ಸುಳ್ಯ ತಾಲೂಕಿನ ಹಲವು ಕಡೆ ಧಾರಾಕಾರ ಮಳೆ ಮುಂದುವರಿದಿದೆ. ಸತತ ಎರಡನೇ ದಿನವೂ 150 ಮಿಮೀ+ ಮಳೆ ಹಲವು ಕಡೆ ಸುರಿದಿದೆ. ಮತ್ತೆ ಧಾರಾಕಾರ ಮಳೆ ಸುರಿಯುತ್ತಿದೆ. ಸತತ ಮೂರನೇ ದಿನವೂ ಉತ್ತಮ ಮಳೆಯ ವಾತಾವರಣ ಕಂಡುಬಂದಿದೆ. ಹವಾಮಾನ ಆಸಕ್ತರು ಹಾಗೂ ಮಳೆ ದಾಖಲು ವ್ಯಾಟ್ಸಪ್ ಗುಂಪಿನ ಮಳೆ ಮಾಹಿತಿ ಪ್ರಕಾರ ಸುಳ್ಯ ತಾಲೂಕಿನ ಹಲವು ಕಡೆ ಅಧಿಕ ಮಳೆಯಾಗಿರುವುದು ದಾಖಲಾಗಿದೆ. ಅದರಲ್ಲೂ ಘಟ್ಟ ಪ್ರದೇಶದ ತಪ್ಪಲು ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗಿರುವುದು ಮಳೆ ದಾಖಲೆ ಮೂಲಕ ತಿಳಿಯುತ್ತದೆ.
ಸುಳ್ಯದ ಕೊಲ್ಲಮೊಗ್ರದಲ್ಲಿ 191 ಮಿಮೀ ಮಳೆಯಾದರೆ, ಬೆಳ್ಳಾರೆ 98 ಮಿಮೀ, ಕಮಿಲ 200 ಮಿಮೀ, ಸುಳ್ಯ ನಗರದಲ್ಲಿ74 ಮಿಮೀ, ಕಡಬ ಕೋಡಿಂಬಾಳ 139 ಮಿಮೀ, ಬಂಟ್ವಾಳ ಪುಣಚ 50 ಮಿಮೀ, ಕೊಳ್ತಿಗೆ 56 ಮಿಮೀ , ಮಂಚಿಯಲ್ಲಿ 98 ಮಿಮೀ, ಪುತ್ತೂರು ಬಂಗಾರಡ್ಕ 115 ಮಿಮೀ, ಪುತ್ತೂರು ಬಲ್ನಾಡು 80 ಮಿಮೀ, ಪುತ್ತೂರು ಸರ್ವೆಯಲ್ಲಿ 116 ಮಿಮೀ ಮಳೆ ದಾಖಲಾಗಿದೆ. ಕಾಸರಗೋಡು ಕಲ್ಲಕಟ್ಟ 74 ಮಿಮೀ, ರಾಮಕುಂಜ 88 ಮಿಮೀ, ಮರ್ಕಂಜ 120 ಮಿಮೀ, ಹರಿಹರ 181 ಮಿಮೀ, ದೊಡ್ಡತೋಟ 105 ಮಿಮೀ, ಕಲ್ಲಾಜೆ 222 ಮಿಮೀ, ಉಬರಡ್ಕ 92 ಮಿಮೀ, , ಬಂಟ್ವಾಳ ಕೆಲಿಂಜ 136 ಮಿಮೀ, ಬಳ್ಪ 180 ಮಿಮೀ, ಮೆಟ್ಟಿನಡ್ಕ 232 ಮಿಮೀ, ಪಾಣಾಜೆ 48 ಮಿಮೀ, ಎಡಮಂಗಲ 179 ಮಿಮೀ, ಸುಬ್ರಹ್ಮಣ್ಯ 170 ಮಿಮೀ, ಬಾಳಿಲ 170 ಮಿಮೀ, ನಡುಗಲ್ಲು 225 ಮಿಮೀ, ಮುರುಳ್ಯ ಶೇರ 168 ಮಿಮೀ, ಮಡಿಕೇರಿ ಚೆಂಬು 224 ಮಿಮೀ ,ಬೆಳ್ತಂಗಡಿ 106 ಮಿಮೀ, ಕಲ್ಮಡ್ಕ 148 ಮಿಮೀ, ಮಡಪ್ಪಾಡಿ 138 ಮಿಮೀ, ಕಂದ್ರಪ್ಪಾಡಿ ವಾಲ್ತಾಜೆ 228 ಮಿಮೀ, ಉಪ್ಪಿನಂಗಡಿ 117 ಮಿಮೀ, ಕಾರ್ಕಳ ಬಜಗೋಳಿಯಲ್ಲಿ 111 ಮಿಮೀ ಮಳೆಯಾಗಿದೆ.
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…