Advertisement
ಸುದ್ದಿಗಳು

ಕೃಷಿ ಯಂತ್ರಮೇಳದಲ್ಲಿ ಕೃಷಿ ರಸಪ್ರಶ್ನೆ | ರೇಡಿಯೋ ಪಾಂಚಜನ್ಯ ವತಿಯಿಂದ ರಸಪ್ರಶ್ನೆ ಕಾರ್ಯಕ್ರಮ |

Share

 ಪುತ್ತೂರಿನ ಏಕೈಕ ಸಮುದಾಯ ಬಾನುಲಿ ಕೇಂದ್ರ, ವಿವೇಕಾನಂದ ವಿದ್ಯಾವರ್ಧಕ ಸಂಘ ಪ್ರವರ್ತಿತ ರೇಡಿಯೋ ಪಾಂಚಜನ್ಯ 90.8 ಎಫ್.ಎಂ. ವತಿಯಿಂದ 5ನೇ  ಕೃಷಿಯಂತ್ರ ಮೇಳ ಮತ್ತು ಕನಸಿನ ಮನೆ ಸಂದರ್ಭ ಆಯೋಜಿಸಿದ್ದ ಕೃಷಿ ರಸಪ್ರಶ್ನೆ ಮಕ್ಕಳಲ್ಲಿ ಕೃಷಿಯ ಬಗ್ಗೆ ಆಸಕ್ತಿ ಮೂಡಲು ಕಾರಣವಾಯಿತು.

Advertisement
Advertisement
Advertisement
ಕೃಷಿ ಯಂತ್ರ ಮೇಳ 2023 ಮತ್ತು ಕನಸಿನ ಮನೆ ಕೃಷಿ ಯಂತ್ರಮೇಳದಲ್ಲಿ ರೇಡಿಯೋ ಪಾಂಚಜನ್ಯದ ವತಿಯಿಂದ ಕೃಷಿ ರಸಪ್ರಶ್ನೆ ಸ್ಪರ್ಧೆ ಪಿಯುಸಿ, ಪದವಿ, ಸ್ನಾತಕೋತ್ತರ, ವೃತ್ತಿಪರ ಮತ್ತು ಸಾರ್ವಜನಿಕ ವಿಭಾಗಕ್ಕೆ ನಡೆಸಲಾಯಿತು.
ಕೃಷಿಯ ಬಗ್ಗೆ, ಸಾವಯವ ಕೃಷಿಯ ಬಗ್ಗೆ ಒಲವು ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಂಡ ರಸಪ್ರಶ್ನೆಗೆ 15 ರಿಂದ 20 ಮಂದಿ ಪ್ರಸಿದ್ಧ ಕೃಷಿಕರು, ವೈದ್ಯರು, ಉಪನ್ಯಾಸಕರು ಪ್ರಶ್ನಾವಳಿ- ಉತ್ತರಗಳನ್ನು ತಯಾರು ಮಾಡಿಕೊಟ್ಟಿದ್ದರು.
Advertisement
ಸಾವಯವ  ಕೃಷಿಕರಾದ ಮರಿಕೆ ಸದಾಶಿವ ಭಟ್ ಅವರ ಮಾರ್ಗದರ್ಶನದಲ್ಲಿ ರೇಡಿಯೋ ಪಾಂಚಜನ್ಯದ ಅಧ್ಯಕ್ಷೆ ಕೃಷ್ಣವೇಣಿ ಪ್ರಸಾದ್ ಮುಳಿಯ ಅವರ ನಿರ್ದೇಶನದಲ್ಲಿ ಕಾರ್ಯಕ್ರಮ ಕಾರ್ಯನಿರ್ವಾಹಕಿಯಾದ ತೇಜಸ್ವಿ ರಾಜೇಶ್ ಅವರ ಸಹಕಾರದೊಂದಿಗೆ ಪ್ರಶ್ನಾವಳಿ 50 ಸುತ್ತುಗಳ 300 ಪ್ರಶ್ನೆಗಳನ್ನು ಸಿದ್ಧಪಡಿಸಲಾಗಿತ್ತು.
ಕೃಷಿ ಯಂತ್ರಗಳ ಚಿತ್ರಗಳನ್ನು ಗುರುತಿಸುವ ಸುತ್ತು: ಸೇಡಿಯಾಪು ವಿಶ್ವಪ್ರಸಾದ್ ಅವರು ನೀಡಿದ ಕೃಷಿ ಪರಿಕರಗಳನ್ನು ಗುರುತಿಸುವ ಸುತ್ತುಗಳು, ಕೃಷಿಕರಾದ ಶಿವಸುಬ್ರಹ್ಮಣ್ಯ ಹಾಗೂ ಜೇಸಿ ರಾಷ್ಟ್ರೀಯ ತರಬೇತುದಾರರಾದ ಕೃಷ್ಣಮೋಹನ್ ಅವರ ರಸಪ್ರಶ್ನೆಯ ನಿರ್ವಹಣೆ ಉತ್ತಮವಾಗಿತ್ತು. ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಪರ್ಧಾಳುಗಳಿಗೇ ಸ್ಪರ್ಧೆ ಮಾತ್ರವಲ್ಲದೆ ಸಭಿಕರಾಗಿ ಉಪಸ್ಥಿತರಿದ್ದವರೆಲ್ಲರಿಗೂ ಪ್ರಶ್ನೆಗಳನ್ನು ಕೇಳಿ ವಾಟ್ಸಪ್ನಲ್ಲಿ ಉತ್ತರ ಯಾರು ವೇಗವಾಗಿ ನೀಡುತ್ತಾರೋ ಅವರಿಗೂ ಬಹುಮಾನಗಳನ್ನು ನಡೆಸಲಾಗುತ್ತಿತ್ತು. ಭಾಗವಹಿಸಿದ ಹಾಗೇ ಉಪಸ್ಥಿತರಿದ್ದವರೆಲ್ಲರಿಗೂ ರಸಪ್ರಶ್ನೆ ಸ್ಪರ್ಧೆ ಕೃಷಿಯ ಕುರಿತ ಉತ್ಸಾಹ ಹೊಸ ನಾಂದಿಯಾಗಿ ಮೂಡಿಬರುತ್ತಿತ್ತು.
Advertisement
ರಸಪ್ರಶ್ನೆ ಸ್ಪರ್ಧೆಯನ್ನು ಎ.ಪಿ. ಸದಾಶಿವ ಅವರು ಉದ್ಘಾಟಿಸಿದರು. ವೇದಿಕೆಯಲ್ಲಿ ಕ್ಯಾಂಪ್ಕೋ ನಿರ್ದೇಶಕರಾದ ರಾಘವೇಂದ್ರ ಭಟ್ ಕೆದಿಲ, ವಿವೇಕಾನಂದ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಕಾಲೇಜು ಪ್ರಾಂಶುಪಾಲರಾದ ಡಾ. ಮಹೇಶ್ ಪ್ರಸನ್ನ ಮತ್ತು ರೇಡಿಯೋ ಪಾಂಚಜನ್ಯದ ಕೋಶಾಧಿಕಾರಿ ಗೌರಿ ಬನ್ನೂರು ಉಪಸ್ಥಿತರಿದ್ದರು.
ಕೃಷ್ಣವೇಣಿ ಪ್ರಸಾದ್ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಪದ್ಮಾ ಕೆ.ಆರ್. ಆಚಾರ್ಯ ಅವರು ಅತಿಥಿಗಳನ್ನು ಪರಿಚಯಿಸುವುದರೊಂದಿಗೆ ಇನ್ನರ್ವೀಲ್ ಸದಸ್ಯೆ ಆಶಾ ನಾಯಕ್ ಅಂಕ ನಮೂದಿಸುವುದರಲ್ಲಿ ಸಹಕರಿಸಿದರು.ರೇಡಿಯೋ ಪಾಂಚಜನ್ಯದ ಕಾರ್ಯಕ್ರಮ ಸಂಯೋಜಕಿ ತೇಜಸ್ವಿ ರಾಜೇಶ್ ನಿರೂಪಿಸಿದರು.
Advertisement

