ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು(Mansoon) ಚುರುಗೊಂಡಿದ್ದು, ವರುಣ(Rain) ಅಬ್ಬರಿಸುತ್ತಿದ್ದಾನೆ. ಹಲವು ಕಡೆ ಸಾಕಷ್ಟು ಅವಾಂತರಗಳು ಉಂಟಾಗುತ್ತಿವೆ. ಕಾರವಾರದ ಗೋವಾ-ಮಂಗಳೂರು(Goa-Mangaluru) ಹೆದ್ದಾರಿಯಲ್ಲಿ ಮತ್ತೆ ಕಲ್ಲುಬಂಡೆ ಕುಸಿದಿದೆ. ಹೊನ್ನಾವರದ ಕರ್ನಲ್ ಹಿಲ್ ಬಳಿ ಗುಡ್ಡ ಕುಸಿದು ಹೆದ್ದಾರಿ ಸಂಚಾರಕ್ಕೆ ಅಡ್ಡಿಯಾಗಿದೆ. ಇಡೂರಿನಲ್ಲಿ ಗುಡ್ಡದ ನೀರು ಹರಿದು ಹೆದ್ದಾರಿ ಹಾಗೂ ಮನೆಗಳು ಜಲಾವೃತವಾಗಿದೆ. ಅರೆಬೈಲ್‌ನಲ್ಲಿ ಹೈವೇ ಮೇಲೆ ಮರ ಬಿದ್ದಿದೆ. ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆ ಕಾರಣ ನದಿಗಳೆಲ್ಲಾ ತುಂಬಿ ಹರಿದು, ದೊಡ್ಡ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಾಂತ (Dakshina Kannada) ಮಳೆಯ (Rain) ಅಬ್ಬರ ಮುಂದುವರಿದಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ವಿವಿದೆಡೆ ಭೂ ಕುಸಿತ, ಗುಡ್ಡ ಕುಸಿತ ಪ್ರಕರಣಗಳು ಹೆಚ್ಚಾಗಿದೆ. ಹೀಗಾಗಿ ಇನ್ನಷ್ಟು ಪ್ರಾಕೃತಿಕ ವಿಕೋಪ ಸಂಭವಿಸುವ ಆತಂಕದ ಹಿನ್ನೆಲೆಯಲ್ಲಿ ಜಿಲ್ಲಾ ವ್ಯಾಪ್ತಿಯ ಗಿರಿತಾಣ, ಶಿಖರಗಳಲ್ಲಿ ಚಾರಣಕ್ಕೆ ಪ್ರವಾಸಿಗರು ತೆರಳದಂತೆ ನಿಷೇಧ ಹೇರಲಾಗಿದೆ. ನದಿ ಹಾಗೂ ಸಮುದ್ರ ತಟದಲ್ಲಿ ಈಜು ಮೋಜು-ಮಸ್ತಿ, ನೀರಿಗೆ ಇಳಿಯೋದು, ಮೀನು ಹಿಡಿಯುವುದು ಇತ್ಯಾದಿ ಚಟುವಟಿಕೆಗಳಿಗೂ ನಿಷೇಧ ಹೇರಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ
ಕೊಡಗಿನಲ್ಲಿಯೂ ಮಳೆಯಾಗುತ್ತಿದ್ದು, ಚಿಕ್ಲಿಹೊಳೆ ಡ್ಯಾಂ ತುಂಬಿ ಹರಿದಿದೆ. ಶಿರಾಡಿಘಾಟ್‌ನ ಹಲವೆಡೆ ನಿರ್ಮಾಣದ ಹಂತದ ರಸ್ತೆ ಕುಸಿಯುತ್ತಿರುವುದು ಆತಂಕ ಮೂಡಿಸಿದೆ. ಅಫಜಲಪುರ ಬಳಿ ಸೇತುವೆ ಜಲಾವೃತವಾಗಿದೆ. ಮಹಾರಾಷ್ಟ್ರದಲ್ಲಿ ಭಾರೀ ಮಳೆ ಕಾರಣ ಚಿಕ್ಕೋಡಿಯ ನಾಲ್ಕು ಸೇತುವೆ ಮುಳುಗಡೆಯಾಗಿವೆ. ಖಾನಾಪುರದ ಏಳು ಫಾಲ್ಸ್ ನೋಡಲು ಅವಕಾಶ ನೀಡದಿರುವುದಕ್ಕೆ ಪ್ರವಾಸಿಗರಿಂದ ಆಕ್ರೋಶ ವ್ಯಕ್ತವಾಗಿವೆ. ಗೋಕಾಕ್ ಫಾಲ್ಸ್ ಬಳಿ ಸೂಕ್ತ ಭದ್ರತೆ ಕೈಗೊಳ್ಳದ ಕಾರಣ ಪ್ರವಾಸಿಗರು ಬಂಡೆಗಲ್ಲುಗಳ ಅಂಚಿನಲ್ಲಿ ಸೆಲ್ಫಿ ಹುಚ್ಚಾಟ ನಡೆಸಿದ್ದಾರೆ.
ರಾಜ್ಯದ ಡ್ಯಾಂಗಳ ನೀರಿನ ಲೆಕ್ಕ
ಕೆಎಆರ್‌ಎಸ್ ಜಲಾಶಯದ ಒಟ್ಟು ಸಾಮರ್ಥ್ಯ 49.45 ಟಿಎಂಸಿ, ಇಂದಿನ ಮಟ್ಟ 24.42 ಟಿಎಂಸಿ ಇದ್ದು, ಒಳಹರಿವು 11,027 ಕ್ಯೂಸೆಕ್ ಹಾಗೂ ಹೊರಹರಿವು 562 ಕ್ಯೂಸೆಕ್ ಇದೆ. ಕಬಿನಿ ಒಟ್ಟು ಸಾಮರ್ಥ್ಯ 19.52 ಟಿಎಂಸಿ, ಇಂದಿನ ಮಟ್ಟ 17.98 ಟಿಎಂಸಿ ಇದೆ. ಒಳಹರಿವು 5,039 ಕ್ಯೂಸೆಕ್ ಹಾಗೂ ಹೊರಹರಿವು 3250 ಕ್ಯೂಸೆಕ್ ಇದೆ.
ಹೇಮಾವತಿ ಒಟ್ಟು ಸಾಮರ್ಥ್ಯ 37.10 ಟಿಎಂಸಿ, ಇಂದಿನ ಮಟ್ಟ 17.60 ಟಿಎಂಸಿ ಇದೆ. ಒಳಹರಿವು 7,796 ಕ್ಯೂಸೆಕ್ ಹಾಗೂ ಒಳಹರಿವು 250 ಕ್ಯೂಸೆಕ್ ಇದೆ. ಹಾರಂಗಿ ಒಟ್ಟು ಸಾಮರ್ಥ್ಯ 8.50 ಟಿಎಂಸಿ, ಇಂದಿನ ಮಟ್ಟ 5.46 ಟಿಎಂಸಿ ಇದೆ. ಒಳಹರಿವು 2,472 ಕ್ಯೂಸೆಕ್ ಹಾಗೂ ಒಳಹರಿವು 200 ಕ್ಯೂಸೆಕ್ ಇದೆ. ತುಂಗಭದ್ರಾ ಒಟ್ಟು ಸಾಮರ್ಥ್ಯ 105.79 ಟಿಎಂಸಿ, ಇಂದಿನ ಮಟ್ಟ 18.24 ಟಿಎಂಸಿ ಇದೆ. ಒಳಹರಿವು 50,715 ಕ್ಯೂಸೆಕ್ ಹಾಗೂ ಹೊರಹರಿವು 391 ಕ್ಯೂಸೆಕ್ ಇದೆ. ಲಿಂಗನಮಕ್ಕಿ ಜಲಾಶಯದ ಒಟ್ಟು ಸಾಮರ್ಥ್ಯ 151.75 ಟಿಎಂಸಿ, ಇಂದಿನ ಮಟ್ಟ 35.41 ಟಿಎಂಸಿ ಇದೆ. ಒಳಹರಿವು 29,044 ಕ್ಯೂಸೆಕ್ ಹಾಗೂ ಹೊರಹರಿವು 1570 ಕ್ಯೂಸೆಕ್ ಇದೆ. ಸೂಪಾ ಜಲಾಶಯದ ಒಟ್ಟು ಸಾಮರ್ಥ್ಯ 145.33 ಟಿಎಂಸಿ, ಇಂದಿನ ಮಟ್ಟ 42.81 ಟಿಎಂಸಿ ಇದೆ. ಒಳಹರಿವು 28,597 ಕ್ಯೂಸೆಕ್ ಹಾಗೂ ಹೊರಹರಿವು 500 ಕ್ಯೂಸೆಕ್ ಇದೆ. ಆಲಮಟ್ಟಿ ಡ್ಯಾಂನ ಒಟ್ಟು ಸಾಮರ್ಥ್ಯ 123.08 ಟಿಎಂಸಿ, ಇಂದಿನ ಮಟ್ಟ 59.39 ಟಿಎಂಸಿ ಇದೆ. ಒಳಹರಿವು 59,306 ಕ್ಯೂಸೆಕ್ ಹಾಗೂ ಹೊರಹರಿವು 430 ಕ್ಯೂಸೆಕ್ ಇದೆ.
ಈಗಿನಂತೆ ಮುಂದಿನ 10 ದಿನಗಳವರೆಗೆ ಸಾಮಾನ್ಯ ಮಳೆ ಮುಂದುವರಿಯುವ ಲಕ್ಷಣಗಳಿದ್ದು, ಜುಲೈ 16ರಿಂದ…
ಮುಂದಿನ ಏಳು ದಿನಗಳ ಕಾಲ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಕೆಲವು ಕಡೆ ಭಾರೀ…
ಇತಿಹಾಸದಲ್ಲಿ ಮೊದಲ ಬಾರಿಗೆ ಕೇರಳ ಕೊಬ್ಬರಿ ಆಮದು ಮಾಡಿಕೊಳ್ಳುವ ಸಾಧ್ಯತೆ ಇದೆ.ತೆಂಗಿನಕಾಯಿ ಉತ್ಪಾದನೆಯಲ್ಲಿ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ದೇಶದಲ್ಲಿ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು ಹೆಚ್ಚು ಪರಿಸರ…
ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಆಧುನಿಕ ಮೂಲಭೂತ…