ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರಂತರ ಮಳೆ ಮತ್ತು ಆಗಾಗ್ಗೆ ಭೂಕುಸಿತದ ಕಾರಣದಿಂದ ಹಣ್ಣು ಬೆಳೆಗಾರರಿಗೆ, ವಿಶೇಷವಾಗಿ ಅನಂತನಾಗ್ ಜಿಲ್ಲೆಯಲ್ಲಿ, ತಮ್ಮ ಉತ್ಪನ್ನಗಳನ್ನು ಸಾಗಿಸುವಲ್ಲಿ ತೀವ್ರ ತೊಂದರೆಗಳನ್ನುಂಟು ಮಾಡಿದವು. ರೈತರು ಭಾರೀ ನಷ್ಟದ ಅಪಾಯವನ್ನು ಎದುರಿಸುತ್ತಿರುವುದರಿಂದ ರೈಲ್ವೇ ಸಚಿವ ಅಶ್ವಿನ್ ವೈಷ್ಣವ್ ಅವರು ವಿಶೇಷ ರೈಲು ಓಡಾಟವನ್ನು ಘೋಷಿಸಿದ್ದಾರೆ.
ಭಾರೀ ಮಳೆಯ ಕಾರಣದಿಂದ ರಸ್ತೆಗಳು ಭೂಕುಸಿತಕ್ಕೆ ಒಳಗಾಗಿ ಬೆಳೆಯನ್ನು ಸಾಗಾಟ ಮಾಡಲು ಸಂಕಷ್ಟ ಪಡಬೇಕಾಯಿತು. ಹೀಗಾಗಿ ಬೆಳೆ ಬೆಳೆದರೂ ಸಾಗಾಟದ ಸಮಸ್ಯೆಯ ಕಾರಣದಿಂದ ನಷ್ಟ ಅನುಭವಿಸುವ ಸ್ಥಿತಿಗೆ ಒಳಗಾಗಬೇಕಾಯಿತು. ತಕ್ಷಣವೇ ಸ್ಥಳೀಯರು ಮತ್ತು ಬೆಳೆಗಾರರು ಕೇಂದ್ರ ಸರ್ಕಾರ ಮತ್ತು ರೈಲ್ವೆ ಸಚಿವರಿಗೆ ತಕ್ಷಣ ನೆರವಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್, ಕಾಶ್ಮೀರಿ ಸೇಬುಗಳ ಸಾಗಣೆಗೆ ಮೀಸಲಾಗಿರುವ ವಿಶೇಷ ಗೂಡ್ಸ್ ರೈಲುಗಳ ಓಡಾಟದ ಬಗ್ಗೆ ಘೋಷಿಸಿದರು. ಈ ಕ್ರಮವು ದೇಶದ ವಿವಿಧ ಭಾಗಗಳಿಗೆ ಸೇಬುಗಳ ಸುರಕ್ಷಿತ, ಸಕಾಲಿಕ ಮತ್ತು ಸುಗಮ ಪೂರೈಕೆಗೆ ಅವಕಾಶವಾಗಿದೆ. ತೋಟಗಾರಿಕೆಯನ್ನು ಅವಲಂಬಿಸಿರುವ ಸಾವಿರಾರು ಕುಟುಂಬಗಳ ಈ ತಕ್ಷಣದ ನೆರವು ಪ್ರಯೋಜನವಾಗಿದೆ. ಹಣ್ಣು ಬೆಳೆಗಾರರು ಮತ್ತು ಸಾಮಾಜಿಕ ಕಾರ್ಯಕರ್ತರು ಈ ನಿರ್ಧಾರವನ್ನು ಸ್ವಾಗತಿಸಿದರು, ಸರ್ಕಾರ ಮತ್ತು ರೈಲ್ವೆ ಸಚಿವರಿಗೆ ಕೃತಜ್ಞತೆ ಸಲ್ಲಿಸಿದರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ..
ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಕೇಂದ್ರದ ಸಮಗ್ರ ಕೀಟ ನಿರ್ವಹಣಾ ಕೇಂದ್ರಗಳು…
ಮನಸ್ಸಿದ್ದರೆ ಮಾರ್ಗ ಎಂಬ ಗಾದೆ ಮಾತು ನಾವು ಕೇಳಿದ್ದೇವೆ. ಆದರೆ, ಕೆಲವು ಜನರ…
ಕೆಲವು ಕಡೆಗಳಲ್ಲಿ ರೈತರು ತಮ್ಮ ಜಮೀನಿಗೆ ಹೋಗಲು ಸರಿಯಾದ ದಾರಿಯಿಲ್ಲದೆ ಪರದಾಟ ನಡೆಸಬೇಕಾಗುತ್ತದೆ.…
ಕೃಷಿ ಇಲಾಖೆಯು ರೈತರಿಗೆಂದು ವಿವಿಧ ಸಬ್ಸಿಡಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದಕ್ಕೆ ಯಾವ…
ಮಹಿಳೆಯರ ಏಳಿಗೆಗೆ ಸರ್ಕಾರವೂ ಹಲವಾರು ರೀತಿಯ ಯೋಜನೆಯನ್ನು ಜಾರಿಗೊಳಿಸಿದೆ. ಇದೀಗ ಗ್ರಾಮೀಣ ಮಹಿಳೆಯರಿಗೆ…
17.12.2025 ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ…