ಭಾರತವು ಚೆಸ್‌ ಹಬ್‌ ಆಗುತ್ತಿದೆ | ದೇಶದ ಗ್ರಾಮೀಣ ಭಾಗದ ಚೆಸ್‌ ಪ್ರತಿಭೆಗಳಿಗೆ ಬೆಳಕು ಚೆಲ್ಲುವ ಕೆಲಸ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ದೇಶದಲ್ಲಿ ಈಗ ಚೆಸ್‌ ಪಂದ್ಯಾಟದ ಬಗ್ಗೆ ಆಸಕ್ತಿ ಬೆಳೆಯುತ್ತಿದೆ. ಸಾಕಷ್ಟು ಮಂದು ಚೆಸ್‌ ಬಗ್ಗೆ ಮಾತನಾಡುತ್ತಿದ್ದಾರೆ. ಭಾರತದಲ್ಲಿ ಕೂಡಾ ಸಾಕಷ್ಟು ಚೆಸ್‌ ಪ್ರತಿಭೆಗಳು ಇದ್ದಾರೆ. ಈಚೆಗೆ ಪ್ರಜ್ಞಾನಂದ, ಗುಕೇಶ್‌ ಮೊದಲಾದ ಹೆಸರುಗಳು ಈಗ ಹೆಚ್ಚು ಗಮನ ಸೆಳೆಯುತ್ತಿದೆ.  2024 ರ 26 ನೇ ಏಷ್ಯನ್ ಯೂತ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವು  ಮೂರು ಚಿನ್ನ ಮತ್ತು ಒಂದು ಬೆಳ್ಳಿ ಪದಕವನ್ನೂ ಗೆದ್ದಿದೆ. ಅಂದರೆ ಮಕ್ಕಳ ಮಟ್ಟದಲ್ಲೂ ಚೆಸ್‌ ಬೆಳೆಯುತ್ತಿದೆ.…….ಮುಂದೆ ಓದಿ…..

Advertisement

ಚೆಸ್‌ ಆಟ ಅನ್ನೋದು ಒಂದು ಮೋಜಿನ ಮಿದುಳಿನ ವ್ಯಾಯಾಮ. ನಾವು ಮಗುವಿನೊಂದಿಗೆ ಚೆಸ್ ಆಡುವುದರಿಂದ ಅವರನ್ನು ಚುರುಕಾಗಿಸಬಹುದು ಹಾಗೆಯೇ ಸೃಜನಶೀಲರನ್ನಾಗಿ ಕೂಡ ಮಾಡಬಹುದು. ಕೆಲವು ಅಧ್ಯಯನಗಳ ಪ್ರಕಾರ ಚೆಸ್‌ ಆಟವು ಮಕ್ಕಳಲ್ಲಿ ಅವರ ಐಕ್ಯೂ ಮಟ್ಟವನ್ನು ಮತ್ತು ಅವರ ಸೃಜನಶೀಲತೆಯನ್ನು ಹೆಚ್ಚಿಸುತ್ತದೆ ಎಂಬುದು ದೃಢಪಟ್ಟಿದೆ. ವಯಸ್ಸು ಏನೇ ಇರಲಿ, ಚೆಸ್ ಆಡುವುದು ಖಂಡಿತವಾಗಿಯೂ ನಿಮ್ಮ ಸ್ವಾಭಿಮಾನ ಬೆಳೆಸಲು ನೆರವಾಗುತ್ತದೆ. ನೀವು ಆಡುವಾಗ, ಸೋಲು ಗೆಲುವು ಎಲ್ಲವೂ ಆಗಿರುತ್ತದೆ. ವ್ಯಕ್ತಿಗತ ಆಟವಾದ ಕಾರಣ, ನೀವು ಸೋತಾಗ, ನೀವು ಏನು ತಪ್ಪಾಗಿದೆ ಎಂಬುದನ್ನು ವಿಶ್ಲೇಷಿಸಲು ಕುಳಿತುಕೊಳ್ಳಬೇಕು. ಪದೇಪದೆ ಆಡುವುದು, ವಿಶ್ಲೇಷಿಸುವುದು ಚೆಸ್‌ ಬೋರ್ಡ್‌ ಆಚೆಗಿನ ಜಗತ್ತಿಗೆ ನಿಮ್ಮ ಮಾನಸಿಕ ಶಕ್ತಿ ಮತ್ತು ಆತ್ಮ ವಿಶ್ವಾಸದ ಮಟ್ಟವನ್ನು ಹೆಚ್ಚಿಸುತ್ತದೆ.…….ಮುಂದೆ ಓದಿ…..

