ಭಾರೀ ಮಳೆಗೆ ಎಲ್ಲೆಡೆಯೂ ಕೆಲಸಗಳು ಸ್ಥಗಿತಗೊಳ್ಳುತ್ತವೆ. ಮನೆಯಲ್ಲೇ ಕುಳಿತಿರುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಟಿ ವಿ ಸೇರಿದಂತೆ ಮೊಬೈಲ್ ವೀಕ್ಷಣೆ ಹೆಚ್ಚಿರುತ್ತದೆ. ಆದರೆ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ವಿದ್ಯುತ್ ಇಲಾಖೆಯ ಪವರ್ ಮ್ಯಾನ್ ತಂಡದ ಕೆಲಸಗಳಿಗೆ ಸಲಾಂ ಹೇಳಬೇಕಿದೆ.
ಮಳೆಯ ನಡುವೆ ಏಣಿಯ ಮೂಲಕ ಕಂಬ ಏರಿ ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿರುತ್ತಾರೆ. ಅದರಲ್ಲೂ ಈಗಾಗಲೇ ಭೂಕಂಪನ ಹಾಗೂ ಭೂಕುಸಿತದ ಭಯದಿಂದ ಇರುವ ಊರಾದ ಸಂಪಾಜೆ – ಚೆಂಬು ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವುದೇ ಸಾಹಸದ ಕೆಲಸ. ಗ್ರಾಮೀಣ ಭಾಗದಲ್ಲಿ ಗಾಳಿ ಮಳೆಗೆ ಮರ ಬೀಳುವುದು , ಮರದ ಗೆಲ್ಲು ಬೀಳುವುದು ಎಚ್ ಟಿ ತಂತಿ ಸಮಸ್ಯೆಯಾಗುವುದು ಇದ್ದೇ ಇರುತ್ತದೆ. ಈ ಸಮಯದಲ್ಲಿ ಮಳೆ-ಗಾಳಿ ಎಂದು ಲೆಕ್ಕಿಸದೆ ಪವರ್ ಮ್ಯಾನ್ ಸ್ಥಳಕ್ಕೆ ತೆರಳಿ ವಿದ್ಯುತ್ ಸುಸ್ಥಿತಿಗೆ ತರಲು ಪ್ರಯತ್ನ ಪಡುತ್ತಿರುತ್ತಾರೆ. ಇಂತಹ ಕೆಲಸಗಳಿಂದಲೇ ಪ್ರತೀ ಮನೆಗೂ ವಿದ್ಯುತ್ ಸಂಪರ್ಕ ಸಾಧ್ಯವಾಗುತ್ತಿದೆ.
ಚೆಂಬು ಪ್ರದೇಶದಲ್ಲಿನ ಪವರ್ ಮ್ಯಾನ್ ಬಸವರಾಜ್ ಅವರ ಕೆಲಸವನ್ನು ಚೆಂಬು ಪ್ರದೇಶದ ಆನಂದ ಅವರು ವಿಡಿಯೋ ಮಾಡಿ ಕಳುಹಿಸಿದ್ದಾರೆ.
https://youtu.be/PgODhBnoUso?si=CtTWIV_6u7GnfVGw
ಕರ್ನಾಟಕದಲ್ಲಿ ಅ.15ರಿಂದ ಹಿಂಗಾರು ಮಳೆ ಆರಂಭವಾಗುವ ಲಕ್ಷಣಗಳಿದ್ದು, ಅ.16ರಿಂದ ಕರಾವಳಿ ಹಾಗೂ ಉತ್ತರ…
ಕೊಡಗಿನ ಸಂಪಾಜೆಯಿಂದ ಮಂಗಳೂರಿಗೆ ಸ್ವಚ್ಛತಾ ದಂಡಯಾತ್ರೆ ಕೈಗೊಂಡಿರುವ ನಾಗರಾಜ್ ಬಜಾಲ್ ಅವರು ಇದುವರೆಗಿನ…
ಸುಳ್ಯದ ಎಪಿಎಂಸಿ ರಸ್ತೆಯ ಆಶೀರ್ವಾದ್ ಕಟ್ಟಡದ ಮೊದಲ ಮಹಡಿಯಲ್ಲಿ ಆರಂಭವಾಗುತ್ತಿರುವ ಪ್ರಶಾಂತಿ ಡೆಂಟಲ್…
ರಾಜ್ಯದಲ್ಲಿ ಅಕ್ಟೋಬರ್ 14ರವರೆಗೆ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ.…