ಮನೆಮನೆಗೆ ರಾಘವ ರಾಮಾಯಣ | ಧರ್ಮಭಾರತಿ ವಿಶೇಷ ಅಭಿಯಾನ |

Advertisement
Advertisement

ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರು ಕನ್ನಡದಲ್ಲೇ ಬರೆಯುವ ರಾಮಾಯಣವನ್ನು ರಾಜ್ಯದ ಮನೆ ಮನೆಗೆ ಪುಸ್ತಕ ರೂಪದಲ್ಲಿ ತಲುಪಿಸುವ ವಿಶೇಷ ಅಭಿಯಾನವನ್ನು ಶ್ರೀ ರಾಮಚಂದ್ರಾಪುರ ಮಠದ ‘ಧರ್ಮಭಾರತಿ’ ಹಮ್ಮಿಕೊಂಡಿದೆ.

Advertisement
ಶ್ರೀಗಳ 30ನೇ ಚಾತುರ್ಮಾಸ್ಯದ ಅಂಗವಾಗಿ, ಮಹರ್ಷಿ ವಾಲ್ಮೀಕಿ ಬರೆದ ಮೂಲ ರಾಮಾಯಣದ ಪುನರವತರಣ ಇದಾಗಿರುತ್ತದೆ. ಮೊದಲಿಗೆ ಕನ್ನಡದಲ್ಲಿ ಹಾಗೂ ನಂತರ ವಿವಿಧ ಭಾಷೆಗಳಲ್ಲಿ ಇದನ್ನು ಪ್ರಕಟಿಸಲಾಗುವುದು ಎಂದು ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ ಪ್ರಕಟಣೆಯಲ್ಲಿ ಹೇಳಿದ್ದಾರೆ.

Advertisement
Advertisement
ಸಮಗ್ರ ರಾಮಾಯಣ ಮುಗಿಯುವವವರೆಗೆ ಧರ್ಮಭಾರತಿ ಮಾಸಿಕದ ಪ್ರತಿ ಸಂಚಿಕೆಯ ಪ್ರತಿ ಪುಟವೂ ರಾಮಾಯಣ ಮಯವಾಗಿರುತ್ತದೆ. ವಿಶೇಷವೆಂದರೆ ಧರ್ಮಭಾರತೀ ಇದನ್ನು ಉಚಿತವಾಗಿ ವಿತರಿಸುತ್ತದೆ. ಮೊದಲ ಹಂತದಲ್ಲಿ ಮೂವತ್ತು ಸಾವಿರಕ್ಕೂ ಹೆಚ್ಚು ಮನೆಗಳಿಗೆ ತಲುಪಲಿದೆ ಎಂದು ವಿವರಿಸಿದ್ದಾರೆ.

ಹತ್ತಾರು ಲಕ್ಷ ಜನರು ಮೂಲ ರಾಮಾಯಣವನ್ನು ಓದುವಂತೆ ಮಾಡುವ ಪ್ರಯತ್ನ ಇದಾಗಿದ್ದು, ಲಕ್ಷ ಲಕ್ಷ ಮನೆಗಳಲ್ಲಿ ನೂರಾರು ವರ್ಷ ರಾಮಾಯಣ ಪುಸ್ತಕ ಇರುವಂತೆ ಮಾಡುವ ಮಹದುದ್ದೇಶದ ಯೋಜನೆ ಇದಾಗಿದೆ. ಹಲವು ತಲೆಮಾರುಗಳಿಗೆ ಇದರ ಪ್ರಯೋಜನ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ.

Advertisement
Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಮನೆಮನೆಗೆ ರಾಘವ ರಾಮಾಯಣ | ಧರ್ಮಭಾರತಿ ವಿಶೇಷ ಅಭಿಯಾನ |"

Leave a comment

Your email address will not be published.


*