ಹೀಗಾಗಿ ಚೆಸ್‌ ಈಗ ಜನಪ್ರಿಯವಾಗುತ್ತಿರುವ ಆಟ. ದಕ್ಷಿಣ ಕನ್ನಡ ಜಿಲ್ಲೆಯೂ ಅದಕ್ಕೆ ಹೊರತಾಗಿಲ್ಲ. ದ ಕ ಜಿಲ್ಲೆಯಲ್ಲೂ ಪಂದ್ಯಾಟಗಳು ನಡೆಯುತ್ತದೆ. ಇಲ್ಲಿನ ದ ಕ ಜಿಲ್ಲಾ ಚೆಸ್‌ ಎಸೋಸಿಯೇಶನ್‌ ಅಧ್ಯಕ್ಷ ರಮೇಶ್‌ ಕೋಟೆ ಅವರ ಜೊತೆ ಈಚೆಗೆ ನಡೆಸಿದ ಮಾತುಕತೆಯ  ಭಾಗ ಇಲ್ಲಿದೆ…

ದಕ್ಷಿಣ ಕನ್ನಡ ಜಿಲ್ಲಾ ಚೆಸ್‌ ಎಸೋಸಿಯೇಶನ್ 2019 ರಲ್ಲಿ ಆರಂಭ‌ ರಿಜಿಸ್ಟರ್‌ ಆಗಿದೆ. ಅದಕ್ಕೂ  ಹಿಂದೆ ದ ಕ ಜಿಲ್ಲಾ ಚೆಸ್‌ ಎಸೋಸಿಯೇಶನ್ ಇತ್ತು. ಎಂ ಎಸ್‌ ಗುರುರಾಜ್‌ ಇದ್ದಾಗ ಇಲ್ಲಿ ಚೆಸ್‌ ಎಸೋಸಿಯೇಶನ್ ಬೆಳವಣಿಗೆ ಆಗಿತ್ತು. ರಾಷ್ಟ್ರೀಯ ಪಂದ್ಯಾಟ ಆಗಿತ್ತು, ರಾಷ್ಟ್ರೀಯ ಮಟ್ಟಕ್ಕೂ ಸ್ಫರ್ಧೆ ಮಾಡಿದವರೂ ಇದ್ದರು. ನಂತರ ಗ್ಯಾಪ್‌ ಆಗಿತ್ತು. ಹೀಗಾಗಿ ದ ಕ ಜಿಲ್ಲೆಯಲ್ಲಿ ಒಂದು ಕೊರತೆ ಇತ್ತು. ಇಲ್ಲಿನ ಪ್ರತಿಭೆಗಳಿಗೆ ಅವಕಾಶ ಕಡಿಮೆ ಆಗುತ್ತಿದೆ ಎನ್ನುವುದು ಇತ್ತು. ಇಲ್ಲಿ ಮಕ್ಕಳಿಗೆ ಕೋಚಿಂಗ್‌ ಎಷ್ಟು ಮುಖ್ಯವೋ ಅಷ್ಟೇ  ಭಾಗವಹಿಸುವಿಕೆ ಕೂಡಾ  ಮುಖ್ಯ.
ಮಕ್ಕಳು ಸ್ಫರ್ಧೆಗಳಲ್ಲಿ ಭಾಗವಹಿಸುತ್ತಿದ್ದಂತೆಯೇ, ಅವಕಾಶ ಸಿಗುತ್ತದೆ, ಚೆಸ್ ಬೆಳವಣಿಗೆ ಆಗುತ್ತದೆ. ಹೀಗಾಗಿ ನಮ್ಮ ಹಾಗೆ‌ ಅನೇಕರು ಬೇರೆ ಬೇರೆ ಕಡೆಗೆ ಸ್ಫರ್ಧೆಗೆ ಹೋದಾಗ ದ ಕ ಜಿಲ್ಲೆಯ ಎಸೋಸಿಯೇಶನ್‌ ಬಗ್ಗೆ ಮಾತುಕತೆ  ಆರಂಭವಾಯಿತು. ಅದರ ಫಲಶ್ರುತಿಯೇ ಮತ್ತೆ ದ ಕ ಜಿಲ್ಲಾ ಚೆಸ್‌ ಎಸೋಸಿಯೇಶನ್ ಪುನರಾರಂಭ.
ದ ಕ ಜಿಲ್ಲಾ ಚೆಸ್‌ ಎಸೋಸಿಯೇಶನ್ 2019 ರ ನಂತರ ವಿವಿಧ ಪಂದ್ಯಾಟ ಆಯೋಜನೆ ಮಾಡಿದೆ. ಈಚೆಗೆ ರಾಜ್ಯಮಟ್ಟದ 17 ಕೆಳಗಿನ ಮಕ್ಕಳಿಗೆ ಸ್ಫರ್ಧೆ, ರಾಷ್ಟ್ರಮಟ್ಟದ ಸ್ಫರ್ಧೆ ಆಯೋಜನೆ ಮಾಡಿದೆ.
ದಕ  ಜಿಲ್ಲೆಯಲ್ಲಿ ಚೆಸ್‌ ಆಸಕ್ತರು ಇದ್ದಾರೆ. ಬೆಂಗಳೂರು ಬಿಟ್ಟರೆ ಮಂಗಳೂರು-ಉಡುಪಿ ಯಲ್ಲಿ ಚೆಸ್‌ ಬೆಳವಣಿಗೆ , ಪ್ರೋತ್ಸಾಹ ಇದೆ. ಭಾಗವಹಿಸುವಿಕೆ ಇದ್ದಾಗ ಬೆಳವಣಿಗೆ ಆಗುತ್ತದೆ. ಚೆಸ್ ಹಂಬಲ ಇದ್ದವರು ಇದ್ದಾರೆ. ಪೋಷಕರ ಬೆಂಬಲ ಇಲ್ಲಿ ಅಗತ್ಯ. ದ ಕ ಜಿಲ್ಲೆಯಲ್ಲಿ ಚೆಸ್ ಒಳ್ಳೆಯ ಬೆಳವಣಿಗೆಯಾಗುತ್ತಿದೆ.‌
ಈಗ ದ ಕ ಜಿಲ್ಲೆಯ ಚೆಸ್‌ ಬೆಳವಣಿಗೆ ಗಮನಿಸಿದರೆ, 3 ಜನ ಐಎಂ ಇದ್ದಾರೆ. ಇವರು  ದ ಕ ಜಿಲ್ಲೆಯ ಚೆಸ್‌ ಮುಖಗಳು ಎಂದರೆ ತಪ್ಪಲ್ಲ. ಮುಂದೆ ದ ಕ ಜಿಲ್ಲೆಗೆ ಜಿಎಂ ಕೂಡಾ ಬರಲಿದೆ, ಅದೂ ಬರಬಹುದು ಎನ್ನುವ ಆಶೆ, ಹಾರೈಕೆ ಇದೆ.
ಚೆಸ್‌ನಿಂದ ಲಾಭ  ಇದೆ, ಕಲಿಕೆಗೆ ಪೂರಕವಾಗಿಯೂ ಇದೆ. ಚೆಸ್‌ ಸ್ಫೋಟ್ಸ್ ಕೋಟಾದ ಅಡಿಯಲ್ಲಿ ಬರುತ್ತದೆ. ಹೀಗಾಗಿ ಇದನ್ನೂ ಬಳಸಿಕೊಳ್ಳಬಹುದು. ಸಂಪೂರ್ಣವಾದ ತೊಡಗಿಸಿಕೊಳ್ಳುವಿಕೆ ಇದ್ದರೆ ಉತ್ತಮ ಅವಕಾಶ ಇದೆ.  ಭಾರತವು ಈಗ ಚೆಸ್‌ ಹಬ್‌ ಆಗಿ ಬೆಳೆಯುತ್ತಿದೆ. ಅನೇಕ ಪ್ರತಿಭೆಗಳು ಬೆಳೆಯುತ್ತಿದ್ದಾರೆ. ಚೆಸ್‌ ಪ್ರಿಯರೂ ಹೆಚ್ಚಾಗುತ್ತಿದ್ದಾರೆ.
ದಕ ಜಿಲ್ಲಾ ಚೆಸ್‌ ಎಸೋಸಿಯೇಶನ್ ಕೂಡಾ ಜಿಲ್ಲೆಯ ಚೆಸ್‌ ಬೆಳವಣಿಗೆಗೆ ಕೆಲಸ ಮಾಡುತ್ತಿದೆ. ಸದ್ಯ ಟೂರ್ನಮೆಂಟ್‌ ಮಾಡುತ್ತಿದೆ, ಟೂರ್ನಮೆಂಟ್‌ ಮಾಡಲು ವಿವಿಧ ಅಡೆತಡೆಗಳು ಇದೆ.  ದ ಕ ಜಿಲ್ಲೆಯಲ್ಲಿ ಸಭಾಂಗಣದ ಕೊರತೆ ಇದೆ. ಟೌನ್‌ ಹಾಲ್‌ ಈಗ ನೀಡುತ್ತಿದೆ, ಹೀಗಾಗಿ ಆಯೋಜನೆಗೆ ಅವಕಾಶವಾಗುತ್ತಿದೆ.
ಈಗ ಸ್ಫರ್ಧೆಗೆ ಗ್ರಾಮೀಣ ಭಾಗದಿಂದಲೂ ಸ್ಫರ್ಧಾಳುಗಳು ಬರುತ್ತಾರೆ. ಚೆಸ್‌ ಕೋಚಿಂಗ್‌ ಬಹಳ ಮುಖ್ಯ, ಗ್ರಾಮೀಣ ಭಾಗದಲ್ಲೂ ತುಂಬಾ ಜನ ಇದ್ದಾರೆ. ಆದರೆ ಸ್ವಲ್ಪ  ಮಾಹಿತಿ ಕೊರತೆ ಇದೆ, ನಗರದಲ್ಲಿ ಇದರ ಮಾಹಿತಿ ಇದೆ ಹೀಗಾಗಿ ತುಂಬಾ ಜನ ಬರುತ್ತಾರೆ. ಮುಂದಿನ ದಿನಗಳಲ್ಲಿ ತರಬೇತುದಾರರ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಜುಲೈ ತಿಂಗಳಲ್ಲಿ ಶಿಕ್ಷಣ ಇಲಾಖೆ ಜಂಟಿಯಾಗಿ ಮಾಹಿತಿ ಕಾರ್ಯಾಗಾರ ನಡೆಸಲಾಗುತ್ತಿದೆ.
ಚೆಸ್‌ ಎಸೋಸಿಯೇಶನ್‌ ಮೂಲಕ ಹೆಚ್ಚಿನ ಟೂರ್ನಮೆಂಟ್‌ ಮಾಡುವುದು. ಹೆಚ್ಚಿನ ಮಟ್ಟದ ಟೂರ್ನಮೆಂಟ್‌ ಮಾಡಬೇಕು ಎನ್ನುವುದು ನಮ್ಮ ಗುರಿ ಇದೆ. ಇದನ್ನು ಮಂಗಳೂರು ಮಾತ್ರವಲ್ಲ ಜಿಲ್ಲಾ ಮಟ್ಟ, ತಾಲೂಕು ಮಟ್ಟದಲ್ಲೂ ಆಯೋಜನೆ ಮಾಡುವ ಉದ್ದೇಶ ಇದೆ. ಆಸಕ್ತರು ಮುಂದೆ ಬಂದರೆ ನಾವು ನಡೆಸಲು ಬದ್ಧರಿದ್ದೇವೆ.
ವಿಡಿಯೋ.. ಇಲ್ಲಿದೆ

In a recent Interview with Ramesh Kote, President of the District Chess Association, it is evident that chess is experiencing significant growth within the district. Kote enthusiastically shared that the association has planned multiple tournaments to foster competitive spirit and engagement among players of all ages. His vision is to not only elevate the standard of chess in the area but also to create a vibrant community around the game, encouraging more individuals to participate and enhance their skills.

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಅಡಿಕೆಯ ನಾಡಿನಲ್ಲಿ ಉಪಬೆಳೆಯಾಗಿ ತರಕಾರಿ ಕೃಷಿ ಮಾಡಿದ ಯುವಕ

ಕೃಷಿಕ ಯಶಸ್ವಿಯಾಗಬೇಕಾದರೆ , ಕೃಷಿ ಬೆಳೆಯಬೇಕಾದರೆ,ಉಳಿಯಬೇಕಾದರೆ ತಿಂಗಳಿಗೆ ಒಂದಷ್ಟು ಆದಾಯ ಸಿಗಲೇಬೇಕು. ಮುಖ್ಯ…

3 hours ago

ಅಭಯಾರಣ್ಯದಲ್ಲಿ ರಾತ್ರಿ ವೇಳೆ ವಾಹನಗಳ ಸಂಚಾರ ನಿಷೇಧಕ್ಕೆ ಮನವಿ

ಬಂಡೀಪುರ ಅಭಯಾರಣ್ಯದಲ್ಲಿ ರಾತ್ರಿವೇಳೆ ವಾಹನಗಳ ಸಂಚಾರಕ್ಕೆ ಅವಕಾಶ ನೀಡಬಾರದೆಂದು ಸಂಸತ್ ಸದಸ್ಯ ತೇಜಸ್ವಿ…

4 hours ago

ಪಂಚಗ್ರಹಿ ಯೋಗ ಎಂದರೇನು..? | ಈ ಯೋಗವು ಮಹತ್ವದ್ದಾಗಿದೆ ಏಕೆ.. ?

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

4 hours ago

ಕೃಷಿ ಸಖಿಯರ ಪ್ರಥಮ ಪ್ರಗತಿ ಪರಿಶೀಲನಾ ಸಭೆ | ವಿವಿಧ ತರಕಾರಿ ಬೀಜಗಳ ವಿತರಣೆ | ತರಕಾರಿ ಬೆಳೆಸುವ ವಿಧಾನಗಳ ಬಗ್ಗೆ ಮಾಹಿತಿ |

ಸುಳ್ಯ ತಾಲೂಕು ಪಂಚಾಯತ್ ಮಿನಿ ಸಭಾಂಗಣದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ…

11 hours ago

ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮುಂದಿನ ಎರಡು ದಿನ ಮಳೆ | ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದ ವಿವಿಧೆಡೆ ಇಂದು ಮಳೆಯಾಗಿದೆ. ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ರಾಜಧಾನಿ ಬೆಂಗಳೂರಿನಲ್ಲಿ ಮಳೆ…

15 hours ago

ಹೆಚ್ಚಿದ ತಾಪಮಾನ | ರಾಜ್ಯದ 9 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಯ ಕೆಲಸದ ಅವಧಿ ಬದಲಾವಣೆ ಆದೇಶ

ಏಪ್ರಿಲ್, ಮೇ ತಿಂಗಳಲ್ಲಿ ಹೆಚ್ಚಿದ ತಾಪಮಾನ ಹಿನ್ನೆಲೆಯಲ್ಲಿ 9 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿ…

15 hours ago