Advertisement
ಕಿಟಕಿ

ಅರ್ಥವಾಗದ ಮಳೆಯ ನಾಡಿಬಡಿತ…….! | ಅಡುಗೆ ಮನೆಯ ಕಿಟಿಕಿಯಾಚೆಗಿನ ನೋಟ..

Share

ಮಳೆಗಾಲದ ದಿನಗಳೆಂದರೆ ನಮ್ಮ ಕರಾವಳಿ , ಮಲೆನಾಡು, ಹಳ್ಳಿ ಪ್ರದೇಶಗಳಲ್ಲಿ ಒಂದು ರೀತಿಯ ವನವಾಸವೇ. ಹಾಗಂತ ಕಾಡಲ್ಲೇ ಇರುತ್ತೀರಾ ಅಂತ ಕೇಳ ಬೇಡಿ.ಅಂದರೆ, ಸಿಕ್ಕಾಪಟ್ಟೆ ಸುರಿಯುವ ಮಳೆಗೆ ಮನೆಯಿಂದ ಹೊರಬರಲಾಗದ ಸ್ಥಿತಿ.  ಅಷ್ಟೇ…!. ಮಳೆಗಾಲ ಒಬ್ಬೊಬ್ಬರದು ಒಂದೊಂದು ಮಾತಾದರೆ, ಅಡುಗೆ ಮನೆಯ ಒಳಗಿನಿಂದ ವಿಷಯವೇ ಬೇರೆ..!, ಇಲ್ಲೀಗ ಇಲ್ಲಗಳ ವಿಷಯ..!.

ಬೇಸಿಗೆಯಲ್ಲಿ ಮನೆಯ ಹಿತ್ತಿಲಿನಲ್ಲಿ ನಮೂನೆವಾರು ತರಕಾರಿಗಳನ್ನು ಬೆಳೆಸಿ , ನಿತ್ಯ ತಟ್ಟೆ ತುಂಬಾ ಅನ್ನಕ್ಕಿಂತ ಜಾಸ್ತಿ ತರಕಾರಿ ಹೋಳುಗಳನ್ನೇ ಊಟ ಮಾಡುವವರಿಗೆ ದಿಡೀರ್ ಕೈ ಬಾಯಿ ಕಟ್ಟಿದಂತಾಗುತ್ತದೆ. ಸೌತೆಕಾಯಿ , ಕುಂಬಳಕಾಯಿ, ಚೀನಿಕಾಯಿಗಳು ಸ್ವಲ್ಪ ದಿನ ಉಳಿವಂತಹ ತರಕಾರಿಗಳು. ಮನೆಯಲ್ಲಿ ಇವುಗಳಿದ್ದರೆ ಏನೋ ಧೈರ್ಯ. ಈ ಮಳೆಗೆ ಯಾವುದೇ ತರಕಾರಿಗಳೂ ಬೆಳೆಯದು. ಹರಿವೆ , ಬಸಳೆಯಂತೂ ಕೊಳೆತೇ ಹೋಗುವುದು. ಜೋರುಮಳೆಗೆ ಮೊದಲೇ ಗಿಡ ದೊಡ್ಡದಾಗಲಿ ಎಂದು ಸಾಲು ತಯಾರಿಸಿ ಬೀಜ ಹಾಕಿ ಗಿಡ ಮಾಡಿದರೆ ಈ ಜಡಿ ಮಳೆಗೆ ಹುಟ್ಟಿದ ಗಿಡವೂ ಕೊಳೆತೇ ಹೋಯಿತು. ಎಂದಿಗಿಂತ ಮೊದಲೇ ಸುರಿದ ಮಳೆ ಈ ಬಾರಿ ಮಳೆಗಾಲದ ತಯಾರಿಗೂ ಅವಕಾಶ ಕೊಡಲಿಲ್ಲ. ಸಾವಿರಗಟ್ಟಲೆ ಅಲ್ಲವಾದರೂ ನೂರರ ಸಂಖ್ಯೆಯ ಹಪ್ಪಳವೂ ಮಾಡಲಾಗಲಿಲ್ಲ. ಚೆನ್ನಾಗಿ ಬಲಿತ ಬಾಳೆಗೊನೆಗಳು ನೇತು ಕೊಂಡಿದ್ದರೂ ತೆಳ್ಳಗೆ ತುಂಡು ಮಾಡಿ ಬಿಸಿಲಿನಲ್ಲಿ ಒ‍ಣಗಿಸಿ ಡಬ್ಬಿಯಲ್ಲಿ ಹಾಕಿ ಇಡಲಿಲ್ಲ. ಎಲ್ಲಾ ನಮೂನೆಯ ಕಾಡು ಮಾವಿನ ಹಣ್ಣುಗಳಿದ್ದರೂ ಮಾಂಬಳದ ಚಾಪೆ ಹೊರ ತೆಗೆಯಲಾಗಲೇ ಇಲ್ಲ. ಪ್ರತಿ ವರುಷದಂತೆ ಈ ವರ್ಷ ಇಲ್ಲ. ಪ್ರಕೃತಿಯ ಮನಸಲ್ಲೇನು ಓಡುತ್ತಿದೆ ನಮಗರ್ಥವಾಗುತ್ತಿಲ್ಲ. ನಿರಂತರವಾಗಿ ಸುರಿಯುತ್ತಿರುವ ಮಳೆಯ ಹೃದಯದ ಬಡಿತ ಲೆಕ್ಕಕ್ಕೇ ಸಿಗುತ್ತಿಲ್ಲ. ಯಾಕೋ ಗೊತ್ತಿಲ್ಲ , ಬದಲಾಗುತ್ತಿರುವುದು ನಾವು …..ನಮ್ಮ ಬದುಕೋ ? ಪ್ರಕೃತಿಯೋ?

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಕೃಷಿಗೆ ಹವಾಮಾನ ಅಪಾಯ ಹೆಚ್ಚಳ | ರೈತರಿಗೆ ಕಠಿಣ ಕಾಲ ಬರುವ ಸೂಚನೆ ? ದೇಶದ 310 ಜಿಲ್ಲೆಗಳು ಅಪಾಯ ವಲಯದಲ್ಲಿ..!

ದೇಶದ 651 ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ಹೆಚ್ಚು ದುರ್ಬಲವೆಂದು…

2 hours ago

ಹವಾಮಾನ ವರದಿ | 25.03.2026 | ಕರಾವಳಿಯಲ್ಲಿ ಇಂದು ಸಂಜೆ ಮಳೆ ಸಾಧ್ಯತೆ | ಏಪ್ರಿಲ್‌ 5ರವರೆಗೆ ಬೇಸಿಗೆ ಮಳೆ ಸಕ್ರಿಯ!

26.03.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ರಾಜ್ಯದ ವಿವಿಧ…

21 hours ago

ಹವಾಮಾನ ವರದಿ | 24-03-2026 | ಕರ್ನಾಟಕದಲ್ಲಿ ಮತ್ತೆ ಮಳೆ ಅಲರ್ಟ್‌ | ಈ ದಿನದಿಂದ ಮಳೆ ವ್ಯಾಪ್ತಿ ಹೆಚ್ಚಳ ಸಾಧ್ಯತೆ..!

ರಾಜ್ಯದ ಹಲವು ಭಾಗಗಳಲ್ಲಿ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆ ಮುಂದುವರಿದಿದೆ. ಮಾರ್ಚ್‌…

2 days ago

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 4 ಸಾವಿರ ಹುದ್ದೆಗಳು ಖಾಲಿ – ಆರಂಭದಲ್ಲಿ 1 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಂಡಿದೆ. ಮಾನವ–ಆನೆ…

2 days ago

ಇನ್ಸ್ಪೈರ್ ಅವಾರ್ಡ್ ಗೆ ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಯ್ಕೆ

ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು INSPIRE Award ಗೆ ಆಯ್ಕೆಯಾಗಿದ್ದಾರೆ. ವೈಜ್ಞಾನಿಕ…

2 days ago

ನೆಮ್ಮದಿಗಾಗಿ ಬದುಕಿ; ಹಣ-ಅಧಿಕಾರಕ್ಕಾಗಿ ಅಲ್ಲ

ನೆಮ್ಮದಿಗಾಗಿ ಬದುಕಬೇಕು, ಹಣ-ಅಧಿಕಾರಕ್ಕಾಗಿ ಅಲ್ಲ ಎಂದು ರಾಮಚಂದ್ರಾಪುರ ಶ್ರೀಗಳು ಕರೆ ನೀಡಿದರು. ಸಂನ್ಯಾಸ…

3 days ago