ವಿಶ್ವಕಪ್-2023ರಲ್ಲಿ(world cup-2023) ಫೈನಲ್‌ನಲ್ಲಿ(Final) ಸೋತಿದೆ ಎಂಬುದು ಬಿಟ್ರೆ, ಈ ಭಾರಿ ಅಷ್ಟು ಪಂದ್ಯಗಳಲ್ಲಿ ಅಲ್ಲಾ ಆಟಗಾರರು ಅಮೋಘ ಪ್ರದರ್ಶನ ನೀಡಿದ್ದಾರೆ. ಇವರ ಈ ಆಟದ ಹಿಂದೆ ವ್ಯಕ್ತಿ ಅವರ ಕೋಚ್ ಕ್ರಿಕೆಟ್ ಲೋಕದ ಮಹಾಗೋಡೆ(The Great Wall)ಎಂದೇ ಪ್ರಖ್ಯಾತಿಯಾಗಿರುವ ರಾಹುಲ್ ದ್ರಾವಿಡ್(Rahul dravid) ಹಾಗೂ ಅವರ ತಂಡ. ಇದೀಗ ರಾಹುಲ್ ಅವರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI)) ಟೀಂ ಇಂಡಿಯಾದ(Team India) ಕೋಚಿಂಗ್ ಸಿಬ್ಬಂದಿಗಳ(Support Staff) ಅವಧಿಯನ್ನು ವಿಸ್ತರಿಸುವುದಾಗಿ ಘೋಷಿಸಿದ್ದು, ರಾಹುಲ್ ದ್ರಾವಿಡ್ ಭಾರತದ ಮುಖ್ಯ ಕೋಚ್ ಆಗಿ ಮುಂದುವರಿಯಲಿದ್ದಾರೆ.
ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್, ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಮತ್ತು ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಸೇರಿದಂತೆ ಸಹಾಯಕ ಕೋಚ್‌ಗಳು ಮತ್ತು ಇತರ ಸದಸ್ಯರ ಒಪ್ಪಂದದ ಅವಧಿಯನ್ನು ಬಿಸಿಸಿಐ ವಿಸ್ತರಿಸಿದೆ. BCCI ಕೋಚ್‌ಗಳ ಮುಂದುವರಿಕೆ ಅವಧಿಯ ಕುರಿತು ತಿಳಿಸಿಲ್ಲ. ಆದರೂ ದ್ರಾವಿಡ್ T20 ವಿಶ್ವಕಪ್ 2024ರವರೆಗೆ ಮುಂದುವರಿಯುವ ನಿರೀಕ್ಷೆಯಿದೆ.
ನ.2021ರಲ್ಲಿ 2 ವರ್ಷಗಳ ಒಪ್ಪಂದದಂತೆ ದ್ರಾವಿಡ್ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಲಾಗಿತ್ತು. 2023ರ ODI ವಿಶ್ವಕಪ್ ಮುಕ್ತಾಯದೊಂದಿಗೆ ಈ ಅವಧಿ ಕೊನೆಗೊಂಡಿತ್ತು. ದ್ರಾವಿಡ್ ಅವರ ಕೋಚಿಂಗ್ ವೇಳೆ ಭಾರತವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮತ್ತು ODI ವಿಶ್ವಕಪ್ ಎರಡರಲ್ಲೂ ರನ್ನರ್ ಅಪ್ ಸ್ಥಾನವನ್ನು ಗಳಿಸಿದೆ. ಇದಲ್ಲದೆ ಕಳೆದ 2 ವರ್ಷಗಳಲ್ಲಿ ಉತ್ತಮ ದಾಖಲೆಯನ್ನು ಹೊಂದಿದೆ. ಇತ್ತೀಚೆಗೆ ಮುಕ್ತಾಯಗೊಂಡ ವಿಶ್ವಕಪ್ 2023ರ ನಂತರ ಅವರ ಒಪ್ಪಂದದ ಅವಧಿ ಮುಗಿದರೂ BCCI ರಾಹುಲ್ ದ್ರಾವಿಡ್ ಅವರನ್ನು ಮರು ನೇಮಕಕ್ಕೆ ಅಥವಾ ಅವಧಿಯನ್ನು ವಿಸ್ತರಿಸಲು ಸರ್ವಾನುಮತದಿಂದ ಒಪ್ಪಿಕೊಂಡಿದೆ.
