ರಾಮಕಥಾ ಸಮಾರೋಪ | ರಾಮಸೇತು ವೈಜ್ಞಾನಿಕ ಸತ್ಯ – ರಾಘವೇಶ್ವರ ಶ್ರೀ

Advertisement
ರಾಮಸೇತು ವೈಜ್ಞಾನಿಕ ಸತ್ಯ. ಇದು ಕೇವಲ ಕಾಲ್ಪನಿಕವಲ್ಲ. ವಾಲ್ಮೀಕಿ ರಾಮಾಯಣದಲ್ಲಿ ವರ್ಣನೆಯಾದ ಅದ್ಭುತ ಸಾಗರಸೇತು ಆಧುನಿಕ ವಿಜ್ಞಾನದ ವಿಶ್ಲೇಷಣೆಯಲ್ಲೂ ಅಂತೆಯೇ ಇದೆ ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಅವರು ಮೂರೂರು ರಾಮಲೀಲಾ ಮೈದಾನದಲ್ಲಿ ನಡೆದ ರಾಮಕಥೆ ಸಮಾರೋಪದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, “ತಳದಲ್ಲಿ ಮರ, ಎರಡನೇ ಸ್ತರದಲ್ಲಿ ಬಂಡೆ ಮತ್ತು ಮೇಲೆ ಮರಳಿನಿಂದ ಸಾಗರಸೇತು ನಿರ್ಮಾಣವಾಗಿದೆ ಎಂಬ ವಿವರಣೆ ವಾಲ್ಮೀಕಿ ರಾಮಾಯಣದಲ್ಲಿ ಬರುತ್ತದೆ. ವಿಶ್ವದ ಏಕೈಕ ಸಾಗರಸೇತುವನ್ನು ವಿಜ್ಞಾನದ ವಿಶ್ಲೇಷಣೆಗೆ ಒಳಪಡಿಸಿದಾಗ ಕೂಡಾ ಇಂದೇ ಅಂಶಗಳು ದೃಢಪಟ್ಟಿವೆ” ಎಂದು ಪ್ರತಿಪಾದಿಸಿದರು.
ರಾಮಾಯಣ ವಿವರಣೆ ಪ್ರಕಾರ ಸಾಗರ ಸೇತು ನೂರು ಯೋಜನ ಉದ್ದ ಹತ್ತು ಯೋಜನ ಅಗಲ ಇದೆ. ಅಂದರೆ ಇದು 35 ಕಿಲೋಮೀಟರ್ ಉದ್ದ. 3.5 ಕಿಲೋಮೀಟರ್ ಅಗಲ ಇದೆ. ವೈಜ್ಞಾನಿಕ ಪರಿಭಾಷೆಗೆ ತಕ್ಕಂತೆ ಅನುಗುಣವಾಗಿ ಇದೆ. ಆಧುನಿಕ ವಿಜ್ಞಾನ ಕೂಡಾ ಸೇತುವೆಯ ಪರಿಮಾಣ, ಉದ್ದ- ಅಗಲದ ಅನುಪಾತ ಇದೇ ಎನ್ನುವುದನ್ನು ದೃಢಪಡಿಸುತ್ತದೆ ಎಂದರು.
ರಾಮಾಯಣದಲ್ಲಿ ಇರುವ ವಿವರಣೆಯಂತೆ ಅದೇ ಜಾತಿಯ ವೃಕ್ಷಗಳನ್ನೂ ಸೇತುವೆ ನಿರ್ಮಾಣಕ್ಕೆ ಬಳಸಲಾಗಿದೆ ಎನ್ನುವುದನ್ನು ವಿಜ್ಞಾನಿಗಳು ಕೂಡಾ ಒಪ್ಪಿದ್ದಾರೆ. ನಾಸಾ ಚಿತ್ರ ಕೂಡಾ ಇದನ್ನು ದೃಢಪಡಿಸಿದೆ. ಅನೇಕ ಚೌಕಾಕಾರದ ನಿರ್ಮಾಣಗಳಿದ್ದು, ಇವು ಪ್ರಾಕೃತಿಕವಾಗಿ ನಿರ್ಮಾಣವಾಗಲು ಸಾಧ್ಯವಿಲ್ಲ. ಇದು ನೆಲ ಸೇತು. ರಾಮಸೇತು. ಆಡಮ್ಸ್ ಬ್ರಿಡ್ಜ್ ಅಲ್ಲ; ಅಥವಾ ಅಲಂ ಸೇತು ಅಲ್ಲ ಎಂದು ಮಾರ್ಮಿಕವಾಗಿ ನುಡಿದರು.
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement
Advertisement

Advertisement

Be the first to comment on "ರಾಮಕಥಾ ಸಮಾರೋಪ | ರಾಮಸೇತು ವೈಜ್ಞಾನಿಕ ಸತ್ಯ – ರಾಘವೇಶ್ವರ ಶ್ರೀ"

Leave a comment

Your email address will not be published.


*