ವಿದ್ಯೆಗೆ ಮಾಡುವ ದಾನ ಸರ್ವಶ್ರೇಷ್ಠ : ರಾಘವೇಶ್ವರ ಶ್ರೀ

Advertisement

ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ನಮ್ಮ ರಾಷ್ಟ್ರಕ್ಕೆ ಶ್ರೇಷ್ಠ ಧರ್ಮಯೋಧರನ್ನು ಸೃಷ್ಟಿಸಿ, ಸಮರ್ಪಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದು, ಇದಕ್ಕೆ ಮಾಡುವ ದಾನ ಕೂಡಾ ನಿಜವಾದ ರಾಷ್ಟ್ರಸೇವೆ. ಅದು ಸರ್ವಶ್ರೇಷ್ಠ ಎಂದು ಎಂದು ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಹೇಳಿದರು.

Advertisement

ಅವರು ಗೋಕರ್ಣದ ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಶುಕ್ರವಾರ ನಡೆದ ಎಂಟನೇ ದಾನ- ಮಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ದಾನ ಎನ್ನುವುದು ಲಕ್ಷ್ಮಿಯ ಶ್ರೇಷ್ಠ ರೂಪ. ಸತ್ಕಾರ್ಯಗಳಿಗೆ ನೀಡುವ ದಾನ ನಮಗೆ ಪುಣ್ಯಫಲ ನೀಡಿದರೆ, ನಾವು ಮಾಡಿದ ದಾನ ದುರ್ವಿನಿಯೋಗವಾದರೆ ಅದರ ಪಾಪ ನಮಗೂ ತಟ್ಟುತ್ತದೆ. ಆದ್ದರಿಂದ ಸ್ಥಳ, ಸಮಯ, ಸಂದರ್ಭ ನೋಡಿ ಯೋಗ್ಯರಾದವರಿಗೆ ದಾನ ಮಾಡಬೇಕು ಎಂದು ಸಲಹೆ ಮಾಡಿದರು.

Advertisement
Advertisement
Advertisement
ಸತ್ಪಾತ್ರರಿಗೆ ದಾನ ಮಾಡಿದ ಬಳಿಕ ಉಳಿದದ್ದನ್ನು ಅನುಭವಿಸಬೇಕು ಎಂದು ಶಾಸ್ತ್ರ ಹೇಳುತ್ತದೆ; ಕೊಟ್ಟು ತಿನ್ನುವುದು ಭಾರತೀಯ ಸಂಸ್ಕೃತಿ ಎಂದು ಬಣ್ಣಿಸಿದರು. ನಮ್ಮದು ಅಂದುಕೊಂಡಿದ್ದನ್ನು ಬಿಟ್ಟುಕೊಡುವ ಕಾರ್ಯ ಸಣ್ಣದಲ್ಲ. ಆದ್ದರಿಂದ ದಾನ ಎಲ್ಲಕ್ಕಿಂತ ಕಠಿಣ. ದಾನದ ಮುಂದಿನ ಹೆಜ್ಜೆಯೇ ಮಾನ. ದಾನವೇ ಮಾನವಾಗಿ ಪರಿಣಮಿಸುತ್ತದೆ. ನಮಗೆ ಜೀವನವನ್ನು ಕೊಟ್ಟ ಭಗವಂತ ಸದಾ ನಮ್ಮನ್ನು ಅಳೆಯುತ್ತಾ ಇರುತ್ತಾನೆ. ಆತನ ಅಳತೆಯಲ್ಲಿ ನಾವೆಂದೂ ಕಡಿಮೆಯಾಗಬಾರದು. ಸತ್ಪಾತ್ರರಿಗೆ ದಾನ ಮಾಡುವ ಮೂಲಕ ಭಗವಂತನ ಮೆಚ್ಚುಗೆಗೆ ನಾವು ಪಾತ್ರರಾಗಬೇಕು ಎಂದರು.

ಪೂಜೆ ಮಾಡಿದ ಬಳಿಕ ಪ್ರಸಾದ ಸಿಕ್ಕುವ ಹಾಗೆ ದಾನ ಮಾಡಿದವರಿಗೆ ಆಶೀರ್ವಾದಪೂರ್ವಕವಾಗಿ ಮಾನ ಸಲ್ಲುತ್ತದೆ; ಭಗವಂತ ಕೊಟ್ಟದ್ದನ್ನು ಅವನ ಕಾರ್ಯಕ್ಕೆ ಬಿಟ್ಟುಕೊಡುವುದು ನಿಜವಾದ ದಾನ; ಲಕ್ಷ್ಮಿಗೆ ಲಕ್ಷ ರೂಪ; ಲಕ್ಷ್ಮಿ ಬಗೆಬಗೆಯ ರೂಪ ತಾಳುತ್ತಾಳೆ; ಅನ್ನ, ಅರಿವೆ, ಆಶ್ರಯ, ವಿದ್ಯೆ ಹೀಗೆ ಲಕ್ಷ್ಮಿಗೆ ಹಲವು ರೂಪ. ಆದರೆ ಯಾವುದು ಹೆಚ್ಚಿದರೂ ತೊಂದರೆ. ಬದುಕಿನಲ್ಲಿ ಯಾವ ಸೌಲಭ್ಯಗಳೂ ಅಗತ್ಯಕ್ಕಿಂತ ಹೆಚ್ಚಾದಾಗ ಅದು ತೊಂದರೆಯಾಗುತ್ತದೆ ಎಂದು ವಿಶ್ಲೇಷಿಸಿದರು.

Advertisement
Advertisement
ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ, ಶ್ರೀ ಸನ್ನಿಧಿ ನಮಗೆ ಎಲ್ಲವನ್ನೂ ಒದಗಿಸುತ್ತದೆ. ಆದ್ದರಿಂದ ನಮ್ಮ ಸಂಪಾದನೆಯ ಒಂದು ಭಾಗವನ್ನು ಸಮಾಜಕ್ಕೆ ನೀಡಬೇಕು. ಶ್ರೀಗಳು ಕೈಗೊಂಡ ಸತ್ಕಾರ್ಯಗಳಿಗೆ ಇಂಥ ದಾನ ಸಂದರೆ ಅದು ಸರ್ವಶ್ರೇಷ್ಠ ಎಂದು ಬಣ್ಣಿಸಿದರು. ದಾನವನ್ನು ಎಲ್ಲಿ ಕೊಡಬೇಕು; ಯಾವ ಕಾರ್ಯಕ್ಕೆ ಕೊಡಬೇಕು ಎಂಬ ಸರಿಯಾದ ನಿರ್ಧಾರ ಕೈಗೊಳ್ಳುವುದು ಅತ್ಯಂತ ಮುಖ್ಯ. ಎಷ್ಟು ಕೊಟ್ಟೆ ಎನ್ನುವುದಕ್ಕಿಂತ ಯಾವುದಕ್ಕೆ ಕೊಟ್ಟೆ ಎನ್ನುವುದು ಮತ್ತು ಕೊಡುವ ಭಾವ ಅತ್ಯಂತ ಮುಖ್ಯ ಎಂದು ಅಭಿಪ್ರಾಯಪಟ್ಟರು.

 

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ವಿದ್ಯೆಗೆ ಮಾಡುವ ದಾನ ಸರ್ವಶ್ರೇಷ್ಠ : ರಾಘವೇಶ್ವರ ಶ್ರೀ"

Leave a comment

Your email address will not be published.


*