ಭಾರತದ ಮುಖ್ಯ ತರಬೇತುದಾರರಾಗಿ ಮುಂದವರಿಕೆ ಬಳಿಕ ದ್ರಾವಿಡ್ ಅವರ ಮೊದಲ ನಿಯೋಜನೆಯು ದಕ್ಷಿಣ ಆಫ್ರಿಕಾದ ಪ್ರವಾಸವಾಗಿದೆ. ಇದಾದ ಬಳಿಕ ಜೂನ್‌ನಲ್ಲಿ ನಡೆಯಲಿರುವ ಟಿ 20 ವಿಶ್ವಕಪ್‌ಗೆ ಮೊದಲು ಭಾರತವು ಇಂಗ್ಲೆಂಡ್ ವಿರುದ್ಧ 5 ಟೆಸ್ಟ್‌ಗಳ ಸರಣಿಯನ್ನು ಆಯೋಜಿಸಲಿದೆ.
ಈ ಕುರಿತು ಮಾತನಾಡಿದ BCCI ಅಧ್ಯಕ್ಷ ರೋಜರ್ ಬಿನ್ನಿ, ರಾಹುಲ್ ದ್ರಾವಿಡ್ ಅವರ ದೂರದೃಷ್ಟಿ, ವೃತ್ತಿಪರತೆ ಮತ್ತು ಪ್ರಯತ್ನಗಳು ಟೀಮ್ ಇಂಡಿಯಾದ ಯಶಸ್ಸಿನಲ್ಲಿ ಪ್ರಮುಖ ಆಧಾರಸ್ತಂಭಗಳಾಗಿವೆ. ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಸವಾಲುಗಳನ್ನು ಸ್ವೀಕರಿಸಿದ್ದಕ್ಕಾಗಿ ನಾನು ಅವರಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತೇನೆ. ದ್ರಾವಿಡ್ ಅವಧಿಯಲ್ಲಿ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡಿದೆ. ಅವರು ಮುಖ್ಯ ಕೋಚ್ ಆಗಿ ಉಳಿಯುವ ಪ್ರಸ್ತಾಪವನ್ನು ಸ್ವೀಕರಿಸಿದ್ದಕ್ಕಾಗಿ ನನಗೆ ಸಂತೋಷವಾಗಿದೆ ಮತ್ತು ಇದು ದ್ರಾವಿಡ್ ಮತ್ತು ಬಿಸಿಸಿಐ ನಡುವಿನ ಸಂಬಂಧವನ್ನು ವೃದ್ಧಿಗೊಳಿಸುತ್ತದೆ ಎಂದು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ರಾಹುಲ್ ದ್ರಾವಿಡ್, ಟೀಮ್ ಇಂಡಿಯಾದೊಂದಿಗಿನ ಕಳೆದ ಎರಡು ವರ್ಷಗಳು ಸ್ಮರಣೀಯವಾಗಿವೆ. ಒಟ್ಟಾಗಿ ನಾವು ಏರಿಳಿತಗಳನ್ನು ಕಂಡಿದ್ದೇವೆ. ನಾವು ಡ್ರೆಸ್ಸಿಂಗ್ ರೂಮ್‌ನಲ್ಲಿ ಅಳವಡಿಸಿಕೊಂಡ ಸಂಸ್ಕೃತಿಯ ಬಗ್ಗೆ ನಮಗೆ ನಿಜವಾಗಿಯೂ ಹೆಮ್ಮೆ ಇದೆ. ನಮ್ಮ ತಂಡ ಹೊಂದಿರುವ ಕೌಶಲ್ಯ ಮತ್ತು ಪ್ರತಿಭೆ ಅಸಾಧಾರಣವಾಗಿದೆ ಎಂದು ಹೇಳಿದ್ದಾರೆ.
– ಅಂತರ್ಜಾಲ ಮಾಹಿತಿ
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…