ಕಾಶ್ಮೀರಿ ಸೇಬುಗಳಿಗಾಗಿ ವಿಶೇಷ ಗೂಡ್ಸ್ ರೈಲು‌ | ರೈಲ್ವೆ ಸಚಿವರಿಂದ ಘೋಷಣೆ

September 15, 2025
6:40 AM
ವಿಶೇಷ ಸರಕು ರೈಲುಗಳನ್ನು ಓಡಿಸುವ ನಿರ್ಧಾರವು ಕಾಶ್ಮೀರದ ಸೇಬು ಬೆಳೆಗಾರರನ್ನು ನಷ್ಟದಿಂದ ರಕ್ಷಿಸುತ್ತದೆ ಮತ್ತು ದೇಶಾದ್ಯಂತ ಉತ್ಪನ್ನಗಳ ಸುಗಮ ಪೂರೈಕೆಗೆ ಸಾಧ್ಯವಾಗುತ್ತದೆ.

ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರಂತರ ಮಳೆ ಮತ್ತು ಆಗಾಗ್ಗೆ ಭೂಕುಸಿತದ ಕಾರಣದಿಂದ  ಹಣ್ಣು ಬೆಳೆಗಾರರಿಗೆ, ವಿಶೇಷವಾಗಿ ಅನಂತನಾಗ್ ಜಿಲ್ಲೆಯಲ್ಲಿ, ತಮ್ಮ ಉತ್ಪನ್ನಗಳನ್ನು ಸಾಗಿಸುವಲ್ಲಿ ತೀವ್ರ ತೊಂದರೆಗಳನ್ನುಂಟು ಮಾಡಿದವು. ರೈತರು ಭಾರೀ ನಷ್ಟದ ಅಪಾಯವನ್ನು ಎದುರಿಸುತ್ತಿರುವುದರಿಂದ ರೈಲ್ವೇ ಸಚಿವ ಅಶ್ವಿನ್‌ ವೈಷ್ಣವ್‌ ಅವರು ವಿಶೇಷ ರೈಲು ಓಡಾಟವನ್ನು ಘೋಷಿಸಿದ್ದಾರೆ.

ಭಾರೀ ಮಳೆಯ ಕಾರಣದಿಂದ ರಸ್ತೆಗಳು ಭೂಕುಸಿತಕ್ಕೆ ಒಳಗಾಗಿ ಬೆಳೆಯನ್ನು ಸಾಗಾಟ ಮಾಡಲು ಸಂಕಷ್ಟ ಪಡಬೇಕಾಯಿತು. ಹೀಗಾಗಿ ಬೆಳೆ ಬೆಳೆದರೂ ಸಾಗಾಟದ ಸಮಸ್ಯೆಯ ಕಾರಣದಿಂದ ನಷ್ಟ ಅನುಭವಿಸುವ ಸ್ಥಿತಿಗೆ ಒಳಗಾಗಬೇಕಾಯಿತು. ತಕ್ಷಣವೇ ಸ್ಥಳೀಯರು ಮತ್ತು ಬೆಳೆಗಾರರು ಕೇಂದ್ರ ಸರ್ಕಾರ ಮತ್ತು ರೈಲ್ವೆ ಸಚಿವರಿಗೆ ತಕ್ಷಣ ನೆರವಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್, ಕಾಶ್ಮೀರಿ ಸೇಬುಗಳ ಸಾಗಣೆಗೆ ಮೀಸಲಾಗಿರುವ ವಿಶೇಷ ಗೂಡ್ಸ್ ರೈಲುಗಳ ಓಡಾಟದ ಬಗ್ಗೆ ಘೋಷಿಸಿದರು. ಈ ಕ್ರಮವು ದೇಶದ ವಿವಿಧ ಭಾಗಗಳಿಗೆ ಸೇಬುಗಳ ಸುರಕ್ಷಿತ, ಸಕಾಲಿಕ ಮತ್ತು ಸುಗಮ ಪೂರೈಕೆಗೆ ಅವಕಾಶವಾಗಿದೆ. ತೋಟಗಾರಿಕೆಯನ್ನು ಅವಲಂಬಿಸಿರುವ ಸಾವಿರಾರು ಕುಟುಂಬಗಳ ಈ ತಕ್ಷಣದ ನೆರವು ಪ್ರಯೋಜನವಾಗಿದೆ. ಹಣ್ಣು ಬೆಳೆಗಾರರು ಮತ್ತು ಸಾಮಾಜಿಕ ಕಾರ್ಯಕರ್ತರು ಈ ನಿರ್ಧಾರವನ್ನು ಸ್ವಾಗತಿಸಿದರು, ಸರ್ಕಾರ ಮತ್ತು ರೈಲ್ವೆ ಸಚಿವರಿಗೆ ಕೃತಜ್ಞತೆ ಸಲ್ಲಿಸಿದರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ..

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಗೋಮಯದಿಂದ ಗಣೇಶನ ಮೂರ್ತಿ – ದೇಶದಾದ್ಯಂತ ಸಾವಿರಾರು ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ವಿತರಣೆ
September 19, 2026
7:20 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 17-09-2026 | ಕರ್ನಾಟಕದಲ್ಲಿ ಇಂದಿನಿಂದ ಮಳೆ ಚುರುಕು ಸಾಧ್ಯತೆ
September 17, 2026
2:14 PM
by: ಸಾಯಿಶೇಖರ್ ಕರಿಕಳ
ಬರಪೀಡಿತ 101 ತಾಲೂಕುಗಳ ರೈತರಿಗೆ ಸಾಲ ಮರುಪಾವತಿಗೆ 12 ತಿಂಗಳ ವಿಸ್ತರಣೆ
September 17, 2026
7:20 AM
by: ದ ರೂರಲ್ ಮಿರರ್.ಕಾಂ
25 ಸಾವಿರ ವರ್ಷಗಳ ಹಿಂದೆಯೇ ಅಡಿಕೆ ಬಳಕೆ ? ಪುರಾತನ ಹಲ್ಲುಗಳಲ್ಲಿ ಸಿಕ್ಕಿದ ಸುಳಿವು
September 16, 2026
11:09 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror