ಜೀವನದಲ್ಲಿ ತಾಳ್ಮೆಯ ಪಾಠ ಕಲಿಯೋಣ | ರಾಘವೇಶ್ವರ ಶ್ರೀ

July 28, 2022
10:19 PM

ಕಾಲ ಪ್ರತೀಕ್ಷೆ ಎಲ್ಲ ಸಮಸ್ಯೆಗಳಿಗೆ ಪರಿಹಾರ; ತಾಳ್ಮೆಯ ಪಾಠವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಕಲಿಯೋಣ ಎಂದು ಹೊಸನಗರ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.

Advertisement
Advertisement
Advertisement

ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಬುಧವಾರ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, “ರಾಮ ತಾಳ್ಮೆಯ ಸಾಕಾರ ಮೂರ್ತಿ ಶ್ರೀರಾಮನಿಂದ ತಾಳ್ಮೆಯೆಂಬ ಮಹಾಗುಣವನ್ನು ಆಶೀರ್ವಾದವಾಗಿ ಪಡೆಯೋಣ. ತಾಳ್ಮೆಯ ಸಂಪತ್ತಿನಿಂದ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತವೆ. ತಾಳ್ಮೆಯೊಂದಿದ್ದರೆ ಶ್ರೇಯಸ್ಸು ನಮ್ಮನ್ನು ಅರಸಿಕೊಂಡು ಬರುತ್ತದೆ ಎನ್ನುವುದಕ್ಕೆ ಲಂಕೆಯ ಅಶೋಕಾವನದಲ್ಲಿ ಒಂದು ವರ್ಷ ರಾಮನ ಪ್ರತೀಕ್ಷೆಯಲ್ಲಿ ಕಳೆದ ಸೀತೆಯೇ ಉತ್ತಮ ಉದಾಹರಣೆ” ಎಂದು ಬಣ್ಣಿಸಿದರು.
ಹಲವಾರು ಸಮಸ್ಯೆಗಳಿಗೆ ಏನೂ ಮಾಡದಿರುವುದೇ ಪರಿಹಾರ. ಬಹಳಷ್ಟು ಸಮಸ್ಯೆಗಳನ್ನು ತಾಳ್ಮೆ ಬಗೆಹರಿಸುತ್ತದೆ ಅಥವಾ ಸಮಸ್ಯೆಗಳ ಪರಿಹಾರಕ್ಕೆ ನೆರವಾಗುತ್ತದೆ.

Advertisement
ಗುರುವಾಗಬೇಕಾದವನಿಗೆ ಮೊದಲ ಗುಣ ತಾಳ್ಮೆ; ತಾಳ್ಮೆ ಇಲ್ಲದವನು ಗುರುವಾಗಲಾರ. ಗುರುತ್ವಕ್ಕೆ ತಾಳ್ಮೆ ಅನಿವಾರ್ಯ. ಅದ್ಭುತ ವಸ್ತು ಕೈಯಲ್ಲಿದ್ದವರಿಗೆ ತಾಳ್ಮೆ, ವಿವೇಚನೆ ಅಗತ್ಯವಾಗುತ್ತದೆ. ದ್ರೋಣಾಚಾರ್ಯರು ಸ್ವಂತ ಮಗ ಅಶ್ವತ್ಥಾಮನಿಗೆ ನೀಡದ ಬ್ರಹ್ಮಶಿರೋ ಅಸ್ತ್ರವನ್ನು ಇಂದ್ರಿಯ ನಿಗ್ರಹ, ವಿವೇಚನೆ, ತಾಳ್ಮೆ ಇದ್ದ ಅರ್ಜುನನಿಗೆ ನೀಡುತ್ತಾರೆ ಎಂದು ಬಣ್ಣಿಸಿದರು.

ಚಾತುರ್ಮಾಸ್ಯ ಅಂಗವಾಗಿ ಬುಧವಾರ ರುದ್ರಹವನ, ರಾಮತಾರಕ ಹವನ, ಚಂಡಿ ಪಾರಾಯಣ, ಐಕ್ಯಮತ್ಯ ಹವನ, ಭಾಗ್ಯಸೂಕ್ತ ಹವನ ನಡೆಯಿತು. ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಪುರಸ್ಕರಿಸಲಾಯಿತು.

Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

24 ಗಂಟೆಗಳಲ್ಲಿ 80 ಭೂಕಂಪ | ಭೂಕಂಪದ ತೀವ್ರತೆಯಲ್ಲಿ ತೈವಾನ್‌ |
April 23, 2024
2:39 PM
by: ದ ರೂರಲ್ ಮಿರರ್.ಕಾಂ
ಅಡಿಕೆ ಉಪ ಉತ್ಪನ್ನಗಳ ತಯಾರಿಕೆ ಬೆಂಬಲ ಘೊಷಿಸಿದ ಅಭ್ಯರ್ಥಿ |
April 23, 2024
1:54 PM
by: ದ ರೂರಲ್ ಮಿರರ್.ಕಾಂ
ಹಿಪ್ಪಲಿ ಗಿಡಕ್ಕೆ ಕರಿಮೆಣಸು ಕಸಿ ಎಷ್ಟು ಸೂಕ್ತ..? ಲಾಭ ಏನು..? | ಇದು ಕರಿಮೆಣಸು ಬಳ್ಳಿಗೆ ಬರುವ ರೋಗ ತಡೆಗಟ್ಟುತ್ತದೆಯೇ..?
April 23, 2024
1:41 PM
by: The Rural Mirror ಸುದ್ದಿಜಾಲ
ಲೋಕಸಭೆ ಚುನಾವಣೆಗೆ ದಿನಗಣನೆ | ‘ಚುನಾವಣಾ ಪರ್ವ – ದೇಶದ ಗರ್ವ’ ಘೋಷ ವಾಕ್ಯದೊಂದಿಗೆ ಚುನಾವಣೆ | ಚುನಾವಣಾ ಆಯೋಗದಿಂದ ಭರದ ಸಿದ್ಧತೆ
April 23, 2024
1:25 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror