ಸುಳ್ಯ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಸುಮಾರು ಎರಡು ಗಂಟೆಯಿಂದ ಭೀಕರ ಮಳೆಯಾಗುತ್ತಿದೆ. ಕೊಲ್ಲಮೊಗ್ರ, ಕಲ್ಮಕಾರು, ಕಲ್ಲಾಜೆ, ಹರಿಹರ, ಬಾಳುಗೋಡು ಪ್ರದೇಶದಲ್ಲಿ ಭೀಕರ ಮಳೆಯಾಗುತ್ತಿದೆ. ಭಾರೀ ಮಳೆಗೆ ಹೊಳೆ ನೀರು ಹಕ್ಕಿ ಹರಿದು ಕೊಲ್ಲಮೊಗ್ರ ಹಾಗೂ ಹರಿಹರದಲ್ಲಿ ಸೇತುವೆ ಮುಳುಗಡೆಯಾಗಿದೆ. ಹರಿಹರದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಈಗಲೂ ಮಳೆ ಸುರಿಯುತ್ತಿದೆ. ಇದುವರೆಗೆ ಇಷ್ಟು ಪ್ರಮಾಣದಲ್ಲಿ ಕೆಲ ವರ್ಷಗಳಲ್ಲೇ ಬಂದಿರಲಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ಇದೀಗ ಒಮ್ಮೆಲೇ ಸುರಿದ ಮಳೆ ಭೀಕರವಾಗಿದೆ. ಇತಿಹಾಸ ಬರೆದಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಕಲ್ಮಕಾರು ಪ್ರದೇಶದಲ್ಲಿ ಆತಂಕದ ವಾತಾವರಣ ಹೆಚ್ಚಿದೆ. ನಿನ್ನೆ ತಡರಾತ್ರಿ ಭಾರೀ ಸ್ಫೋಟದೊಂದಿಗೆ ಭೂಕುಸಿತ ಸಂಭವಿಸಿತ್ತು. ಕಟ್ಟ ಕೊಲ್ಲಮೊಗ್ರದಲ್ಲಿ ಮೂರು ಗಂಟೆಯಲ್ಲಿ 200 ಮಿಮೀಗಿಂತಲೂ ಅಧಿಕ ಮಳೆಯಾಗಿದೆ.
ರಾಜ್ಯದ ವಿವಿಧ ಭಾಗಗಳಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಕರಾವಳಿ, ಮಲೆನಾಡು ಹಾಗೂ…
ಬೇಸಿಗೆ ಬಿಸಿಲು ತೀವ್ರಗೊಳ್ಳುತ್ತಿದ್ದಂತೆ ಜನ, ಜಾನುವಾರುಗಳ ಜೊತೆಗೆ ಪ್ರಾಣಿ-ಪಕ್ಷಿಗಳಿಗೂ ನೀರು ಮತ್ತು ಆಹಾರದ…
ಕೃಷಿ-ಆಹಾರ ವ್ಯವಸ್ಥೆಯಲ್ಲಿ ಮಹಿಳೆಯರ ನಾಯಕತ್ವ ಬಲಪಡಿಸಲು ಜಾಗತಿಕ ಸಮ್ಮೇಳನದಲ್ಲಿ ಮಹತ್ವದ ನಿರ್ಧಾರಗಳು ಕೈಗೊಳ್ಳಲಾಗಿದೆ.…
ಖಾರೀಫ್ ಬೆಳೆಗಾಲಕ್ಕೆ ರೈತರಿಗೆ ಕೊರತೆ ಆಗದಂತೆ ದೇಶದಲ್ಲಿ ರಸಗೊಬ್ಬರ ದಾಸ್ತಾನು ಹೆಚ್ಚಿಸಲಾಗಿದೆ. ಯೂರಿಯಾ…
ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಸಂಜೆ–ರಾತ್ರಿ ಗುಡುಗು ಸಹಿತ ಮಳೆಯ ಮುನ್ಸೂಚನೆ…
ಹವಾಮಾನ ಬದಲಾವಣೆಯಿಂದ ಲಾ ನೀನಾದ ತಂಪು ಪರಿಣಾಮ ದುರ್ಬಲವಾಗಿ ಭಾರತದಲ್ಲಿ ಬೇಸಿಗೆ ಮುಂಚಿತವಾಗಿ…