ದೇಶಾದ್ಯಂತ ರೈಲ್ವೆ ಸಂಚಾರದ ಸೇವೆ ಹೆಚ್ಚಳ

October 8, 2020
2:54 PM

ಕೆಲ ಕಾಲಗಳಿಂದ ಸ್ಥಗಿತಗೊಂಡಿದ್ದ ರೈಲ್ವೆ ಸಂಚಾರದ ವ್ಯವಸ್ಥೆ ಪುನರಾರಂಭಕ್ಕೆ ಕೇಂದ್ರ ಸರ್ಕಾರ ಸಜ್ಜಾಗಿದೆ. ರೈಲ್ವೆ ಸಂಚಾರದ ಅನ್ ಲಾಕ್ ಪ್ರಕ್ರಿಯೆ ಪ್ರಾರಂಭವಾಗುತ್ತಿದ್ದಂತೆಯೇ ಪ್ರಯಾಣಿಕರಿಗೆ ಸಹಾಯವಾಗುವಂತೆ ಬಸ್ ಸಂಚಾರದ ವ್ಯವಸ್ಥೆಯು ಮಾಡಲಾಗುವುದು ಎಂದು ಹೇಳಲಾಗುತ್ತಿದೆ. ಕೆಲವೇ ದಿನಗಳಲ್ಲಿ ಬರಲಿರುವ ಹಬ್ಬಗಳನ್ನು ಗಮನದಲ್ಲಿರಿಸಿಕೊಂಡು ವ್ಯವಸ್ಥೆಯನ್ನು ಆಯೋಜಿಸಲಾಗಿದೆ.

ಒಟ್ಟು 200 ರೈಲುಗಳ ಸಂಚಾರಕ್ಕೆ ಅನುಮತಿ ನೀಡಲು ರೈಲ್ವೆ ಇಲಾಖೆ ಈ ಹಿಂದೆ ಸಜ್ಜಾಗಿತ್ತು. ಅದರ ಪೂರ್ವಭಾಗದ ಸಿದ್ಧತೆಯಂತೆ 39 ವಿಶೇಷ ರೈಲುಗಳನ್ನು ಬಿಡುವಂತೆ ಇದೀಗ ಇಲಾಖೆ ಸೂಚಿಸಿದೆ. ಅಕ್ಟೋಬರ್ 15ರಿಂದ ಈ ವಿಶೇಷ ರೈಲು ಸಂಚಾರ ಪ್ರಾರಂಭವಾಗಲಿದೆ ಎನ್ನಲಾಗುತ್ತಿದೆ.

ಈ ವಿಶೇಷ ರೈಲುಗಳು, ದೇಶದೆಲ್ಲೆಡೆ ಸಂಚಾರ ಮಾಡಲಿದ್ದು, ಇದರಲ್ಲಿ ಬಹುತೇಕ ರೈಲುಗಳು ಎಕ್ಸ್‌ಪ್ರೆಸ್ ರೈಲುಗಳು. ಇನ್ನು ಕರ್ನಾಟಕದಲ್ಲಿ 5 ರೈಲುಗಳನ್ನು ಬಿಡಲಾಗುತ್ತಿದ್ದು, ರೈಲುಗಳು 3 ವಾರಕ್ಕೊಮ್ಮೆ ಸಂಚಾರ ಮಾಡಲಿವೆ. ಚೆನ್ನೈ-ಬೆಂಗಳೂರು ಡಬಲ್ ಡೆಕ್ಕರ್ ಪ್ರತಿದಿನ ಸಂಚಾರ ಮಾಡಲಿದ್ದು, ಬೆಂಗಳೂರು-ಚೆನ್ನೈ ಶತಾಬ್ದಿ ಎಕ್ಸ್‌ಪ್ರೆಸ್ ಮಂಗಳವಾರ ಒಂದು ದಿನ ಹೊರತುಪಡಿಸಿ ಉಳಿದ ದಿನ ಸಂಚರಿಸಲಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅಡಿಕೆ ಅಕ್ರಮ ಆಮದು ಜಾಲದ ಮೇಲೆ ಇಡಿ ದಾಳಿ – 16 ಕಡೆ ಶೋಧ, ನೂರಾರು ಕೋಟಿ ಹಣದ ವಹಿವಾಟಿನ ತನಿಖೆ
October 1, 2026
8:30 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 01-10-2026 | ಕರ್ನಾಟಕದಲ್ಲಿ ಮತ್ತೆ ಮಳೆ ಇಳಿಕೆ – ಕಾರಣವೇನು?
October 1, 2026
1:10 PM
by: ಸಾಯಿಶೇಖರ್ ಕರಿಕಳ
ಹೊಸ ಅಡಿಕೆ ಧಾರಣೆ 350 ಫಿಕ್ಸ್ – ಆರಂಭಿಕ ಧಾರಣೆಯೇ ಆಮದು ದರಕ್ಕಿಂತ ಕಡಿಮೆ..!
October 1, 2026
12:44 PM
by: ದ ರೂರಲ್ ಮಿರರ್.ಕಾಂ
ರಿಲಯನ್ಸ್ ಫೌಂಡೇಶನ್ ಪದವಿ ಪೂರ್ವ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ
October 1, 2026
7:48 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror