ದೇಶದಲ್ಲಿ ಈಗ ಚೆಸ್ ಪಂದ್ಯಾಟದ ಬಗ್ಗೆ ಆಸಕ್ತಿ ಬೆಳೆಯುತ್ತಿದೆ. ಸಾಕಷ್ಟು ಮಂದು ಚೆಸ್ ಬಗ್ಗೆ ಮಾತನಾಡುತ್ತಿದ್ದಾರೆ. ಭಾರತದಲ್ಲಿ ಕೂಡಾ ಸಾಕಷ್ಟು ಚೆಸ್ ಪ್ರತಿಭೆಗಳು ಇದ್ದಾರೆ. ಈಚೆಗೆ ಪ್ರಜ್ಞಾನಂದ, ಗುಕೇಶ್ ಮೊದಲಾದ ಹೆಸರುಗಳು ಈಗ ಹೆಚ್ಚು ಗಮನ ಸೆಳೆಯುತ್ತಿದೆ. 2024 ರ 26 ನೇ ಏಷ್ಯನ್ ಯೂತ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವು ಮೂರು ಚಿನ್ನ ಮತ್ತು ಒಂದು ಬೆಳ್ಳಿ ಪದಕವನ್ನೂ ಗೆದ್ದಿದೆ. ಅಂದರೆ ಮಕ್ಕಳ ಮಟ್ಟದಲ್ಲೂ ಚೆಸ್ ಬೆಳೆಯುತ್ತಿದೆ.…….ಮುಂದೆ ಓದಿ…..
ಚೆಸ್ ಆಟ ಅನ್ನೋದು ಒಂದು ಮೋಜಿನ ಮಿದುಳಿನ ವ್ಯಾಯಾಮ. ನಾವು ಮಗುವಿನೊಂದಿಗೆ ಚೆಸ್ ಆಡುವುದರಿಂದ ಅವರನ್ನು ಚುರುಕಾಗಿಸಬಹುದು ಹಾಗೆಯೇ ಸೃಜನಶೀಲರನ್ನಾಗಿ ಕೂಡ ಮಾಡಬಹುದು. ಕೆಲವು ಅಧ್ಯಯನಗಳ ಪ್ರಕಾರ ಚೆಸ್ ಆಟವು ಮಕ್ಕಳಲ್ಲಿ ಅವರ ಐಕ್ಯೂ ಮಟ್ಟವನ್ನು ಮತ್ತು ಅವರ ಸೃಜನಶೀಲತೆಯನ್ನು ಹೆಚ್ಚಿಸುತ್ತದೆ ಎಂಬುದು ದೃಢಪಟ್ಟಿದೆ. ವಯಸ್ಸು ಏನೇ ಇರಲಿ, ಚೆಸ್ ಆಡುವುದು ಖಂಡಿತವಾಗಿಯೂ ನಿಮ್ಮ ಸ್ವಾಭಿಮಾನ ಬೆಳೆಸಲು ನೆರವಾಗುತ್ತದೆ. ನೀವು ಆಡುವಾಗ, ಸೋಲು ಗೆಲುವು ಎಲ್ಲವೂ ಆಗಿರುತ್ತದೆ. ವ್ಯಕ್ತಿಗತ ಆಟವಾದ ಕಾರಣ, ನೀವು ಸೋತಾಗ, ನೀವು ಏನು ತಪ್ಪಾಗಿದೆ ಎಂಬುದನ್ನು ವಿಶ್ಲೇಷಿಸಲು ಕುಳಿತುಕೊಳ್ಳಬೇಕು. ಪದೇಪದೆ ಆಡುವುದು, ವಿಶ್ಲೇಷಿಸುವುದು ಚೆಸ್ ಬೋರ್ಡ್ ಆಚೆಗಿನ ಜಗತ್ತಿಗೆ ನಿಮ್ಮ ಮಾನಸಿಕ ಶಕ್ತಿ ಮತ್ತು ಆತ್ಮ ವಿಶ್ವಾಸದ ಮಟ್ಟವನ್ನು ಹೆಚ್ಚಿಸುತ್ತದೆ.…….ಮುಂದೆ ಓದಿ…..
ಹೀಗಾಗಿ ಚೆಸ್ ಈಗ ಜನಪ್ರಿಯವಾಗುತ್ತಿರುವ ಆಟ. ದಕ್ಷಿಣ ಕನ್ನಡ ಜಿಲ್ಲೆಯೂ ಅದಕ್ಕೆ ಹೊರತಾಗಿಲ್ಲ. ದ ಕ ಜಿಲ್ಲೆಯಲ್ಲೂ ಪಂದ್ಯಾಟಗಳು ನಡೆಯುತ್ತದೆ. ಇಲ್ಲಿನ ದ ಕ ಜಿಲ್ಲಾ ಚೆಸ್ ಎಸೋಸಿಯೇಶನ್ ಅಧ್ಯಕ್ಷ ರಮೇಶ್ ಕೋಟೆ ಅವರ ಜೊತೆ ಈಚೆಗೆ ನಡೆಸಿದ ಮಾತುಕತೆಯ ಭಾಗ ಇಲ್ಲಿದೆ…
In a recent Interview with Ramesh Kote, President of the District Chess Association, it is evident that chess is experiencing significant growth within the district. Kote enthusiastically shared that the association has planned multiple tournaments to foster competitive spirit and engagement among players of all ages. His vision is to not only elevate the standard of chess in the area but also to create a vibrant community around the game, encouraging more individuals to participate and enhance their skills.