ಕಳೆದ 24 ಗಂಟೆಯಲ್ಲಿ ಮಳೆಯ ಅಬ್ಬರ ಕಡಿಮೆಯಾಗಿತ್ತು. ರೆಡ್ ಅಲರ್ಟ್ ನಡುವೆ ದ ಕ ಜಿಲ್ಲೆಯ ಹಲವು ಕಡೆಗಳಲ್ಲಿ 60 ಮಿಮೀ ಗಿಂತ ಅಧಿಕ ಮಳೆಯಾಗಿದೆ. ಚೆಂಬು ಪ್ರದೇಶದಲ್ಲಿ ಸತತವಾಗಿ 100 ಮಿಮೀಗಿಂತ ಹೆಚ್ಚು ಮಳೆಯಾಗುತ್ತಿದ್ದು ಕಳೆದ 24 ಗಂಟೆಯಲ್ಲಿ 119 ಮಿಮೀ ಮಳೆಯಾದರೆ ಸುಳ್ಯದಲ್ಲಿ 93 ಮಿಮೀ ಮಳೆಯಾಗಿದೆ.
ಎಲ್ಲೆಲ್ಲೆ ಎಷ್ಟು ಮಳೆ ?
- ಸುಳ್ಯದ ಕಲ್ಲಾಜೆಯಲ್ಲಿ 70 ಮಿಮೀ,
- ಮಡಪ್ಪಾಡಿ 75 ಮಿಮೀ,
- ಗುತ್ತಿಗಾರು-ಮೆಟ್ಟಿನಡ್ಕ 61 ಮಿಮೀ,
- ಕಮಿಲ 60 ಮಿಮೀ ,
- ಬಾಳಿಲ 84 ಮಿಮೀ ,
- ಕೊಲ್ಲಮೊಗ್ರ 59ಮಿಮೀ,
- ಸುಬ್ರಹ್ಮಣ್ಯ 57 ಮಿಮೀ ,
- ಕಲ್ಮಡ್ಕ 70 ಮಿಮೀ,
- ಬಳ್ಪ 70 ಮಿಮೀ,
- ಬೆಳ್ಳಾರೆ 80 ಮಿಮೀ ,
- ಬಂಟ್ವಾಳ 88 ಮಿಮೀ,
- ಬೆಳ್ತಂಗಡಿ 134 ಮಿಮೀ,
- ಪುತ್ತೂರು ಮುಂಡೂರು 95 ಮಿಮೀ ,
- ಕೋಡಿಂಬಾಳ 45 ಮಿಮೀ,
- ಮಂಗಳೂರು 82 ಮಿಮೀ,
- ಕಾರ್ಕಳದಲ್ಲಿ 190 ಮಿಮೀ ಮಳೆಯಾಗಿದೆ.
ಈ ನಡುವೆ ಮತ್ತೆ ಎರಡು ದಿನ ರೆಡ್ ಎಲರ್ಟ್ ಮುಂದುವರಿದಿದೆ. ಮುಂದಿನ 24 ಗಂಟೆಗಳ ಕಾಲ ನಿರಂತರ ಮಳೆ ಸುರಿಯುವ ಸಾಧ್ಯತೆ ಇದೆ. ಮೋಡಗಳ ಚಲನೆ ಹಾಗೂ ನಿಧಾನಗತಿಯಲ್ಲಿದ್ದು ಇಂದು ಮಧ್ಯಾಹ್ನ ನಂತರ ಕೆಲವು ಕಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಜು.12 ರ ನಂತರ ಮಳೆ ಪ್ರಮಾಣ ಕಡಿಮೆಯಾಗುವ ನಿರೀಕ್ಷೆ ಇದೆ.
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel