ಕಳೆದ 24 ಗಂಟೆಯಲ್ಲಿ ಸುಳ್ಯ ತಾಲೂಕು ಸೇರಿದಂತೆ ಹಲವು ಕಡೆಗಳಲ್ಲಿ ಉತ್ತಮ ಮಳೆಯಾಗಿದೆ. ನಿರಂತರ ಮಳೆ ಸುರಿಯುತ್ತಿದ್ದು ಹಲವು ಕಡೆಗಳಲ್ಲಿ 100 ಮಿಮೀಗಿಂತ ಅಧಿಕ ಮಳೆಯಾಗಿದೆ. ಕೊಡಗು ಜಿಲ್ಲೆಯ ಚೆಂಬುವಿನಲ್ಲಿ 163 ಮಿಮೀ ಮಳೆ ದಾಖಲಾಗಿದೆ. ಉಳಿದಂತೆ ಹಲವು ಕಡೆ 100 ಮಿಮೀ ಗಿಂತಲೂ ಅಧಿಕ ಮಳೆ ಸುರಿದಿದೆ. ಎರಡು ದಿನಗಳ ಕಾಲ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ನಿರೀಕ್ಷೆ ಮಾಡಲಾಗಿದ್ದು ಆರೆಂಜ್ ಎಲರ್ಟ ಘೋಷಣೆ ಮಾಡಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಕಳೆದ 24 ಗಂಟೆಗಳಲ್ಲಿ ಕೊಡಗು ಜಿಲ್ಲೆಯ ಚೆಂಬುವಿನಲ್ಲಿ 163 ಮಿಮೀ ಮಳೆಯಾದರೆ ಮಡಪ್ಪಾಡಿ 140 ಮಿಮೀ, ಗುತ್ತಿಗಾರು 111 ಮಿಮೀ, ಕಮಿಲ 113 ಮಿಮೀ , ಬಾಳಿಲ 126 ಮಿಮೀ , ಕೊಲ್ಲಮೊಗ್ರ 101 ಮಿಮೀ, ಕಲ್ಮಡ್ಕ 124 ಮಿಮೀ, ಬಳ್ಪ 139 ಮಿಮೀ, ಬಂಟ್ವಾಳ 92 ಮಿಮೀ, ಕಲ್ಲಾಜೆ 143 ಮಿಮೀ, ಮಂಗಳೂರು 51 ಮಿಮೀ, ಸುಬ್ರಹ್ಮಣ್ಯ 134 ಮಿಮೀ , ಬೆಳ್ತಂಗಡಿ 183 ಮಿಮೀ, ಕೊಪ್ಪ 103 ಮಿಮೀ, ಮಂಚಿ 105 ಮಿಮೀ, ಕೋಡಪದವು 92 ಮಿಮೀ, ಪುತ್ತೂರು ಮುಂಡೂರು 140 ಮಿಮೀ ಮಳೆಯಾಗಿದೆ.
ಕರಾವಳಿ ಜಿಲ್ಲೆಗಳಾದ ಮಂಗಳೂರು, ಉಡುಪಿ, ಹಾಗೂ ಉತ್ತರಕನ್ನಡ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರೀ ಮಳೆ ನಿರೀಕ್ಷೆ ಮಾಡಲಾಗಿದೆ. ಹೀಗಾಗಿ ಹೈ ಎಲರ್ಟ್ ಹವಾಮಾನ ಇಲಾಖಾ ಸೂಚಿಸಿದೆ. ಸತತ ಎರಡು ದಿನಗಳಿಂದ ಜಿಲ್ಲೆಯ ಹಲವು ಭಾಗಗಳಲ್ಲಿ ಮಳೆ ಹೆಚ್ಚಾಗಿ ನದಿಗಳು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಮುನ್ನಚ್ಚೆರಿಕೆ ಕ್ರಮವಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ 4 ದಿನಗಳ ಕಾಲ ರಜೆ ಘೋಷಣೆ ಮಾಡಲಾಗಿದೆ. ಕೊಡಗು ಜಿಲ್ಲೆಯಲ್ಲೂ ಮಳೆ ಅವಾಂತರದಿಂದ ಹಾನಿಯಾಗಿದೆ. ಭಾರೀ ಮಳೆಗೆ ಸೋಮವಾರಪೇಟೆ ತಾಲೂಕಿನಲ್ಲಿ ಮನೆಯೊಂದು ಬಿರುಕು ಬಿಟ್ಟಿದೆ. ಉತ್ತರಕನ್ನಡ ಜಿಲ್ಲೆಯಲ್ಲೂ ಭಾರೀ ಮಳೆಯಿಂದ ಹಾನಿಯಾಗಿದೆ.
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel