ಮಳೆಯ ದಾಖಲೆ | 200 ಮಿಮೀ ಮಳೆ ದಾಖಲಾಯಿತು ಹಲವು ಕಡೆ | ಹಲವು ಕಡೆ ಭೂಕುಸಿತ- ಉಕ್ಕಿ ಹರಿದ ನದಿಗಳು | ಜನಜೀವನ ಅಸ್ತವ್ಯಸ್ತ |

July 10, 2022
9:52 AM
ಕಳೆದ 24 ಗಂಟೆಯಲ್ಲಿ ಮಳೆಯ ಅಬ್ಬರ ತೀವ್ರವಾಗಿತ್ತು. ಎಲ್ಲೆಡೆಯೂ ಭಾರೀ ಮಳೆ. ಹಲವು ಕಡೆಗಳಲ್ಲಿ  150 ಮಿಮೀ ಗಿಂತಲೂ ಅಧಿಕ ಮಳೆಯಾಗಿದೆ. ಸುಳ್ಯದ ಕಲ್ಲಾಜೆ, ಬೆಳ್ತಂಗಡಿ, ಕಾರ್ಕಳ ಪ್ರದೇಶದಲ್ಲಿ  200 ಮಿಮೀ ಮಳೆಯಾಗಿದೆ.
ಚೆಂಬು ಪ್ರದೇಶದಲ್ಲಿ ಸತತವಾಗಿ 100 ಮಿಮೀಗಿಂತ ಹೆಚ್ಚು ಮಳೆಯಾಗುತ್ತಿದ್ದು ಕಳೆದ 24 ಗಂಟೆಯಲ್ಲಿ 191 ಮಿಮೀ ಮಳೆಯಾಗಿದೆ. ಎಲ್ಲೆಡೆಯೂ ಹೊಳೆ, ನದಿಗಳು ತುಂಬಿ ಹರಿಯುತ್ತಿದೆ. ಮುಂದಿನ 24 ಗಂಟೆಗಳ ಕಾಲ ಆರೆಂಜ್‌ ಎಲರ್ಟ್‌ ಇದೆ. ಉತ್ತಮ ಮಳೆಯಾಗಬಹುದು.

ಎಲ್ಲೆಲ್ಲೆ ಎಷ್ಟು ಮಳೆ ?
  •  ಸುಳ್ಯ 166 ಮಿಮೀ,
  • ಕಲ್ಲಾಜೆಯಲ್ಲಿ 204 ಮಿಮೀ,
  • ಮಡಪ್ಪಾಡಿ 75  ಮಿಮೀ,
  • ಗುತ್ತಿಗಾರು-ಮೆಟ್ಟಿನಡ್ಕ 214 ಮಿಮೀ,
  • ಕಮಿಲ 169 ಮಿಮೀ ,
  • ಬಾಳಿಲ 169 ಮಿಮೀ ,
  • ಕೊಲ್ಲಮೊಗ್ರ 189 ಮಿಮೀ,
  • ಸುಬ್ರಹ್ಮಣ್ಯ 173 ಮಿಮೀ ,
  • ಕಲ್ಮಡ್ಕ 176 ಮಿಮೀ,
  • ಬಳ್ಪ 211 ಮಿಮೀ,
  • ಬೆಳ್ಳಾರೆ 145 ಮಿಮೀ ,
  • ಬೆಳ್ತಂಗಡಿ 179  ಮಿಮೀ,
  • ಪುತ್ತೂರು ಮುಂಡೂರು 110 ಮಿಮೀ ,
  • ಕೋಡಿಂಬಾಳ 144 ಮಿಮೀ,
  • ಕಾರ್ಕಳದಲ್ಲಿ 200 ಮಿಮೀ ಮಳೆಯಾಗಿದೆ. 
ನೇತ್ರಾವತಿ ಹಾಗೂ ಕುಮಾರಧಾರಾ ನದಿ ತುಂಬಿ ಹರಿಯುತ್ತಿದೆ. ಹಲವು ಕಡೆಗಳಲ್ಲಿ  ತೋಟಗಳಿಗೆ ನೀರು ನುಗ್ಗಿದೆ ಬಂಟ್ವಾಳದಲ್ಲಿ ಅಪಾಯಮಟ್ಟದಲ್ಲಿ  ನೇತ್ರಾವತಿ ನದಿ ಹರಿಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಭೂಕುಸಿತ, ರಸ್ತೆ ಸಂಪರ್ಕ ಕಡಿತ ಸಂಭವಿಸಿದೆ. ಸುಳ್ಯ ತಾಲೂಕಿನ ಪಂಜದಲ್ಲಿ  ನದಿ ತುಂಬಿ ಹರಿದು ಪಂಜ-ಸುಬ್ರಹ್ಮಣ್ಯ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಧಾರಾ ನದಿ ಉಕ್ಕಿ ಹರಿದು ಸ್ನಾನ ಘಟ್ಟ ಜಲಾವೃತವಾಗಿದೆ. ಸಂಪಾಜೆ ಕಲ್ಲುಗುಂಡಿಯಲ್ಲಿ  ನೀರು ಹರಿದು ತೋಟಗಳಿಗೆ , ಮನೆಗಳಿಗೆ ನೀರು ನುಗ್ಗಿದೆ. ಇಲ್ಲಿ ಭೂಕುಸಿತ ಸಂಭವಿಸಿ ಮನೆ ಅಪಾಯದಲ್ಲಿದೆ.  ಈಗಲೂ ಮಳೆ ಧಾರಾಕಾರವಾಗಿ ಸುರಿಯುತ್ತಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

‘ರೋಸ್ಟೆಡ್ ಅಡಿಕೆ’ ಆಮದು ವರ್ಗೀಕರಣಕ್ಕೆ ಮತ್ತೊಂದು ತಿರುವು – ಹೈಕೋರ್ಟ್ ತೀರ್ಪು ಉಲ್ಲೇಖಿಸಿ ಅರ್ಜಿ ತಿರಸ್ಕರಿಸಿದ ಮುಂಬೈ ಪ್ರಾಧಿಕಾರ
September 28, 2026
10:20 PM
by: ದ ರೂರಲ್ ಮಿರರ್.ಕಾಂ
ಬರಕ್ಕೆ ರಾಗಿ ಕೂಡ ಸೋಲುತ್ತಿದೆ – ‘ಬರ ನಿರೋಧಕ’ ಎಂದರೆ ಮಳೆ ಇಲ್ಲದಿದ್ದರೂ ಬೆಳೆಯುತ್ತದೆ ಎಂದಲ್ಲ!
September 28, 2026
9:05 PM
by: ದ ರೂರಲ್ ಮಿರರ್.ಕಾಂ
₹2,000ಕ್ಕಿಂತ ಹೆಚ್ಚಿನ UPI ವಹಿವಾಟಿನ MDRಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಣೆ
September 28, 2026
2:31 PM
by: ದ ರೂರಲ್ ಮಿರರ್.ಕಾಂ
ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತಕ್ಕೆ ಎರಡು ಪದಕ: ಪುರುಷರಿಗೆ ಬೆಳ್ಳಿ, ಮಹಿಳೆಯರಿಗೆ ಕಂಚು – ಪ್ರಧಾನಿ ಮೋದಿ ಅಭಿನಂದನೆ
September 28, 2026
1:43 PM
by: ಮಿರರ್‌ ಡೆಸ್ಕ್‌

You cannot copy content of this page - Copyright -The Rural Mirror