Advertisement
ಸುದ್ದಿಗಳು

ಸಮಯ, ಸಂದರ್ಭ ಅರಿತು ಕರುಣೆಯೆಂಬ ದಿವ್ಯೌಷಧ ಬಳಸಿ : ರಾಘವೇಶ್ವರ ಶ್ರೀ ಕರೆ

Share

ಕಾರುಣ್ಯ ಗುಣವಷ್ಟೇ ಅಲ್ಲ; ದೋಷವೂ ಹೌದು. ಕರುಣೆಯೆಂಬ ದಿವ್ಯ ಔಷಧವನ್ನು ಸಮಯ, ಸಂದರ್ಭ ಅರಿತು ಬಳಸಬೇಕು ಎಂದು ಎಂದು ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಹೇಳಿದರು.

Advertisement
Advertisement
Advertisement
ಗೋಕರ್ಣದ ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಶುಕ್ರವಾರ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ಕಾಲ ದೇಶಕ್ಕೆ ಅನುಗುಣವಾಗಿ ಯಾವ ಗುಣಗಳನ್ನೂ ವಿವೇಚನೆಯಿಂದ ಬಳಸಬೇಕು. ಉದಾಹರಣೆಗೆ ಹಾಲು ಒಳ್ಳೆಯ ಪದಾರ್ಥವಾದರೂ ಜ್ವರ ಬಂದವನಿಗೆ ಹಾಲು ಕುಡಿಸುವಂತಿಲ್ಲ. ಹೀಗೆಯೇ ಕಾರುಣ್ಯದಂಥ ಸದ್ಗುಣ ಕೂಡಾ ಅಸ್ಥಾನದ ಸಂದರ್ಭದಲ್ಲಿ ಒಳ್ಳೆಯ ಗುಣವಲ್ಲ ಎಂದು ವಿಶ್ಲೇಷಿಸಿದರು.
Advertisement
ಭಗವಂತನಿಗೆ ಸರ್ವತ್ರ ಜೀವಗಳ ಮೇಲೆ ಕಾರುಣ್ಯ ಇದೆ. ಆದರೆ ಭಗವಂತ ಅವತಾರ ಎತ್ತಿ ಬಂದಾಗ ದುಷ್ಟರನ್ನು ಸಂಹಾರ ಮಾಡುತ್ತಾನೆ. ಅದು ಕೂಡಾ ಒಂದು ವಿಧದಲ್ಲಿ ಕಾರುಣ್ಯವೇ. ದುಷ್ಟರ ನಿಗ್ರಹದ ಮೂಲಕ ಪಾಪಕ್ಕೆ ಅಂತ್ಯ ಕಾಣಿಸುವ ಕಾರುಣ್ಯ ಅದು. ಶಸ್ತ್ರಚಿಕಿತ್ಸೆ ಮೂಲಕ ಕ್ಯಾನ್ಸರ್ ಗಡ್ಡೆಯನ್ನು ತೆಗೆಯುವಂತೆ ದುಷ್ಟರನ್ನು ನಿಗ್ರಹಿಸುತ್ತಾನೆ. ಇದು ಕೂಡಾ ಕರುಣೆಯ ರೂಪವೇ ಎಂದರು.ದೇವರನ್ನು ಕರುಣಾ ಸಾಗರ, ಗುರುವನ್ನು ಕೃಪಾಮಯಿ ಎಂದು ಕರೆದಿದ್ದಾರೆ. ನಿಷ್ಕರುಣೆ ಎಂದಾಗ ರಾಕ್ಷಸರ ನೆನಪಾಗುತ್ತದೆ. ಪುರಾಣದಲ್ಲಿ ಸ್ಥಾನ ಕಾರುಣ್ಯ, ಅಸ್ಥಾನ ಕಾರುಣ್ಯ ಎಂಬ ಉಲ್ಲೇಖಗಳಿವೆ. ಅಸ್ಥಾನ ಕಾರುಣ್ಯ ಎಂದರೆ ಸಮರ್ಪಕವಲ್ಲದ ಕರುಣೆ. ಒಳ್ಳೆಯದು ಅಥವಾ ಒಳಿತು ಎನ್ನುವುದು ಎಲ್ಲೆಡೆ ಒಂದೇ ಆಗಿರಬೇಕಿಲ್ಲ. ಸಂದರ್ಭ, ಕಾಲಕ್ಕೆ ಅನುಸಾರವಾಗಿ ಗುಣವೂ ದೋಷವಾಗಬಹುದು ಎಂದು ವಿಶ್ಲೇಷಿಸಿದರು.
ಮಹಾಭಾರತ ಯುದ್ಧಘೋಷದ ಸಂದರ್ಭದಲ್ಲಿ ಶಸ್ತ್ರಪ್ರಹಾರ ಇನ್ನೇನು ಆರಂಭವಾಗಬೇಕು ಎನ್ನುವಾಗ ಅರ್ಜುನ, ಕೃಷ್ಣನಿಗೆ ರಥವನ್ನು ನಿಲ್ಲಿಸಲು ಹೇಳುತ್ತಾನೆ. ಆ ಸಂದರ್ಭ ಅಸ್ಥಾನ ಕಾರುಣ್ಯದ ಉತ್ತಮ ನಿದರ್ಶನ. ಅರ್ಜುನ ಶತ್ರುಸೇನೆಯಲ್ಲಿ ತಂದೆ ಸ್ಥಾನದಲ್ಲಿರುವವರು, ಅಜ್ಜನ ಸ್ಥಾನದಲ್ಲಿರುವವರು, ಆಚಾರ್ಯರು, ಮಾವಂದಿರು, ಸಹೋದರರು, ಮಕ್ಕಳು, ಮೊಮ್ಮಕ್ಕಳು, ಹೆಣ್ಣುಕೊಟ್ಟ ಮಾವ, ಸ್ನೇಹಿತರು ಎಲ್ಲರೂ ಎರಡೂ ಉಭಯ ಸೈನ್ಯದಲ್ಲಿದ್ದರು. ಇದನ್ನು ನೋಡಿದಾಗ ಅರ್ಜುನನಿಗೆ ಅತೀವ ಕರುಣೆ ಉಂಟಾಗಿ ಯುದ್ಧ ಮಾಡುವುದಿಲ್ಲ ಎಂದು ಕೈಚೆಲ್ಲಿ ನಿಲ್ಲುತ್ತಾನೆ. ಇಂಥ ಕಾರುಣ್ಯ ಸರಿಯಲ್ಲ ಎಂಬ ಉಲ್ಲೇಖ ಮಹಾಭಾರತದಲ್ಲಿದೆ ಎಂದರು.
Advertisement
ಅರ್ಜುನನ ಅಸ್ಥಾನ ಕಾರುಣ್ಯ, ಅಸ್ಥಾನ ಧರ್ಮ, ಅಸ್ಥಾನ ಅಧರ್ಮ, ಅಸ್ಥಾನ ಸ್ನೇಹ, ಅಸ್ಥಾನ ಧರ್ಮಬುದ್ಧಿ, ಅಸ್ಥಾನ ಅಧರ್ಮಬುದ್ಧಿಯ ಕಾರಣದಿಂದ ಅದನ್ನು ಸರಿಪಡಿಸಲು ಶ್ರೀಕೃಷ್ಣ ಭಗವದ್ಗೀತೆಯ ಉಪದೇಶ ಮಾಡಬೇಕಾಯಿತು. ಇದು ಗೀತಾಶಾಸ್ತ್ರದ ಉದಯಕ್ಕೆ ಕಾರಣ ಎಂದು ವಿವರಿಸಿದರು.
ಕ್ರಿಯಾಶೀಲತೆ ಇರಬೇಕಾದಲ್ಲಿ ಜಾಡ್ಯತೆ ಇತ್ತು. ಕಾಠಿಣ್ಯ ಇರಬೇಕಾದಲ್ಲಿ ಕಾರುಣ್ಯ ಇತ್ತು. ಯುದ್ಧೋತ್ಸಾಹ ಇರಬೇಕಾದಲ್ಲಿ ನಿರಾಸೆಯಿಂದ ಅರ್ಜುನ ಕುಳಿತಿದ್ದ. ಆ ಸಂದರ್ಭದಲ್ಲಿ ಧರ್ಮಯುದ್ಧಕ್ಕಾಗಿ ಸಜ್ಜಾಗುವಂತೆ ಕೃಷ್ಣ ಬೋಧಿಸುತ್ತಾನೆ. ಅರ್ಜುನನ ಈ ಕಾರುಣ್ಯಕ್ಕೆ ನಪುಂಸಕತ್ವ ಎಂದು ಕೃಷ್ಣ ಈ ಸಂದರ್ಭದಲ್ಲಿ ಹೇಳಿದ್ದಾನೆ. ಕಾರುಣ್ಯ ಕೂಡಾ ಕೆಲವೊಮ್ಮೆ ದೌರ್ಬಲ್ಯವಾಗುತ್ತದೆ ಎನ್ನುವುದಕ್ಕೆ ಇದು ಉದಾಹರಣೆ ಎಂದರು.
Advertisement
ಧಾರ್ಮಿಕ ಕಾರ್ಯಕ್ರಮ ಅಂಗವಾಗಿ ಸಾಮವೇದ ಪಾರಾಯಣ, ರುದ್ರಹವನ, ರಾಮತಾರಕ ಹವನ, ಚಂಡೀ ಪಾರಾಯಣ, ಗಣಪತಿ ಹವನ, ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಶಿವಾನಂದ ಹೆಗಡೆ ಹಡಿನ್ಬಾಳ್ ಹಾಗೂ ಭಾಗ್ಯಲಕ್ಷ್ಮಿ ಅವರಿಂದ ಹಿಂದೂಸ್ತಾನಿ ಗಾಯನ ನಡೆಯಿತು.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ನೀರಿಗಾಗಿ ಏಕಾಂಗಿಯಾಗಿ ಸುರಂಗ ತೋಡಿದ ಕೃಷಿಕ | ಹಸಿರಾದ ಕೃಷಿ |

ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ…

3 hours ago

ಗುಬ್ಬಚ್ಚಿ ಸಂಕುಲ ರಕ್ಷಣೆಗೆ ಪ್ರಧಾನಿ ಕರೆ | ಬೇಲೂರಿನಲ್ಲಿ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆ

ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…

3 hours ago

ಮಹಿಳಾ ಉದ್ಯಮಿಗಳಿಗೆ  ಎನ್‍ಆರ್ ಎಲ್‍ಎಮ್ ಯೋಜನೆ ಸ್ಪೂರ್ತಿಯ ಸೆಲೆಯಾಗಿದೆ

ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ  ಮಹಿಳಾ ಉದ್ಯಮಿದಾರರಿಗೆ ಎನ್‍ಆರ್ ಎಲ್‍ಎಮ್ ಯೋಜನೆಯು ಸ್ಪೂರ್ತಿಯ…

3 hours ago

ಕೊಡಗು ಜಿಲ್ಲೆಯಲ್ಲಿ ಅಕ್ರಮ ಲಾಟರಿ,  ಮಟ್ಕಾಗೆ ಪೂರ್ಣ ಪ್ರಮಾಣದಲ್ಲಿ ಕಡಿವಾಣ  ಹಾಕಲು ಜಿಲ್ಲಾಡಳಿತ ಸೂಚನೆ

ಕೊಡಗು ಜಿಲ್ಲೆಯಲ್ಲಿ ಅಕ್ರಮ ಲಾಟರಿ, ಇತರೆ ರಾಜ್ಯದ ಲಾಟರಿಗಳು, ಮಟ್ಕಾಗೆ ಪೂರ್ಣ ಪ್ರಮಾಣದಲ್ಲಿ…

4 hours ago

ಹಾನಿಯಾದ ಬೆಳೆಗಳಿಗೆ ತ್ವರಿತವಾಗಿ ಪರಿಹಾರ ನೀಡಿ

ಹಾನಿಯಾದ ಮನೆ ಮತ್ತು ಬೆಳೆಗಳಿಗೆ ತ್ವರಿತವಾಗಿ ಪರಿಹಾರ ನೀಡಿ, ಯಾವುದೇ ಪ್ರಕರಣಗಳು ಬಾಕಿ…

4 hours ago

ಐದು ತಿಂಗಳಲ್ಲಿ 100 ಕೋಟಿ ಗಿಡ ನೆಡುವ ಮೂಲಕ ಅಭಿಯಾನ ಯಶಸ್ವಿ | ಪ್ರಧಾನಿ ಮೋದಿ ಶ್ಲಾಘನೆ

ಭಾರತದ ಸ್ವಚ್ಛತಾ ಅಭಿಯಾನಕ್ಕೆ ವೇಗ ದೊರೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.…

4 hours ago