ಬಹುಮಾನ ವಿಜೇತರು : ಪದವಿ ಪೂರ್ವ ವಿಭಾಗದಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಾದ ನಿರ್ಮಿತ್ ಮತ್ತು ಯೋಗವರ್ಧನ್ (ಪ್ರಥಮ ಚಿನ್ನದ ನಾಣ್ಯ), ಕಿರಣ್ರಾಜ್ ಮತ್ತು ಶರತ್ ಕುಮಾರ್ (ದ್ವಿತೀಯ ಬೆಳ್ಳಿ ನಾಣ್ಯ), ಸಚಿನ್ ಮತ್ತು ಹಿತೇಶ್ (ತೃತೀಯಸ್ಥಾನವಾಗಿ ದೀಪ) ಬಹುಮಾನವನ್ನು ಪಡೆದುಕೊಂಡಿರುತ್ತಾರೆ.

ಪದವಿ, ಸ್ನಾತಕೋತ್ತರ, ವೃತ್ತಿಪರ ವಿಭಾಗದಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಮನ್ವಿತ್ ಮತ್ತು ಪ್ರಜ್ವಲ್ಕೃಷ್ಣ (ಪ್ರಥಮ), ವಿವೇಕಾನಂದ ಸ್ನಾತಕೋತ್ತರ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಶರಣ್ಯ ಎನ್. ಮತ್ತು ಸುಶ್ಮಿತಾ ಎಂ. (ದ್ವಿತೀಯ), ಶಿವಮೊಗ್ಗ ಎಗ್ರಿಕಲ್ಚರ್ ಕಾಲೇಜು ಇಲ್ಲಿನ ವಿದ್ಯಾರ್ಥಿಗಳಾದ ಗೌತಮಿ ಮತ್ತು ಜಸ್ಮಿತಾ (ತೃತೀಯ) ಬಹುಮಾನವನ್ನು ಪಡೆದುಕೊಂಡಿದ್ದಾರೆ.
Advertisement
ಸಾರ್ವಜನಿಕ ವಿಭಾಗದಲ್ಲಿ ಸಂತೋಷ್ ಕುಮಾರ್ ಕೆ. (ಪ್ರಥಮ), ಸತ್ಯಶಂಕರ್ ಚೂಂತಾರ್(ದ್ವಿತೀಯ) ಮತ್ತು ವಸಂತ ಎನ್. (ತೃತೀಯ)ಬಹುಮಾನವನ್ನು ಪಡೆದುಕೊಂಡಿರುತ್ತಾರೆ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ

ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…

18 hours ago

ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮನವಿ

ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…

18 hours ago

ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ದೆಹಲಿಯಲ್ಲಿ ಲಭ್ಯ | 2.5 ಲಕ್ಷ ಲೀಟರ್ ಹಾಲು ದೆಹಲಿಗೆ ಪೂರೈಸಲು ತೀರ್ಮಾನ |

ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…

18 hours ago

ಹುಣಸೆ ಹಣ್ಣು ಸಂರಕ್ಷಣೆ, ಮಾರಾಟದ ತರಬೇತಿ ಕಾರ್ಯಾಗಾರ

ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…

19 hours ago

ಧರ್ಮಸ್ಥಳ ಯಕ್ಷಗಾನ ಮೇಳ |  ಸೇವೆ ಬಯಲಾಟ ಪ್ರದರ್ಶನ

ನಾಡಿನ ಪವಿತ್ರ ಕ್ಷೇತ್ರ  ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…

19 hours ago

ಜೇನು ತುಪ್ಪ ಮಾರಾಟ | ಅರ್ಜಿ ಆಹ್ವಾನ

ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…

19 hours ago