್ವ ರಾಜ್ಯಗಳು, ಪೂರ್ವ ಉತ್ತರ ಪ್ರದೇಶ, ಈಶಾನ್ಯ ರಾಜ್ಯಗಳಾದ ಮಣಿಪುರ, ಅರುಣಾಚಲ ಪ್ರದೇಶ ಮತ್ತು ಅಸ್ಸಾಂ, ಲಡಾಖ್ ಮತ್ತು ಹಿಮಾಚಲ ಪ್ರದೇಶದ ಮರುಭೂಮಿ ಪ್ರದೇಶಗಳ ಕೆಲವು  ಭಾಗಗಳಲ್ಲಿ ಬರಗಾಲವು ಹೆಚ್ಚಾಗಿ ಆವರಿಸಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕದ ಹಲವು ಕಡೆ ಮಳೆಯಾಗಿದೆ. ಆದರೆ ನಿರೀಕ್ಷೆಯಷ್ಟು ಮಳೆಯಾಗಿಲ್ಲ.

ಭಾರತದ ಹವಾಮಾನ ಇಲಾಖೆಯ ಅಂಕಿಅಂಶಗಳ ಪ್ರಕಾರ,  ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿ ಜುಲೈ 31 ರವರೆಗೆ ಶೇ 22 ರಷ್ಟು ಮಳೆ ಕೊರತೆಯಿದೆ.

Advertisement

ಜುಲೈ 31 ರಂದು, ಹವಾಮಾನ ಇಲಾಖೆಯು ತನ್ನ ಅಧಿಕೃತ ಹೇಳಿಕೆಯಲ್ಲಿ, 2023 ರ ನೈಋತ್ಯ ಮಾನ್ಸೂನ್ ಋತುವಿನ ಆಗಸ್ಟ್‌ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಒಟ್ಟಾರೆಯಾಗಿ ದೇಶದಾದ್ಯಂತ ಮಳೆಯು ಸಾಮಾನ್ಯವಾಗಿರುವ ಸಾಧ್ಯತೆಯಿದೆ ಎಂದು ಹೇಳಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ಹಳದಿ ಎಲೆರೋಗ ವಿಸ್ತರಣೆಯಾಗುತ್ತಿದೆ…| ಸುಳ್ಯದ ಕೊಡಿಯಾಲ ಗ್ರಾಮದಲ್ಲೂ ಹಬ್ಬಿದೆ ಹಳದಿ ಎಲೆರೋಗ |
September 11, 2024
8:28 PM
by: ಮಹೇಶ್ ಪುಚ್ಚಪ್ಪಾಡಿ
ಹವಾಮಾನ ವರದಿ | 11-09-2024 | ಎಲ್ಲೆಡೆ ಸಾಮಾನ್ಯ ಮಳೆ | ಸೆ.13 ರಿಂದ ಮಳೆಯ ಪ್ರಮಾಣ ತೀರಾ ಕಡಿಮೆ |
September 11, 2024
1:51 PM
by: ಸಾಯಿಶೇಖರ್ ಕರಿಕಳ
ಇವರ ಕೃಷಿ ಯಶಸ್ಸಿನ ಮೂಲ ನೀರು | 40 ಡಿಗ್ರಿ ತಾಪಮಾನದಲ್ಲೂ ಕಾಳುಮೆಣಸು ಯಶಸ್ವಿ | ಬರಡಾಗುತ್ತಿದ್ದ ಭೂಮಿಯನ್ನು ಸಮೃದ್ಧಗೊಳಿಸಿದ ಕೃಷಿಕ ಸುರೇಶ್‌ ಬಲ್ನಾಡು |
September 11, 2024
6:51 AM
by: ಮಹೇಶ್ ಪುಚ್ಚಪ್ಪಾಡಿ
ರೈತರ ಬೇಡಿಕೆಗೆ ಸಕಾರಾತ್ಮಕ ಸ್ಪಂದಿಸುವ ಭರವಸೆ ನೀಡಿದ ಸರ್ಕಾರ
September 10, 2024
8:41 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror