ಪುತ್ತೂರಿನ ಏಕೈಕ ಸಮುದಾಯ ಬಾನುಲಿ ಕೇಂದ್ರ, ವಿವೇಕಾನಂದ ವಿದ್ಯಾವರ್ಧಕ ಸಂಘ ಪ್ರವರ್ತಿತ ರೇಡಿಯೋ ಪಾಂಚಜನ್ಯ 90.8 ಎಫ್.ಎಂ. ವತಿಯಿಂದ 5ನೇ ಕೃಷಿಯಂತ್ರ ಮೇಳ ಮತ್ತು ಕನಸಿನ ಮನೆ ಸಂದರ್ಭ ಆಯೋಜಿಸಿದ್ದ ಕೃಷಿ ರಸಪ್ರಶ್ನೆ ಮಕ್ಕಳಲ್ಲಿ ಕೃಷಿಯ ಬಗ್ಗೆ ಆಸಕ್ತಿ ಮೂಡಲು ಕಾರಣವಾಯಿತು.
ಕೃಷಿ ಯಂತ್ರ ಮೇಳ 2023 ಮತ್ತು ಕನಸಿನ ಮನೆ ಕೃಷಿ ಯಂತ್ರಮೇಳದಲ್ಲಿ ರೇಡಿಯೋ ಪಾಂಚಜನ್ಯದ ವತಿಯಿಂದ ಕೃಷಿ ರಸಪ್ರಶ್ನೆ ಸ್ಪರ್ಧೆ ಪಿಯುಸಿ, ಪದವಿ, ಸ್ನಾತಕೋತ್ತರ, ವೃತ್ತಿಪರ ಮತ್ತು ಸಾರ್ವಜನಿಕ ವಿಭಾಗಕ್ಕೆ ನಡೆಸಲಾಯಿತು.ಬಹುಮಾನ ವಿಜೇತರು : ಪದವಿ ಪೂರ್ವ ವಿಭಾಗದಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಾದ ನಿರ್ಮಿತ್ ಮತ್ತು ಯೋಗವರ್ಧನ್ (ಪ್ರಥಮ ಚಿನ್ನದ ನಾಣ್ಯ), ಕಿರಣ್ರಾಜ್ ಮತ್ತು ಶರತ್ ಕುಮಾರ್ (ದ್ವಿತೀಯ ಬೆಳ್ಳಿ ನಾಣ್ಯ), ಸಚಿನ್ ಮತ್ತು ಹಿತೇಶ್ (ತೃತೀಯಸ್ಥಾನವಾಗಿ ದೀಪ) ಬಹುಮಾನವನ್ನು ಪಡೆದುಕೊಂಡಿರುತ್ತಾರೆ.
ಪದವಿ, ಸ್ನಾತಕೋತ್ತರ, ವೃತ್ತಿಪರ ವಿಭಾಗದಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಮನ್ವಿತ್ ಮತ್ತು ಪ್ರಜ್ವಲ್ಕೃಷ್ಣ (ಪ್ರಥಮ), ವಿವೇಕಾನಂದ ಸ್ನಾತಕೋತ್ತರ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಶರಣ್ಯ ಎನ್. ಮತ್ತು ಸುಶ್ಮಿತಾ ಎಂ. (ದ್ವಿತೀಯ), ಶಿವಮೊಗ್ಗ ಎಗ್ರಿಕಲ್ಚರ್ ಕಾಲೇಜು ಇಲ್ಲಿನ ವಿದ್ಯಾರ್ಥಿಗಳಾದ ಗೌತಮಿ ಮತ್ತು ಜಸ್ಮಿತಾ (ತೃತೀಯ) ಬಹುಮಾನವನ್ನು ಪಡೆದುಕೊಂಡಿದ್ದಾರೆ. ಸಾರ್ವಜನಿಕ ವಿಭಾಗದಲ್ಲಿ ಸಂತೋಷ್ ಕುಮಾರ್ ಕೆ. (ಪ್ರಥಮ), ಸತ್ಯಶಂಕರ್ ಚೂಂತಾರ್(ದ್ವಿತೀಯ) ಮತ್ತು ವಸಂತ ಎನ್. (ತೃತೀಯ)ಬಹುಮಾನವನ್ನು ಪಡೆದುಕೊಂಡಿರುತ್ತಾರೆ.ಗದಗ ಜಿಲ್ಲೆಯಲ್ಲಿ ಎಫ್‌ಎಕ್ಯೂ ಗುಣಮಟ್ಟದ ಸೂರ್ಯಕಾಂತಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಜಿಲ್ಲಾಡಳಿತ ನಿರ್ಧರಿಸಿದೆ.…
ಯಾದಗಿರಿ ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಹೆಸರುಕಾಳು, ಸೋಯಾಬೀನ್ ಹಾಗೂ ಸೂರ್ಯಕಾಂತಿ ಖರೀದಿಗೆ…
ಕರಾವಳಿ ಮತ್ತು ಮಲೆನಾಡು ಭಾಗದ ಜನರು ಉದ್ಯೋಗಕ್ಕಾಗಿ ವಲಸೆ ಹೋಗುವುದನ್ನು ತಪ್ಪಿಸುವ ಉದ್ದೇಶದಿಂದ…
ಹಾಲಿನ ದರ ಹೆಚ್ಚಳ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ನಿರ್ಧಾರ…
ಕರಾವಳಿ ಹಾಗೂ ಮಲೆನಾಡಿನ ಕೆಲವೆಡೆ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆಯಿದ್ದು, ಅ.9…
ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಸಕ್ರಿಯವಾಗಿದ್ದು, ಕರಾವಳಿ ಮತ್ತು ಮಲೆನಾಡು ಸೇರಿದಂತೆ ಹಲವೆಡೆ ಉತ್ತಮ…