ರಕ್ಷಾಬಂಧನ – ಗ್ರಾಮೀಣ ಅಭಿವೃದ್ದಿಯ ದೀಕ್ಷೆ | ಮಂಡೆಕೋಲಿನಲ್ಲಿ ವಿನೂತನ ರೀತಿಯಲ್ಲಿ ರಕ್ಷಾಬಂಧನ |

August 23, 2021
11:11 AM

ರಕ್ಷಾಬಂಧನ ಎನ್ನುವುದು  ಪ್ರೀತಿಯ ಸಂಕೇತವೂ ಹೌದು ರಕ್ಷಣೆಯ ಸಂಕೇತವೂ ಹೌದು. ಹಿಂದೆಲ್ಲಾ ಯುದ್ಧಕ್ಕೆ ತೆರಳುವ ವೇಳೆ ರಕ್ಷಣೆ ಹಾಗೂ ಗೆಲುವಿಗಾಗಿ ರಕ್ಷೆ ತೊಟ್ಟು ಮುನ್ನುಗ್ಗಿದ ಬಗ್ಗೆಯೂ ಪುರಾಣಗಳಲ್ಲಿ  ತಿಳಿದರೆ, ಈಚೆಗೆ ಪ್ರೀತಿ, ಸ್ನೇಹ, ಸಹೋದರತ್ವದ ಉದ್ದೇಶದಿಂದಲೂ ರಕ್ಷಾಬಂಧನ ಆಚರಿಸಲಾಗುತ್ತಿದೆ. ಆದರೆ ಸುಳ್ಯ ತಾಲೂಕಿನ ಮಂಡೆಕೋಲಿನಲ್ಲಿ ರಕ್ಷಾ ಬಂಧನವನ್ನು  ರಸ್ತೆ ದುರಸ್ತಿಯ ಜೊತೆಗೆ ಆಚರಿಸಿದರು. 

 

ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಬೊಳುಗಲ್ಲು – ಬೇಂಗತ್ತಮಲೆ- ಚಾಕೊಟೆ ರಸ್ತೆಯನ್ನು ಅಲ್ಲಿನ ಗ್ರಾಮ ಪಂಚಾಯತ್‌ ಹಾಗೂ ಸ್ಥಳೀಯ  ಗ್ರಾ ಪಂ ಸದಸ್ಯರ ಸಹಕಾರದೊಂದಿಗೆ ಆ ಪ್ರದೇಶದ ಜನರ ಮೂಲಕ ದುರಸ್ತಿ ಮಾಡಲಾಯಿತು. ಅದರ ಜೊತೆಗೆ ರಕ್ಷಾಬಂಧನವನ್ನು ರಸ್ತೆಯಲ್ಲಿಯೇ ಕುಳಿತು  ಆಚರಿಸಲಾಯಿತು. ಈ ಮೂಲಕ ರಸ್ತೆಯ ರಕ್ಷಣೆಯೂ ನಮ್ಮ ಜವಾಬ್ದಾರಿ ಎಂಬುದನ್ನು ಈ ಜನರು ಸಾಬೀತು ಮಾಡಿದರು. ಇದು ನಾಡಿನೆಲ್ಲೆಡೆಗೆ ಧನಾತ್ಮಕ ಸಂದೇಶ ಬೀರಿತು.

ಅನೇಕ ಸಮಯಗಳಿಂದ ಈ ಭಾಗದ ಜನರು  ಈ ಗ್ರಾಮೀಣ ರಸ್ತೆ ದುರಸ್ತಿಯ ಬೇಡಿಕೆ ಇರಿಸಿದ್ದರು. ಅನುದಾನಗಳ ಕೊರತೆಯಿಂದ ಸಂಪೂರ್ಣ ದುರಸ್ತಿ ಆಗಿರಲಿಲ್ಲ. ಸಣ್ಣಪುಟ್ಟ ಕಾಂಕ್ರೀಟ್‌ ಕಾಮಗಾರಿಗಳಿಂದಲೇ ತೃಪ್ತಿ ಹೊಂದಬೇಕಾಗಿತ್ತು. ಹೀಗಾಗಿ ತಮ್ಮ ರಸ್ತೆಯ ರಕ್ಷಣೆಯನ್ನು  ಗ್ರಾಪಂ ಸಹಕಾರದ ಮೂಲಕ ಈ ಬಾರಿ ಅಲ್ಲಿನ ಜನರೇ ವಹಿಸಿಕೊಂಡರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಗ್ರಾಮೀಣ ಭಾರತದ ಆದಾಯಕ್ಕೆ ಹಿನ್ನಡೆ – ಕಳೆದ ವರ್ಷ ಅರ್ಧದಷ್ಟು ಕುಟುಂಬಗಳ ಆದಾಯದಲ್ಲಿ ಏರಿಕೆಯಾಗಿಲ್ಲ
August 4, 2026
7:45 AM
by: ದ ರೂರಲ್ ಮಿರರ್.ಕಾಂ
ಮುಂದುವರಿದ ಮಳೆ ಅಬ್ಬರ : ಆಗಸ್ಟ್‌ 4ರಂದು ದ ಕ -ಉಡುಪಿ-ಕಾಸರಗೋಡು ಜಿಲ್ಲೆಯ ಕೆಲವು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ
August 3, 2026
10:48 PM
by: ದ ರೂರಲ್ ಮಿರರ್.ಕಾಂ
ಯಡಕುಮೇರಿ ಹಳಿ ದುರಸ್ತಿ ಪೂರ್ಣ : ಮಂಗಳೂರು–ಬೆಂಗಳೂರು ರೈಲು ರೈಲು ಸಂಚಾರ ಪುನರಾರಂಭ
August 3, 2026
10:24 PM
by: ದ ರೂರಲ್ ಮಿರರ್.ಕಾಂ
ಜಾಗತಿಕ ತಾಪಮಾನ ಏರಿಕೆ ಎಚ್ಚರಿಕೆ – 1 ಡಿಗ್ರಿ ತಾಪಮಾನ ಹೆಚ್ಚಾದರೆ ಭಾರತದ ಭತ್ತದ ಇಳುವರಿ 6.6% ಕುಸಿಯುವ ಸಾಧ್ಯತೆ
August 3, 2026
9:25 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror