ಪ್ರೇಮ ಇದ್ದಲ್ಲಿ ಕರುಣೆ ಇರುತ್ತದೆ. ನಮ್ಮ ಹಿತವನ್ನು ತ್ಯಾಗ ಮಾಡಿಯಾದರೂ, ಪರರ ಕಷ್ಟಕ್ಕೆ ಸ್ಪಂದಿಸಬೇಕು. ಇಂಥ ಗುಣಗಳನ್ನು ಪ್ರಾಣಿ, ಪಕ್ಷಿಗಳಿಂದ, ಲೋಕನಾಯಕ ಶಿವನಿಂದ ಪಡೆಯೋಣ ಎಂದು ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಹೇಳಿದರು.
Advertisement
Advertisement
ಉತ್ತಮ ರಾಜ ಕೂಡಾ ತನ್ನ ಸುಖವನ್ನು ಪ್ರಜೆಗಳ ಜತೆ ಹಂಚಿಕೊಳ್ಳಬೇಕು. ಪ್ರಜೆಗಳ ಕಷ್ಟಗಳಿಗೆ ಸ್ಪಂದಿಸಬೇಕು. ಬದಲಾಗಿ ಜನರ ಸುಖದಲ್ಲಿ ಪಾಲು ಪಡೆಯುವಂತಿರಬಾರದು ಎನ್ನುವುದು ಭಾರತದ ಚಕ್ರವರ್ತಿಗಳ ಪರಿಕಲ್ಪನೆ ಎಂದು ಉದಾಹರಣೆ ಸಹಿತ ವಿವರಿಸಿದರು. ಅಮೆರಿಕದ ಯೆಲ್ಲೋಸ್ಟೋನ್ ನ್ಯಾಷನಲ್ ಫಾರೆಸ್ಟ್‍ನಲ್ಲಿ ಕಾಳ್ಗಿಚ್ಚು ಹರಡಿದ ವೇಳೆ ಮರಗಿಡಗಳು, ಬಳ್ಳಿ, ಪ್ರಾಣಿ ಪಕ್ಷಿಗಳು ಸೇರಿದಂತೆ ಕ್ರಿಮಿಕೀಟಗಳು ಜೀವಂತ ಸಮಾಧಿಯಾದವು. ಅದರ ನಷ್ಟ ಅಂದಾಜಿಸಲು ಅಧಿಕಾರಿಗಳು ಘಟನಾ ಸ್ಥಳಕ್ಕೆ ತೆರಳುತ್ತಿರುವಾಗ ಸುಟ್ಟು ಕರಕಲಾದ ಪಕ್ಷಿಯ ಬೂದಿ ಅವರಿಗೆ ಪಕ್ಷಿಯ ಆಕೃತಿಯಲ್ಲೇ ಕಾಣುತ್ತದೆ. ಆ ಪಕ್ಷಿಯನ್ನು ನೋಡಿದಾಗ ತನ್ನ ರೆಕ್ಕೆ ಬಿಚ್ಚಿಟ್ಟುಕೊಂಡ ಭಂಗಿಯಲ್ಲೇ ಅದು ಭಸ್ಮವಾಗಿದ್ದವು. ಅದನ್ನು ಪರಾಂಬರಿಸಿ ನೋಡಿದಾಗ ಮೂರು ಪುಟ್ಟ ಮರಿಗಳು ಹೊರಗೆ ಬಂದವು. ಪರಿಸ್ಥಿತಿ ವೀಕ್ಷಿಸಿದಾಗ ಅಧಿಕಾರಿಗಳು ಧಾರಾಕಾರವಾಗಿ ಕಣ್ಣೀರು ಸುರಿಸಿದರು. ಕಾಳ್ಗಿಚ್ಚಿನ ಬೆಂಕಿ ಮತ್ತು ಹೊಗೆಯಿಂದ ತನ್ನ ಪುಟ್ಟ ಮರಿಗಳನ್ನು ರಕ್ಷಿಸುವ ಸಲುವಾಗಿ ಮರಿಗಳನ್ನು ಗುಂಪು ಸೇರಿಸಿ, ತನ್ನ ರೆಕ್ಕೆ ಹರಡಿ ಅದರ ಅಡಿಯಲ್ಲಿ ಮರಿಗಳನ್ನು ರಕ್ಷಿಸಿತ್ತು. ಬೆಂಕಿ ಬೆಂಕಿಯ ಝಳಕ್ಕೆ ಸುಟ್ಟು ಕರಕಲಾದಾಗಲೂ ತಾನು ಸ್ವಲ್ಪವೂ ಸರಿಯದೇ ಮರಿಗಳನ್ನು ಸುರಕ್ಷಿತವಾಗಿ ಕಾಪಾಡಿತ್ತು. ಮರಿಗಳ ಬಗೆಗಿನ ತಾಯಿಪಕ್ಷಿಯ ಕರುಣೆಯ ಪರಿ ಅಂಥದ್ದು ಎಂದು ಬಣ್ಣಿಸಿದರು.
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement